ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮರಾಜನಗರ : ಉದ್ಯಮಿ ಮನೆ ಮೇಲೆ ಐಟಿ ದಾಳಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಡಿಸೆಂಬರ್ 17 : ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ವೈ.ಕೆ.ಮೋಳೆ ಗ್ರಾಮದ ಕರಿಕಲ್ಲು ಉದ್ಯಮಿ ನಂಜಶೆಟ್ಟಿರವರ ಮನೆ ಮೇಲೆ ಬುಧವಾರ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ದೂರಿನ ಆಧಾರದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆಯಲ್ಲಿ ಹಲವು ದಾಖಲೆ ಪತ್ರಗಳು ಪತ್ತೆಯಾಗಿವೆ. ನಂಜಶೆಟ್ಟಿ ವೈ.ಕೆ.ಮೋಳೆಯಲ್ಲಿ ಕರಿಕಲ್ಲು ಗಣಿಗಾರಿಕೆ ಮಾಡುತ್ತಿದ್ದು, ಇದರಿಂದ ಅಕ್ರಮವಾಗಿ ಆಸ್ತಿ ಮಾಡಿದ್ದಾರೆ ಎಂದು ದೂರಲಾಗಿತ್ತು. [ಬೆಂಗಳೂರು : ಕಾಂಗ್ರೆಸ್ ಮುಖಂಡನ ಮನೆ ಮೇಲೆ ಐಟಿ ದಾಳಿ]

income tax

ಚಾಮರಾಜನಗರದ ತೆರಕಣಾಂಬಿ, ಯಳಂದೂರು ತಾಲೂಕಿನ ಯರಗಂಬಳ್ಳಿ ಗ್ರಾಮವೂ ಸೇರಿದಂತೆ ಮೂರು ಕರಿಕಲ್ಲು ಕ್ವಾರಿಗಳು ಹಾಗೂ ಇದಕ್ಕೆ ಬಳಕೆಯಾಗುವ ವಾಹನಗಳು, ಸ್ವಂತ ಕಾರು ಸೇರಿದಂತೆ ಹಲವು ವಾಹನಗಳು ನಂಜಶೆಟ್ಟಿ ಅವರ ಬಳಿ ಇವೆ. [ತೆರಿಗೆ ಸಲ್ಲಿಕೆದಾರರು ಇದನ್ನು ಓದಲೇಬೇಕು, ಸಿಎಗಳು ಕೂಡ!]

ನಂಜಶೆಟ್ಟಿ ಅವರು ಹಿಂದೆ ರೇಷ್ಮೆ ಗೂಡನ್ನು ಸಂತೆಮರಹಳ್ಳಿ ಮಾರುಕಟ್ಟೆಯಿಂದ ರೇಷ್ಮೆ ನೂಲು ಬಿಚ್ಚುವ ಸ್ಥಳಕ್ಕೆ ಸೈಕಲ್‍ನಲ್ಲಿ ತರುತ್ತಿದ್ದ ಇವರು ಕೂಲಿ ಕಾರ್ಮಿಕರಾಗಿದ್ದರೆಂಬ ಮಾಹಿತಿಯನ್ನು ಸ್ಥಳೀಯರು ನೀಡಿದ್ದಾರೆ. ಈಗ ಮೈಸೂರು, ಚಾಮರಾಜನಗರ, ಯಳಂದೂರು ಪಟ್ಟಣ ಸೇರಿದಂತೆ ಹಲವೆಡೆ ನಿವೇಶನ, ತೆಂಗಿನ ತೋಟಗಳನ್ನು ಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. [ಕೇವಲ 10 ದಿನದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಪಡೆಯಿರಿ]

money

ಇವರ ಹಿರಿಯ ಸಹೋದರ ಗ್ರಾಮ ಪಂಚಾಯಿತಿ ಸದಸ್ಯ ಮಹಾದೇವಶೆಟ್ಟಿ ಅವರ ಮೂಲಕ ಅಧಿಕಾರಿಗಳು ವಿವಿಧ ಬ್ಯಾಂಕ್‍ಗಳ ಖಾತೆಗಳ ಮಾಹಿತಿಯನ್ನೂ ಪಡೆದಿದ್ದಾರೆ. ತಡರಾತ್ರಿವರೆಗೂ ತನಿಖೆ ಮುಂದುವರೆದಿತ್ತು. ಮನೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

tax
English summary
The Income Tax Department on Wednesday raided the residence of businessman Nanja Shety at Y.K.Mole village of Yelandur taluk, Chamarajanagar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X