ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಿಗೂಢ ಸಾವು
ಚಾಮರಾಜನಗರ, ಅಕ್ಟೋಬರ್ 28 : ಗೃಹಬಳಕೆಯ ಸಿಲಿಂಡರ್ ತರಲು ಹೋದ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶವವಾಗಿ ಪತ್ತೆಯಾಗಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ. ಇದು ಕೊಲೆ ಎಂದು ಆರೋಪಿಸಲಾಗಿದ್ದು, ತೆರಕಣಾಂಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಿದ್ದರಾಜನಾಯ್ಕ (45) ಮೃತಪಟ್ಟವರು. ಅಕ್ಟೋಬರ್ 26ರಂದು ಮನೆಯಿಂದ ಹೊರಟ ಸಿದ್ದರಾಜನಾಯ್ಕ ಅವರ ಶವವು ಸ್ಕಂದಗಿರಿ ಪಾರ್ವತಾಂಬಾ ಬೆಟ್ಟದ ಸಮೀಪದ ಗದ್ದುಗಲ್ ದೇವಸ್ಥಾನದ ಬಳಿ ಪತ್ತೆಯಾಗಿದೆ. [ಅಜ್ಜಾವರ ಗ್ರಾಮ ಪಂಚಾಯತಿಯಲ್ಲಿ ಕಳ್ಳತನ]

ತೆರಕಣಾಂಬಿಗೆ ಗೃಹಬಳಕೆಯ ಸಿಲಿಂಡರ್ ಕೊಳ್ಳಲು ಮನೆಯಿಂದ ಬೈಕ್‌ನಲ್ಲಿ ತೆರಳಿದ್ದ ಸಿದ್ದರಾಜನಾಯ್ಕ ಸಂಜೆಯಾದರೂ ಹಿಂತಿರುಗಿರಲಿಲ್ಲ. ಮೊಬೈಲ್‌ಗೆ ಕರೆ ಮಾಡಿದರೆ ಆತ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ಇದರಿಂದ ಆತಂಕಕ್ಕೊಳಗಾದ ಕುಟುಂಬದವರು ತೆರಕಣಾಂಬಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. [ಪಂಚಾಯಿತಿಗಳಲ್ಲಿ ರಾಷ್ಟ್ರಗೀತೆ, ನಾಡಗೀತೆ ಹಾಡುವುದು ಕಡ್ಡಾಯ]
ಒಂದೆರಡು ದಿನಗಳು ಹುಡುಕಾಟ ನಡೆಸಿದ ನಂತರ ಪ್ರಕರಣ ದಾಖಲಿಸುವುದಾಗಿ ಪೊಲೀಸರು ತಿಳಿಸಿದ್ದರು. ಪೊಲೀಸ್ ಠಾಣೆಯಿಂದ ಸಿದ್ದರಾಜನಾಯ್ಕ ತಾಯಿ ಪುಟ್ಟಬಸಮ್ಮ, ತಮ್ಮ ಶ್ರೀನಿವಾಸ ಅವರು ಪಾರ್ವತಿಬೆಟ್ಟದ ಮಾರ್ಗವಾಗಿ ಮನೆಗೆ ಹಿಂತಿರುಗುವಾಗ ಗದ್ದುಗಲ್ ದೇವಸ್ಥಾನದ ಬಳಿ ಸಿದ್ದರಾಜನಾಯ್ಕ ಬೈಕ್ ನೋಡಿದರು. [ಪಂಚಾಯಿತಿ ಫಲಿತಾಂಶದಲ್ಲಿ ಹಿಂಗೂ ಆಯ್ತು ನೋಡಿ!]
ಸುತ್ತಲೂ ಹುಡುಕಾಟ ನಡೆಸಿದಾಗ ಮೃತ ದೇಹ ಪತ್ತೆಯಾಗಿದೆ. ಸಿದ್ದರಾಜನಾಯ್ಕನನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ತೆರಕಣಾಂಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications