ಬೀದರ್: ಅತಿವೃಷ್ಠಿ ಪ್ರದೇಶ ವೀಕ್ಷಿಸಿದ ಕೇಂದ್ರ ತಂಡ

Posted By:
Subscribe to Oneindia Kannada

ಬೀದರ್, ಡಿಸೆಂಬರ್,15: ಜಿಲ್ಲೆಯಲ್ಲಿ ಮೂರು ತಿಂಗಳು ಹಿಂದೆ ನಿರಂತರ ಸುರಿದ ಮಳೆಯಿಂದಾಗಿ ಸಂಭವಿಸಿದ್ದ ಅತಿವೃಷ್ಠಿ ಪೀಡಿತ ಪ್ರದೇಶಗಳ ವೀಕ್ಷಣೆಗಾಗಿ ಡಿಸೆಂಬರ್ 15ರಂದು ನಗರಕ್ಕೆ ಆಗಮಿಸಿದ್ದ ಕೇಂದ್ರ ತಂಡದ ಸದಸ್ಯರು ಡಿಸೆಂಬರ್ 15 ರಂದು ಹುಮನಾಬಾದ್ ತಾಲೂಕಿನ ಹಳ್ಳಿಖೇಡ ಬಿ ನಲ್ಲಿರುವ ಬ್ಯಾರೇಜ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರವಾಹಕ್ಕೆ ಸಿಕ್ಕು ಒಡೆದ ಔರಾದ ತಾಲೂಕಿನ ಆಲೂರು ಬೇಲೂರ ಕೆರೆಗೆ ಮತ್ತು ಭಾಲ್ಕಿ ತಾಲೂಕಿನ ಅಂಬೆಸಾಂಗ್ವಿ ಕೆರೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.[ಬೀದರ್, ಕಲಬುರಗಿಯಲ್ಲಿ ನಿರಂತರ ಮಳೆ, ಜನತೆ ತತ್ತರ]

Central study team observed rain affected area

ಬೀದರ್ ನಗರದ ಅತಿಥಿ ಗೃಹದಲ್ಲಿ ಕೇಂದ್ರ ಅಧ್ಯಯನ ತಂಡದ ಸದಸ್ಯರು ಜಿಲ್ಲಾಧಿಕಾರಿಗಳೊಂದಿಗೆ ಅತಿವೃಷ್ಟಿಯಿಂದಾದ ಹಾನಿಯ ಕುರಿತು ಮಾಹಿತಿ ಪಡೆದು ಚರ್ಚೆ ನಡೆಸಿದರು.

ತಂಡದಲ್ಲಿ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಬೀನಾ ಪ್ರಸಾದ್, ಉಪ ಕಾರ್ಯದರ್ಶಿ ದೀನಾ ಗುಹಾ, ಎಸ್ ಎಮ್ ಗೊಹಲತ್ಕರ ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Central study team observed rain affected area Continuous heavy rains took place three months ago View more rain affected areas
Please Wait while comments are loading...