ಕೌನ್ಸಿಲರ್‌ ಗೆ ಮೂರು ಮಕ್ಕಳು; ಸ್ಥಾನಮಾನ ಹೋಯ್ತು!

Posted By:
Subscribe to Oneindia Kannada
 Gujarat Rajkot BJP councillor Sanjay dhava father of 3 resigns,
ಅಹಮದಾಬಾದ್‌, ಅ.11: ಇದು ಜನಸಂಖ್ಯಾ ಸ್ಫೋಟದ ಪರಿಣಾಮ. ಅದೂ ರಾಜಕೀಯ ನೆಲೆಯಲ್ಲಿ. ಹೀಗೂ ಉಂಟೆ ಎಂದು ಅಚ್ಚರಿಪಡುವ ರೀತಿಯಲ್ಲಿ 45 ವರ್ಷ ವಯಸ್ಸಿನ ಜನಪ್ರತಿನಿಧಿಯೊಬ್ಬರು ತಮ್ಮ ಸ್ಥಾನಮಾನವನ್ನು ಕಳೆದುಕೊಂಡಿದ್ದಾರೆ.

ಏನಿಲ್ಲ! 3ನೇ ಮಗುವಿಗೆ ಅಪ್ಪನಾದ ಕಾರಣಕ್ಕೆ ಗುಜರಾತಿನಲ್ಲಿ ಜನಪ್ರತಿನಿಧಿಯೊಬ್ಬರು ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಜನಸಂಖ್ಯಾ ನಿಯಂತ್ರಣ ಕ್ರಮದಡಿ ಜನಪ್ರತಿನಿಧಿಯೊಬ್ಬರು ಹುದ್ದೆ ಕಳೆದುಕೊಂಡ ಪ್ರಕರಣ ದೇಶದಲ್ಲಿ ಇದೇ ಮೊದಲು ಎನ್ನಬಹುದು.

ಇಲ್ಲೊಂದು ಕುತೂಹಲದ ವಿಚಾರ. ಏನಪ್ಪಾ ಅಂದರೆ ಹೀಗೆ ಜನಸಂಖ್ಯೆಯನ್ನು ನಿಯಂತ್ರಿಸುವ ಕ್ರಮಗಳಿಂದ ಎಷ್ಟು ಪ್ರಯೋಜನವಾಗಿದೆ ಎಂದು ಕೇಳಿದರೆ ... ಜನಸಂಖ್ಯೆ ನಿಯಂತ್ರಣ ಕ್ರಮವಾಗಿ ಕುಟುಂಬಕ್ಕೆ ಒಂದೇ ಮಗು ಎಂಬ ಸಾರ್ವತ್ರಿಕ ನೀತಿಯನ್ನು ಚೀನಾ ಸರ್ಕಾರ 1979ರಲ್ಲಿ ಅಳವಡಿಸಿಕೊಂಡಿದೆ. ತತ್ಫಲವಾಗಿ 1979-2011ರ ಅವಧಿಯಲ್ಲಿ 40 ಕೋಟಿಯಷ್ಟು ಜನಸಂಖ್ಯೆ ಹೆಚ್ಚಳ ತಡೆಯಲಾಗಿದೆ!

ಮತ್ತೆ ಗುಜರಾತ್‌ ವಿಷಯಕ್ಕೆ ಬಂದರೆ 2005ರಲ್ಲಿನರೇಂದ್ರ ಮೋದಿ ಸರ್ಕಾರ ಮಹಾನಗರ ಪಾಲಿಕೆ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಅದರನ್ವಯ 2ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಯಾವುದೇ ಜನಪ್ರತಿನಿಧಿ ತಮ್ಮ ಹುದ್ದೆ ಕಳೆದುಕೊಳ್ಳುತ್ತಾರೆ. ಈ ಕಾನೂನಿನ ಅರಿವಿದ್ದೂ, ಬಿಜೆಪಿ ಆಡಳಿತವಿರುವ ರಾಜ್‌ ಕೋಟ್‌ ಮಹಾನಗರ ಪಾಲಿಕೆಯ ಸದಸ್ಯರಾಗಿದ್ದ ಸಂಜಯ್‌ ಧವಾ ಮತ್ತೊಂದು ಸಾಹಸ ಮಾಡಿದ್ದರು.

ಚಾರ್ಮಿ (11) ಮತ್ತು ಧೃವಿ (7) ಎಂಬಿಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದ ಸಂಜಯ್‌ 4 ತಿಂಗಳ ಹಿಂದೆ ಮತ್ತೂಂದು ಮಗುವಿನ ತಂದೆಯಾದರು. ತಮ್ಮದೇ ಆಡಳಿತವಿರುವಾಗ ಕಾನೂನು ತಮ್ಮ ಬೆಂಬಲಕ್ಕೇ ಇರಲಿದೆ ಎಂಬುದು ಅವರ ಎಣಿಕೆಯಾಗಿತ್ತು.

ಇತ್ತೀಚೆಗೆ ಈ ವಿಷಯ ತಿಳಿದ ಮಹಾನಗರ ಪಾಲಿಕೆಯ ಉಪ ಆಯುಕ್ತರು, ನಿಮ್ಮನ್ನು ಸದಸ್ಯತ್ವದಿಂದ ಅನರ್ಹಗೊಳಿಸಲಾಗುವುದು ಎಂದು ಸಂಜಯ್‌ ಧವಾ ಗಮನ ಸೆಳೆದಿದ್ದರು. ಆದರೆ ಸಂಜಯ್, ತಾನು ಪಾಲಿಕೆ ಸದಸ್ಯನಾದಾಗ ತನಗೆ ಕೇವಲ ಇಬ್ಬರ ಮಕ್ಕಳಿದ್ದರೆಂದೂ, ಅದಾದನಂತರ ಈಗಷ್ಟೇ ತನಗೆ ಮೂರನೇ ಮಗುವಾಗಿರುವುದಾಗಿಯೂ ಅಲವತ್ತುಕೊಂಡರು.

ಆದರೆ ಈ ವಾದವನ್ನು ತಳ್ಳಿಹಾಕಿದ ಪಾಲಿಕೆ ಉಪ ಆಯುಕ್ತರು, ಕಾನೂನಿನ ಅನ್ವಯ, ಸದಸ್ಯರಾಗಿರುವ ಯಾವುದೇ ಹಂತದಲ್ಲೂ ಮೂರನೇ ಮಗುವನ್ನು ಹೊಂದಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು. ಹೀಗಾಗಿ ಬೇರೆ ದಾರಿ ಕಾಣದ ಸಂಜಯ್‌, ಮೊನ್ನೆ ಮಹಾನಗರ ಪಾಲಿಕೆ ಕಚೇರಿಗೆ ತೆರಳಿ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gujarat Rajkot BJP councillor Sanjay dhava father of 3 resigns. India possibly took one of its first steps towards population control when a popular BJP councillor in the party-controlled Rajkot Municipal Corporation was forced to resign from his seat after he had a third child. Sanjay Dhava had violated section 10 (j) of the Gujarat Municipal Act introduced by the Narendra Modi government in 2005 which prohibits any one having more than two children from remaining a member of a municipal body in the state.
Please Wait while comments are loading...