Moong Dal: ರೈತರಿಗೆ ಖುಷಿ ಸುದ್ದಿ: ಹೆಚ್ಚುವರಿ 'ಹೆಸರು' ಖರೀದಿಗೆ ಆದೇಶ
ಹುಬ್ಬಳ್ಳಿ, ನವೆಂಬರ್ 06: ಕರ್ನಾಟಕದ ರೈತರು ಉತ್ಪಾದಿಸುವ ಹಿಂಗಾರು ವಿವಿಧ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿದ್ದ ಕೇಂದ್ರ ಬಿಜೆಪಿ ಸರ್ಕಾರ ಇದೀಗ ರೈತರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ರೈತರಿಂದ ಹೆಚ್ಚುವರಿ 'ಹೆಸರು ಕಾಳು' ಖರೀದಿಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿಯವರು ಮಾಹಿತಿ ನೀಡಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಬುಧವಾರ ಮಾಹಿತಿ ನೀಡಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ 22215 ಮೆಟ್ರಿಕ್ ಟನ್ ಹೆಸರುಕಾಳನ್ನು ಬೆಂಬಲ ಬೆಲೆ ಅಡಿಯಲ್ಲಿ ಖರೀದಿಸಲಾಗಿದೆ. ಕರ್ನಾಟಕದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತರ ಹೆಸರು ಕಾಳು ಬೆಳೆ ರೈತರ ಕೈ ಸೇರಿದೆ. ಈ ಬಾರಿ ಉತ್ತಮ ಬೆಳೆ ಬೆಳೆಯಲಾಗಿದೆ. ಆದ್ದರಿಂದ ಕೇಂದ್ರವು ಹೆಚ್ಚುವರಿಯಾಗಿ ಸುಮಾರು 16,105 ಸಾವಿರ ಮೆಟ್ರಿಕ್ ಟನ್ ಹೆಸರು ಖರೀದಿಸಲು ಮುಂದಾಗಿದೆ. ಇಷ್ಟು ಹೆಸರನ್ನು ಸರ್ಕಾರ ಬೆಂಬಲ ಬೆಲೆ (MSP) ಅಡಿಯಲ್ಲಿ ಖರೀದಿಸಲಿದೆ ಎಂದು ತಿಳಿಸಿದರು.

ಕೇಂದ್ರ ಕೃಷಿ ಸಚಿವರಿಗೆ ಪ್ರಹ್ಲಾದ್ ಜೋಶಿ ಮನವಿ
ಮೊದಲು ಮತ್ತು ಇಂದಿನ ಖರೀದಿ ಸೇರಿ ಒಟ್ಟು 38.320 ಮೆಟ್ರಿಕ್ ಟನ್ ಹೆಸರು ಕಾಳು ಖರೀದಿ ಕೇಂದ್ರ ಒಪ್ಪಿಗೆ ನೀಡಿದಂತಾಗಿದೆ. ರಾಜ್ಯದ ರೈತರ ಹಿತದೃಷ್ಟಿಯಿಂದ ಇತ್ತೀಚೆಗೆ ಹೆಸರು ಖರೀದಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕೇಂದ್ರ ಕೃಷಿ ಸಚಿವರಿಗೆ ಮನವಿ ಮಾಡಿಕೊಂಡಿದ್ದರು. ಅದರ ಬೆನ್ನಲ್ಲೆ ಕೇಂದ್ರ ಹೆಸರು ಖರೀದಿಗೆ ಮುಂದಾಗಿದೆ.
ಹೆಸರುಕಾಳು ಖರೀದಿ ಪ್ರಮಾಣ ಎಷ್ಟು ಪ್ರಮಾಣದಲ್ಲಿ ರಾಜ್ಯದಿಂದ ಒಟ್ಟು 22215 ಮೆಟ್ರಿಕ್ ಟನ್ ಹೆಸರುಕಾಳು ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಲಾಗಿದೆ. ಹೆಚ್ಚುವರಿಯಾಗಿ ರೈತರು ಬೆಳೆದಿರುವ ಸುಮಾರು 16105 ಮೆಟ್ರಿಕ್‌ಟನ್ ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
ಕರ್ನಾಟಕದಲ್ಲಿ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಲಾಗುವ ಹೆಸರುಕಾಳಿಗೆ ಎಫ್ ಎ ಕ್ಯೂ ಗುಣಮಟ್ಟದ ಕೇಂದ್ರದಲ್ಲಿ ಕೇಂದ್ರ ಸಂಬಂಧಿತ ಸಂಸ್ಥೆಗಳ ಖರೀದಿ ಪ್ರಕ್ರಿಯೆ ಇರುತ್ತದೆ.

ಭಾರತ್ ಅಕ್ಕಿ-ಗೋಧಿ ಹಿಟ್ಟು ಮಾರಾಟಕ್ಕೆ ಜೋಶಿ ಚಾಲನೆ
ನೆನ್ನೆ ನವೆಂಬರ್ 5ರಂದು ಮಂಗಳವಾರ ದೆಹಲಿಯಲ್ಲಿ ಪ್ರಹ್ಲಾದ್ ಜೋಶಿಯವರು ಭಾರತ್ ಅಕ್ಕಿ ಹಾಗೂ ಗೋಧಿ ಹಿಟ್ಟ ಪ್ಯಾಕೇಟ್ ಅನ್ನು ಚಿಲ್ಲರೆ ಮಾರಾಟ ಮಾಡುವ ಮೊಬೈಲ್ ವಾಹನಗಳಿಗೆ ಚಾಲನೆ ನೀಡಿದ್ದಾರೆ. ಬೆಲೆಯಲ್ಲಿ ಸ್ಥಿರತೆ, ಗ್ರಾಹಕರಿಗೆ ಎಲ್ಲ ಕಡೆಗಳಲ್ಲಿ ಸೂಕ್ತ ಬೆಲೆಗೆ ಆಹಾರ ಪದಾರ್ಥಗಳ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಭಾರತ್ ಅಕ್ಕಿ ಮಾರಾಟದ ಎರಡನೇ ಹಂತಕ್ಕೆ ಚಾಲನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications