ವರದಕ್ಷಿಣೆಗಾಗಿ ಪತ್ನಿ ಜೀವ ತೆಗೆದ ಸರ್ಕಾರಿ ಅಧಿಕಾರಿಗೆ ಜೀವಾವಧಿ ಶಿಕ್ಷೆ: ಕೋರ್ಟ್
ಚಾಮರಾಜನಗರ, ಆಗಸ್ಟ್ 20: ವರದಕ್ಷಿಣೆ ಕಿರಿಕುಳ ಇಂದಿನ ಸುಶಿಕ್ಷಿತ ಸಮಾಜದಲ್ಲೂ ನಡೆಯುತ್ತಿವೆ. ಇದರ ಪಿಡುಗಿನಿಂದ ಅನೇಕ ಗೃಹಿಣಿಯರ ಜೀವಕ್ಕೆ ಹಾನಿಯಾದ ಘಟನೆ ಆಗಾಗ ಮರುಕಳಿಸುತ್ತಿವೆ. ಸದ್ಯ ಚಾಮರಾಜನಗರ ಜಿಲ್ಲೆ ವ್ಯಾಪ್ತಿಯಲ್ಲೂ ಜರುಗಿದ್ದು, ಪತ್ನಿಯನ್ನು ಕೊಂದು ಇದು ಆತ್ಮಹತ್ಯೆ ಎಂದು ನಾಟವಾಡಿದ್ದ ವ್ಯಕ್ತಿಯ ಬಣ್ಣ ಬಯಲಾಗಿದೆ. ನ್ಯಾಯಾಲಯವೇ ಆತನಿಗೆ ಜೀವಾವಧಿ ಶಿಕ್ಷೆ ನೀಡಿದೆ.
ಹೌದು, ವರದಕ್ಷಿಣೆಗಾಗಿ ಪತ್ನಿ ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ (ಪಿಡಿಒ) ಕೊಳ್ಳೇಗಾಲ ಅಪರ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸರ್ಕಾರಿ ಕೆಲಸದಲ್ಲಿದ್ದುಕೊಂಡು ಈ ಹೆಂಡತಿಗೆ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಎಂದು ಸಾಬೀತಾಗಿದೆ.

ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ್ ಶ್ಯಾಂ ಕಾಂಬಳೆ ಎಂಬಾತ ಅಪರಾಧಿಸ್ಥಾನದಲ್ಲಿಆನೆ. ಈತ ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನವನು. ಈತ ಚಾಮರಾಜನಗರ ಜಿಲ್ಲೆಯಲ್ಲಿ ಪಿಡಿಒ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಜಮಖಂಡಿ ತಾಲೂಕಿನ ವಿದ್ಯಾಶ್ರೀ ಎಂಬವರನ್ನು ಮದುವೆಯಾಗಿದ್ದ ಈತ ವರದಕ್ಷಿಣೆಗಾಗಿ ಪತ್ನಿಯನ್ನು ಆಗಾಗ್ಗೆ ಪೀಡಿಸುತ್ತಿದ್ದ, ಹಲ್ಲೆ ಮಾಡುತ್ತಿದೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
2022ರಲ್ಲಿ ನಡೆದ ಕೊಲೆ ಪ್ರಕರಣ
ಜಿಲ್ಲೆಯ ಕೊಳ್ಳೇಗಾಲ ವ್ಯಾಪ್ತಿಯ ಬಸ್ತಿಪುರದಲ್ಲಿ ವಾಸವಿದ್ದ. ಮದುವೆ ಆದ ಹೊಸತರಲ್ಲಿ ಚೆನ್ನಾಗಿದ್ದ ಈತ ಬರು ಬರುತ್ತಾ ಹೆಂಡತಿ ಪೀಡಿಸುತ್ತಿದ್ದ. ವರದಕ್ಷಿಣೆ ತರುವಂತೆ ಹಲ್ಲೆ ಮಾಡಿದ್ದ. ದಂಪತಿ 2022ರ ಮಾರ್ಚ್ 14 ರಂದು ವರದಕ್ಷಿಣೆಗಾಗಿ ಪೀಡಿಸಿ ಕುತ್ತಿಗೆ ಹಿಸುಕಿ ಕೊಂದು ನಂತರ ನಾಟವಾಡಿದ್ದ. ಪತ್ನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಥೆ ಕಟ್ಟಿ ಎಲ್ಲರನ್ನು ನಂಬಿಸಿದ್ದ. ಆದರೆ ಇದೆಲ್ಲ ನಂಬದ ಮೃತರ ಪೋಷಕರು ಪಾಲಕರು ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ದೂರು ನೀಡಿದ್ದರು.
ಪೋಷಕರ ದೂರಿನಂತೆ ವಿಚಾರ ನಡೆಸಿದ ಬಳಿಕ ಇದು ಕೊಲೆ ಎಂದು ಸಾಬೀತಾಯಿತು. ಈ ಪ್ರಕರಣ ವಿಚಾರಣ ನಡೆಸಿದ ಕೊಳ್ಳೇಗಾಲದ ಅಪರ ಜಿಲ್ಲಾ ಹಾಗೂ ಸೆಷನ್ಸ್ ನ್ಯಾ. ಟಿ.ಸಿ.ಶ್ರೀಕಾಂತ್ ಏಕಸದಸ್ಯ ಪೀಠವು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.












Click it and Unblock the Notifications