ಪ್ರವಾಹದಂತೆ ರಾಜಧಾನಿಗೆ ನುಗ್ಗಿ ಬರುತ್ತಿರುವ ಜನಸಾಗರ

ಮೈಸೂರು, ಜ.24: ಜನಸಂಖ್ಯೆ ಲೆಕ್ಕಾಚಾರದಲ್ಲಿ ರಾಜ್ಯದಲ್ಲಿ ಬೆಂಗಳೂರೇ ಮುಂದು, ಬೆಳಗಾವಿ ದ್ವಿತೀಯ ಸ್ಥಾನಕ್ಕೆ ಏರಿದೆ! ಜನಸಂಖ್ಯೆಯಲ್ಲಿ ರಾಜ್ಯದ ಮೊದಲ ಮೂರು ನಗರಗಳು ಹೀಗಿವೆ: ಬೆಂಗಳೂರು, ಬೆಳಗಾವಿ ಮತ್ತು ಮೈಸೂರು ಎಂದು ಜನಸಂಖ್ಯೆ ನಿರ್ದೇಶನಾಲಯದ ಉಪನಿರ್ದೇಶಕರಾದ ಡಿ ಹೆಲೆನ್ ಪ್ರೇಮಕುಮಾರಿ ತಿಳಿಸಿದ್ದಾರೆ.

Census of India 2011 ಪ್ರಕಾರ ಮೂರು ಮಹಾನಗರಗಳ ಜನಸಂಖ್ಯೆ ಇಂತಿದೆ: ಬೆಂಗಳೂರು - 96,21,551, ಬೆಳಗಾವಿ - 47,79,661, ಮೈಸೂರು -30,01,127 ಮತ್ತು ಕೊಡಗು - 5,54,519 ಕೊನೆಯ ಸ್ಥಾನದಲ್ಲಿದೆ. ( ಮುಂದಿನ ಲೋಕ ಚುನಾವಣೆಯಲ್ಲಿ ಇವರೇ ನಿರ್ಣಾಯಕರು! )

ಜನಸಂಖ್ಯೆ ಹೆಚ್ಚಳದಲ್ಲಿ ಶರವೇಗದಲ್ಲಿರುವ ಬೆಂಗಳೂರು

Census- 2011: Belgaum highly populated after Bangalore Kodagu stands last in karnataka

ಅಂದಹಾಗೆ ಇಡೀ ರಾಜ್ಯದಲ್ಲಿ 6,10,95,297 ಮಂದಿಯಿದ್ದಾರೆ. ರಾಜ್ಯದಲ್ಲಿ ಜನಸಂಖ್ಯೆ ಕಳೆದ ದಶಕದಲ್ಲಿ ಶೇ. 15.60ರಷ್ಟು ಹೆಚ್ಚಾಗಿದೆ. 1991ರ ಸೆನ್ಸಸ್ ಗೆ ಹೋಲಿಸಿದಲ್ಲಿ ಬೆಂಗಳೂರಿನ ಜನಸಂಖ್ಯೆ ಶೇ. 47.18 ಷ್ಟು ಏರಿದೆ. ಇದಕ್ಕೆ ಪ್ರವಾಹದಂತೆ ರಾಜಧಾನಿಯತ್ತ ನುಗ್ಗಿ ಬರುತ್ತಿರುವ ಜನಸಾಗರವೇ ಕಾರಣವಾಗಿದೆ. ( ವಿಶ್ವ ರ‍್ಯಾಂಕಿಂಗ್- ಭಾರತದಲ್ಲಿಯೇ ಗುಲಾಮರು ಜಾಸ್ತಿ )

ಚಿಕ್ಕಮಗಳೂರಿನಲ್ಲಿ ಜನಸಂಖ್ಯೆ ವೃದ್ಧಿಸುತ್ತಿಲ್ಲ
ಬೆಂಗಳೂರಿನ ನಂತರ ಜನಸಂಖ್ಯೆಯಲ್ಲಿ ಏರಿಕೆ ಕಾಣುತ್ತಿರುವ ಜಿಲ್ಲೆಗಳೆಂದರೆ ಯಾದಗೀರ್ (22.89%) ಮತ್ತು ಬಳ್ಳಾರಿ (20.99%). ಕುತೂಹಲದ ಸಂಗತಿಯೆಂದರೆ ಚಿಕ್ಕಮಗಳೂರು ಶೇ. - 0.26ರಷ್ಟು ಕಡಿಮೆ ಜನಸಂಖ್ಯೆಯನ್ನು ದಾಖಲಿಸಿದೆ! ಇದರರ್ಥ ಚಿಕ್ಕಮಗಳೂರಿನಿಂದ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಜನ ಕಡಿಮೆಯಾಗುತ್ತಿದ್ದಾರೆ.

ಪುರುಷ ಮತ್ತು ಮಹಿಳೆ ಜನಸಂಖ್ಯೆಯನ್ನು ತುಲನೆ ಮಾಡಿದಾಗ ಲಿಂಗಾನುಪಾತ ಸಂಖ್ಯೆ 965ರಷ್ಟಿದ್ದುದ್ದು 973ಕ್ಕೆ ಏರಿದೆ. ಅದೇ ಬೆಂಗಳೂರಿನಲ್ಲಿ ಲಿಂಗಾನುಪಾತ 916ಕ್ಕೆ ಕುಸಿದಿದೆ. ಇದು ನಗರೀಕರಣದ ಪರಿಣಾಮ. ( ಕೌನ್ಸಿಲರ್‌ ಗೆ ಮೂರು ಮಕ್ಕಳು; ಸ್ಥಾನಮಾನ ಹೋಯ್ತು!)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+