ವಿಶ್ವ ರ‍್ಯಾಂಕಿಂಗ್- ಭಾರತದಲ್ಲಿಯೇ ಗುಲಾಮರು ಜಾಸ್ತಿ

ಲಂಡನ್, ಆ.18‌: ಭಾರತಕ್ಕೂ ದಾಸ್ಯಕ್ಕೂ ಪುರಾತನ, ಚಿರನೂತನ ಮತ್ತು ಅವಿನಾಭಾವ ಸಂಬಂಧ. ಇದು ಇತ್ತೀಚಿನ ಬ್ರಿಟೀಷರ ಕಾಲದ ಕೊಡುಗೆ ಅಂತಲ್ಲ. ಅನಾದಿಕಾಲದಿಂದಲೂ ದಾಸ್ಯದ ಸಂಕೋಲೆಯೇ. ಹಾಗಂತ ಇದು ಇಂದಿಗೇ ಮುಗಿದುಹೋಗುತ್ತದೆ ಅಂತಲ್ಲ. ಇದನ್ನೆಲ್ಲಾ ಓದಿದ ಮೇಲೆ ಅಯ್ಯೋ ಎಲ್ರೂ ಒಂದಲ್ಲಾ ಒಂದು ರೀತಿಯಲ್ಲಿ ಗುಲಾಮರೇ ಬಿಡಿ ಎಂದು ನಿಟ್ಟುಸಿರುಬಿಡಬೇಡಿ.

Global Slavery Index: ಆಸ್ಟ್ರೇಲಿಯ ಮೂಲದ ಮಾನವಹಕ್ಕುಗಳ ಸಂಘಟನೆ 'ವಾಕ್ ಫ್ರೀ ಫೌಂಡೇಶನ್' ನಡೆಸಿರುವ ಅಧ್ಯಯನದ ಪ್ರಕಾರ ಜಗತ್ತಿನಲ್ಲಿರುವ ಗುಲಾಮರ ಅಂಕಿ-ಅಂಶ ಸಂಗ್ರಹಿಸಿದ್ದು, ಆ ಪ್ರಕಾರ 162 ದೇಶಗಳಲ್ಲಿ ಗುಲಾಮಗಿರಿ ಪದ್ಧತಿಯಿದೆ. ಭಾರತದ ಹೆಚ್ಚಿನ ಸಂಖ್ಯೆಯಲ್ಲಿದ್ದಾರಷ್ಟೆ. ಇನ್ನೂ ಕೆಲವೊಂದು ದೇಶಗಳಲ್ಲಿ ಈಗಲೂ ಗುಲಾಮರನ್ನು ಖರೀದಿಸುವ, ಮಾರುವ, ಬಾಡಿಗೆಗೆ ಕೊಡುವ ಅಥವಾ ಉಡುಗೊರೆಯಾಗಿ ಕೊಡುವ ಪದ್ಧತಿಯಿದೆಯೆಂದರೆ ದಾಸ್ಯ ಪರಿಸ್ಥಿತಿಯನ್ನು ನೀವೇ ಊಹಿಸಬಹುದು.

slavery-study-india-has-half-the-slaves-in-world-walk-free-foundation

ಸರಿ ಹಾಗಾದರೆ ದಾಸ್ಯ ಪದ್ಧತಿಯೇ ಇಲ್ಲದ ರಾಷ್ಟ್ರ ಯಾವುದೂ ಇಲ್ಲವೇ ಅಂದರೆ ಐಸ್‌ ಲ್ಯಾಂಡಿನಲ್ಲಿ ಅತಿ ಕಡಿಮೆ ಗುಲಾಮರಿರುವುದು ಕಂಡುಬರುತ್ತದೆ! ಈ ದೇಶದಲ್ಲಿರುವ ಗುಲಾಮರ ಸಂಖ್ಯೆ 100ಕ್ಕೂ ಕಡಿಮೆ. ಹಾಗೆಯೇ ಐರ್ಲ್ಯಾಂಡ್‌, ಬ್ರಿಟನ್‌, ನ್ಯೂಜಿಲ್ಯಾಂಡ್‌, ಸ್ವಿಟ್ಸರ್ಲಂಡ್‌, ಸ್ವೀಡನ್‌, ನಾರ್ವೆ, ಲಕ್ಸಂಬರ್ಗ್‌, ಫಿನ್‌ ಲ್ಯಾಂಡ್‌ ಮತ್ತು ಡೆನ್ಮಾರ್ಕ್‌ ದೇಶಗಳಲ್ಲಿಯೂ ದಾಸ್ಯ ಸಂಕೋಲೆ ವಿರಳ!

