ಗಣಪತಿ ಆತ್ಮಹತ್ಯೆ ಪ್ರಕರಣ: ತನಿಖೆಗೆ 3ತಿಂಗಳ ಕಾಲಾವಕಾಶ ಕೋರಿದ ಸಿಬಿಐ

ನವದೆಹಲಿ, ಜನವರಿ 9: ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಕೇಂದ್ರ ತನಿಖಾ ದಳ (ಸಿಬಿಐ) ಸೋಮವಾರ ಮೂರು ತಿಂಗಳ ಕಾಲಾವಕಾಶ ಕೋರಿದೆ.

ಕಳೆದ ವರ್ಷ ಅಕ್ಟೋಬರ್ 26ರಂದು ಸಿಬಿಐ ಸಚಿವ ಕೆಜೆ ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ಆದರೆ ಇದೊಂದು ರಾಜಕೀಯ ಷಡ್ಯಂತ್ರ ಎಂದು ಜಾರ್ಜ್ ಆರೋಪಿಸಿದ್ದರು.

ಈ ವೇಳೆ ಜಾರ್ಜ್ ರಾಜೀನಾಮೆಗಾಗಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದ ಜಾರ್ಜ್, "ಬಿಜೆಪಿಯರಿಗೆ ತಮ್ಮ ಸ್ವಂತ ಸಿಬಿಐ ಮೆಲೇಯೇ ನಂಬಿಕೆ ಇಲ್ಲ. ಇದು ನನ್ನ ವಿರುದ್ಧ ಹೂಡಿದ ರಾಜಕೀಯ ಷಡ್ಯಂತ್ರ. ನಾನೂ ಯಾವತ್ತೂ ಹೇಳಿದ್ದೇನೆ. ನನ್ನ ಮುಖ್ಯಮಂತ್ರಿಗಳು ರಾಜೀನಾಮೆ ಕೇಳಿದರೆ ಸೆಕೆಂಡುಗಳಲ್ಲಿ ನನ್ನ ರಾಜೀನಾಮೆ ನೀಡುತ್ತೇನೆ," ಎಂದಿದ್ದರು.

CBI seeks three months to investigate Karnataka DySP suicide case

ಕೊಡಗಿನ ಲಾಡ್ಜ್ ಒಂದರಲ್ಲಿ ಎಂ.ಕೆ ಗಣಪತಿ ಜುಲೈ 7, 2016ರಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಸಂದರ್ಭದಲ್ಲಿ ಅವರು ಮಂಗಳೂರಿನಲ್ಲಿ ಡಿವೈಎಸ್ಪಿಯಾಗಿದ್ದರು. ಸಾಯುವುದಕ್ಕೂ ಮೊದಲು ನೀಡಿದ್ದ ಸಂದರ್ಶನದಲ್ಲಿ ಗಣಪತಿ ತಮ್ಮ ಸಾವಿಗೆ ಕೆ.ಜೆ ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ, ಎ.ಎಂ ಪ್ರಸಾದ್ ಕಾರಣ ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+