ಹಸು ಕಡಿಯುವ ಹೇಳಿಕೆಯ ಕಾಂಗ್ರೆಸ್ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಗರಂ: ಹೇಳಿದ್ದೇನು?
ಬೆಂಗಳೂರು, ಜೂನ್ 05: ರಾಜ್ಯ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರ ಹಸು ಕಡಿಯುವ ಹೇಳಿಕೆ ಸದ್ಯ ತಣ್ಣಗಾಗುವಂತೆ ಕಾಣುತ್ತಿಲ್ಲ. ಇದು ಧರ್ಮ ದಂಗಲ್‌ಗೆ, ಬಿಜೆಪಿ ಕಾಂಗ್ರೆಸ್ ನಾಯಕರ ವಾಕ್‌ಯುದ್ಧಕ್ಕೆ ಕಾರಣವಾಗುತ್ತಿದೆ. ಇದೀಗ ಸಚಿವ ಹೇಳಿಕೆ ಚಿಂತಕ ವಾಗ್ಮಿ ಚಕ್ರವರ್ತಿ ಸೂಲಿಬಲೆ ತಿರುಗೇಟು ನೀಡಿದ್ದಾರೆ.
ಎಮ್ಮೆ, ಕೋಣ ಕಡಿದು ಹಾಕುವುದಾದರೆ ಹಸುಗಳನ್ನು ಏಕೆ ಕಡಿಯಬಾರದು? ಎಂದು ಪಶುಗಳ ರಕ್ಷಣೆಗೆ ನಿಲ್ಲಬೇಕಾದ ಸಚಿವರೇ ಸ್ವತಃ ಹೇಳಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಹುಟ್ಟುಹಾಕುತ್ತಿದೆ. ಪಶುಸಂಗೋಪನಾ ಸಚಿವರು ಅಂದರೆ ಪಶುಗಳನ್ನು ಕಾಪಾಡುವವರು, ಪಶು ಸಂಪತ್ತು ಆಸ್ತಿ ಕಾಪಾಡುವುದು. ಆದರೆ ದುರಂತವೆಂದರೆ ಸಚಿವರೇ ಹಸು ಕಡಿಯುವುದಕ್ಕೆ ಅನೇಕ ಕಾರಣಗಳನ್ನು ಹುಡುಕುತ್ತಿದ್ದಾರೆ ಅವರು ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ನಡುವಳಿಕೆ ನೋಡಿದರೆ ಸಿದ್ದರಾಮಯ್ಯನವರು ಹಿಟ್ಲರ್ ಸರ್ಕಾರ ತಂದಿದ್ದಾರೆ ಎಂದನಿಸುತ್ತದೆ. ಇದೆಲ್ಲ ಬಿಟ್ಟು ಕಾಂಗ್ರೆಸ್ ಸರ್ಕಾರ ಮೊದಲು 200 ಯೂನಿಟ್ ವಿದ್ಯುತ್ ಕೊಡಲಿ ಎಂದಿದ್ದಾರೆ ಎಂದು ಟಿವಿ ನೈನ್ ವರದಿ ಮಾಡಿದೆ,
ಲಿಂಗಾಯರಿಗೆ-ಹಿಂದುಗಳಿಗೆ ಅವಮಾನ
ಸಿದ್ದರಾಮಯ್ಯನವರು ಯಾವ ಷರತ್ತು ವಿಧಿಸದೇ ವಿದ್ಯುತ್ ಕೊಡುವ ಕೆಲಸ ಮಾಡಲಿ. ಇದರ ಹೊರತು ಸರ್ಕಾರದಿಂದ ಬೇರೆ ಏನು ನಿರೀಕ್ಷೆ ಸಾಧ್ಯವಿಲ್ಲ. ಮುಸಲ್ಮಾನರ ಶೇಕಡಾ 80ರಷ್ಟು ಮತ ಪಡೆದು ಅಧಿಕಾರ ಹಿಡಿದಿರುವ ಕಾಂಗ್ರೆಸ್ ಸರ್ಕಾರ ಇದು ಲಿಂಗಾಯತ ಸಮುದಾಯಕ್ಕೂ ಅವಮಾನ ಮಾಡುತ್ತಿದೆ ಎಂದರು.