ಗುಲಾಮಗಿರಿಯ ಪ್ರಮಾಣವನ್ನು ಅಂದಾಜಿಸಲು ಮತ್ತು ಇನ್ನಾದರೂ ಆ ಪಿಡುಗನ್ನು ತೊಡೆದುಹಾಕಲು ಈ ಅಧ್ಯಯನವು ಸರಕಾರಕ್ಕೆ ಸಹಕಾರಿಯಾಗಲಿ ಎಂದು Walk Free Foundation ಆಶಯ ವ್ಯಕ್ತಪಡಿಸಿದೆ.

ವಿಶ್ವದಲ್ಲಿ ಒಟ್ಟು 3 ಕೋಟಿ ಗುಲಾಮರಿದ್ದು, ಈ ಪೈಕಿ ಅರ್ಧದಷ್ಟು ಅಂದರೆ ಸುಮಾರು 1.39 ಕೋಟಿ ಗುಲಾಮರು ಭಾರತದಲ್ಲೇ ಇದ್ದಾರೆ. ಇವರೆಲ್ಲಾ ಹೆಚ್ಚಾಗಿ ವೇಶ್ಯಾವಾಟಿಕೆಗಳಲ್ಲಿ, ಗಣಿಗಳಲ್ಲಿ, ವಂಶಪಾರಂಪರ್ಯದ ಗುಲಾಮಗಿರಿತನದಲ್ಲಿ, ಜೀತದಾಳುಗಳಾಗಿ ಬದುಕುತ್ತಿದ್ದಾರೆ. ಅನೇಕರು ಗುಲಾಮರಾಗಿ ಹುಟ್ಟಿ, ಗುಲಾಮರಾಗಿಯೇ ಸಾಯುತ್ತಾರೆ. ಆಧುನಿಕ ಯುಗದಲ್ಲಿಯೂ ಇದು ಕಟುವಾಸ್ತವ. ಪಶ್ಚಿಮ ಆಫ್ರಿಕಾ ಮತ್ತು ದಕ್ಷಿಣ ಏಶ್ಯಾದ ದೇಶಗಳಲ್ಲಿ ಆಜನ್ಮ ಗುಲಾಮರ ಸಂಖ್ಯೆ ಹೆಚ್ಚಿದೆ.

ಇನ್ನು, ಅನೇಕರನ್ನು ಅಪಹರಣ ಮಾಡಿ ಮಾರಾಟ ಮಾಡಲಾಗುತ್ತದೆ. ಮದುವೆ ಮತ್ತಿತರ ವಿಧಾನಗಳ ಮೂಲಕವೂ ಗುಲಾಮಗಿರಿಗೆ ಅಂಕಿತ ಬೀಳುತ್ತದೆ. ಮೀನುಗಾರಿಕೆ ದೋಣಿಗಳಲ್ಲಿ ದುಡಿಯುವ ಸಂಬಳ ರಹಿತ ಕಾರ್ಮಿಕರು ಮತ್ತು ಮನೆಗೆಲಸ ಮಾಡುವ ಮಂದಿಯನ್ನೆಲ್ಲಾ ಗುಲಾಮರೆಂದು ಪರಿಗಣಿತರಾಗುತ್ತಾರೆ. ಇನ್ನೂ ಕೆಲವರು ಪರಿಸ್ಥಿತಿಯ ಒತ್ತಡದಿಂದ ಪಾರಾಗಲು ಸಾಧ್ಯವಾಗದ ಸ್ಥಿತಿಯಲ್ಲಿ ಗುಲಾಮಗಿರಿಯಿಂದ ಪರಿತಪಿಸುತ್ತಿದ್ದಾರೆ.

ಗುಲಾಮಗಿರಿಯಲ್ಲಿ ಭಾರತದ ಅನಂತರದ ಸ್ಥಾನದಲ್ಲಿ ಚೀನಾ, ಪಾಕಿಸ್ಥಾನ, ನೈಜೀರಿಯ, ಇಥಿಯೋಪಿಯ, ರಶ್ಯಾ, ಥಾಯ್ಲೆಂಡ್‌, ಕಾಂಗೊ ಗಣರಾಜ್ಯ, ಮ್ಯಾನ್ಮಾರ್‌ ಮತ್ತು ಬಾಂಗ್ಲಾದೇಶ ಬರುತ್ತವೆ. ಜನಸಂಖ್ಯೆಯ ಆಧಾರದಲ್ಲಿ ಹೇಳುವುದಾದರೆ ಮೌರಿಟನಿಯದಲ್ಲಿ ಅತ್ಯಧಿಕ ಗುಲಾಮರಿದ್ದಾರೆ. ಈ ದೇಶದ 3.8 ಕೋಟಿ ಜನಸಂಖ್ಯೆಯಲ್ಲಿ ಶೇ. 4 ಮಂದಿ ಗುಲಾಮರು.
(ಚಿತ್ರ: www.westernspring.co.uk)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+