ಗುಂಡ್ಲುಪೇಟೆ: ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಮೇ 01: ತೀವ್ರ ಅಸ್ವಸ್ಥಗೊಂಡಿದ್ದ ಗೃಹಿಣಿಯೊಬ್ಬರು ಶಂಕಾಸ್ಪದವಾಗಿ ಸಾವನ್ನಪ್ಪಿದ್ದು, ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಲಾಗಿದೆ ಎಂಬ ದೂರಿನ ಮೇರೆಗೆ ಆಕೆಯ ಪತಿ, ಅತ್ತೆ, ಮಾವನನ್ನು ಬಂಧಿಸಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ನಡೆದಿದೆ.

ಬೇಗೂರು ಗ್ರಾಮದಲ್ಲಿ ಬೇಕರಿ ನಡೆಸುತ್ತಿದ್ದ ಆನಂದ ಎಂಬಾತನ ಪತ್ನಿ ಉಷಾ(24) ಸಾವಿಗೀಡಾದ ಮಹಿಳೆ. ಹಾಸನ ಅರುವಿನಹಳ್ಳಿಯ ಉಷಾಳನ್ನು ಬೇಲೂರು ತಾಲೂಕಿನ ಮಂಚೇನಹಳ್ಳಿ ಗ್ರಾಮದ ಆನಂದನಿಗೆ ಕೊಟ್ಟು ಕಳೆದ ನಾಲ್ಕು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು.

ಮದುವೆ ಬಳಿಕ ಹಾಸನದಿಂದ ಚಾಮರಾಜನಗರ ಜಿಲ್ಲೆಯ ಬೇಗೂರಿಗೆ ಬಂದು ಬೇಕರಿ ತೆರೆದ ಆನಂದ ಅಲ್ಲಿಯೇ ಸಂಸಾರ ಹೂಡಿದ್ದನು. ಈ ದಂಪತಿಗಳಿಗೆ ಒಂದು ವರ್ಷದ ಗಂಡು ಮಗುವಿದೆ.

ಮೃತ ಉಷಾಳ ಮನೆಯವರು ಹೇಳುವಂತೆ ಇತ್ತೀಚೆಗೆ ಆನಂದ ಪತ್ನಿ ಉಷಾಳಿಗೆ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದನಂತೆ. ಆಕೆ ಮನೆಯಲ್ಲಿ ಹಣ ನೀಡುವ ಸ್ಥಿತಿಯಲ್ಲಿ ಇಲ್ಲ ಎಂದು ತವರಿನ ಮನೆಯವರ ಕಷ್ಟವನ್ನು ವಿವರಿಸಿದ್ದರೂ ಮಾತು ಕೇಳದ ಆನಂದ ಆಕೆಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದನಂತೆ. ಮನೆಯಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ಜಗಳಗಳು ನಡೆಯುತ್ತಿತ್ತು.

Chamarajanagar : A housewife killed Dowry Harassment case,Begur Gundlupet.

ಇದೀಗ ಉಷಾಳ ಪೋಷಕರು ಮೃತ ಉಷಾಳ ಪತಿ ಆನಂದ, ಅತ್ತೆ ಶಿವಮ್ಮ, ಮಾವ ನಂಜೇಗೌಡ, ಅತ್ತಿಗೆ ಲಲಿತ, ಭಾವ ಮಲ್ಲಿಕಾರ್ಜುನ ವಿರುದ್ಧ ಗುಂಡ್ಲುಪೇಟೆ ತಾಲೂಕಿನ ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರನ್ನು ಬಂಧಿಸಲಾಗಿದೆ. ಲಲಿತ ಮತ್ತು ಮಲ್ಲಿಕಾರ್ಜುನ ತಲೆ ಮರೆಸಿಕೊಂಡಿದ್ದು ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ.

ವಿದ್ಯುತ್ ಸ್ಪರ್ಶಕ್ಕೆ ಯುವತಿ ಬಲಿ: ಮನೆಯ ಮೇಲೆ ಬಟ್ಟೆ ಒಣ ಹಾಕಲು ಹೋದ ಯುವತಿಗೆ ವಿದ್ಯುತ್ ಸರ್ಶಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಾಮರಾಜನಗರದ ಉಪ್ಪಾರ ಬಡಾವಣೆಯ ಗರಡಿ ಬೀದಿಯಲ್ಲಿ ನಡೆದಿದೆ.

ಜ್ಯೋತಿ ಎಂಬ ಯುವತಿಯೇ ಮೃತಪಟ್ಟ ದುರ್ದೈವಿ. ಗರಡಿಬೀದಿ ನಿವಾಸಿ ಮಹದೇವಸ್ವಾಮಿ ಅವರ ಮಗಳಾದ ಜ್ಯೋತಿ ಎಂದಿನಂತೆ ಬಟ್ಟೆ ಒಗೆದು ಅದನ್ನು ಒಣ ಹಾಕಲೆಂದು ಮನೆಯ ಟೆರೇಸಿಗೆ ಮಹದೇವಮ್ಮ ಎಂಬುವರೊಂದಿಗೆ ತೆರಳಿದಾಗ ಮನೆ ಮುಂದೆ ಜೋತು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಜತೆಗಿದ್ದ ಮಹದೇವಮ್ಮ ಅವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೆ.ಆರ್.ಆಸ್ಪತೆಗೆ ಸಾಗಿಸಲಾಗಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಶಾಸಕ ಸಿ.ಪುಟ್ಟರಂಗಶೆಟ್ಟಿ ಆಗಮಿಸಿ, ಮೃತ ಕುಂಟುಂಬದವರಿಗೆ ಸಾಂತ್ವನ ಹೇಳಿದರು. ಪಟ್ಟಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chamarajanagar : A housewife killed in Begur village, Gudlupet taluk. the deceased was 24 year old Usha wife of Anand who is running bakery shop in the village. Usha's family alleged lodged a Dowry Harassment case suspected complaint against Anand and his mother.
Please Wait while comments are loading...