ಸಚಿವ ಕೆ. ವೆಂಕಟೇಶ್ ಅವರು ಗೋ ಹತ್ಯೆ ನಿಷೇಧ ಕಾಯ್ದೆ ಬಗ್ಗೆ ಮಾತನಾಡಿದ್ದಾರೆ. ಸರ್ಕಾರ ಕಾಯ್ದೆ ವಾಪಸ್ ಮಾಡಿದರೆ ನಾಡಿನ ಹಿಂದೂಗಳಿಗೂ ಅವಮಾನ ಮಾಡಿದ್ದಂತೆ. ಜನರು ಹಿಟ್ಲರ್ ಸರ್ಕಾರ ನಡೆ ಸೂಕ್ಷ್ಮವಾಗಿ ಗಮನಿಸಿದರೆ ಇದೆಲ್ಲವು ಅರ್ಥವಾಗುತ್ತದೆ. ಪ್ರತಿಭಟನಾತ್ಮಕವಾಗಿ ಸಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವುದಕ್ಕೆ ಅವಕಾಶ ಇಲ್ಲದ ವಾತಾವರಣ ನಿರ್ಮಾಣವಾಗುತ್ತಿದೆ. ಸರ್ಕಾರದ ವಿರುದ್ಧ ಮಾತನಾಡಿದರೆ ರಸ್ತೆಯಲ್ಲೇ ಅವರ ಮೇಲೆ ಹಲ್ಲೆ ನಡೆಯುತ್ತಿದೆ. ನಂಜನಗೂಡಿನಲ್ಲಿ ಭಾರತ ಮಾತಕೀ ಜೈ ಎಂದು ಹೇಳಿದ್ದಕ್ಕೆ ಚೂರಿ ಇರಿಯಲಾಗಿದೆ ಎಂದು ಅವರು ವಿವರಿಸಿದರು.

ಸಚಿವರ ಹೇಳಿಕೆಗೆ ಮಾಜಿ ಸಿಎಂ ಬೊಮ್ಮಾಯಿ ಕಿಡಿ
ಸಚಿವ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಗೋವುಗಳನ್ನು ಏಕೆ ಕಡಿಯಬಾರದು ಎಂದು ಪ್ರಶ್ನಿಸಿರುವ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರ ಹೇಳಿಕೆ ಆಶ್ಚರ್ಯ ತಂದಿದ್ದು, ಅವರ ಹೇಳಿಕೆ ಖಂಡನೀಯ.
ಗೋವಿನೊಂದಿಗೆ ಭಾರತೀಯರಾದ ನಾವು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ತಾಯಿ ಸ್ಥಾನದಲ್ಲಿ ಗೋವನ್ನು ಪೂಜಿಸುತ್ತೇವೆ. ಸಚಿವರು ಯಾರ ಓಲೈಕೆಗಾಗಿ ಈ ರೀತಿಯ ಹೇಳಿಕೆ ನೀಡಿದ್ದಾರೆ?, ತಮಗೆ ನೀಡಿರುವ ಖಾತೆಯನ್ನು ಬದಲಾಯಿಸಲಿ ಎಂದೊ ಇಲ್ಲ ಹೈ ಕಮಾಂಡ್ ಮೆಚ್ಚಿಸಲಿಕ್ಕೋ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಗೋಹತ್ಯೆ ನಿಷೇಧ ಪ್ರಥಮವಾಗಿ ಪ್ರತಿಪಾದಿಸಿದ್ದು ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿಯವರು. ಪೂಜ್ಯ ಮಹಾತ್ಮಾ ಗಾಂಧಿ ಪ್ರತಿಪಾದಿಸಿದ ಗೋಹತ್ಯೆ ನಿಷೇಧವನ್ನು 1960 ರ ದಶಕದಲ್ಲಿ ಹಲವಾರು ರಾಜ್ಯಗಳಲ್ಲಿ ಕಾನೂನು ತರಲಾಗಿದೆ. ಸಚಿವರ ಹೇಳಿಕೆಯಿಂದ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಗೋವುಗಳ ಕಳ್ಳ ಸಾಗಾಣಿಕೆ, ಸಾಮೂಹಿಕ ಗೋ ಹತ್ಯೆ ಮಾಡುವ ಕಾನೂನು ಬಾಹಿರ ಕಾರ್ಖಾನೆಗಳು ತಲೆ ಎತ್ತಲಿವೆ ಎಂದು ಅವರು ಹೇಳಿದರು.












Click it and Unblock the Notifications