• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾವೇರಿ ತೀರ್ಪು: ಕರ್ನಾಟಕ, ತಮಿಳುನಾಡಿನಲ್ಲಿ ಬಿಗಿಭದ್ರತೆ

|
   ಕಾವೇರಿ ವಿವಾದದ ಅಂತಿಮ ತೀರ್ಪು ಇಂದು : ತಮಿಳುನಾಡಿನಲ್ಲಿ ಬಿಗಿ ಭದ್ರತೆ | Oneindia Kannada

   ಬೆಂಗಳೂರು, ಫೆಬ್ರವರಿ 16: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ 2007 ರಲ್ಲಿ ಕಾವೇರಿ ನ್ಯಾಯಾಧಿಕರಣದ ಐ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ಸಲ್ಲಿಸಿದ್ದ ಮೇಲ್ಮನವಿಯ ತೀರ್ಪು ಇಂದು ಹೊರಬೀಳಲಿರುವ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯದಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

   ಅಕಸ್ಮಾತ್ ಕಾವೇರಿ ತೀರ್ಪು ಕರ್ನಾಟಕಕ್ಕೆ ವಿರುದ್ಧವಾಗಿ ಬಂದರೆ ಯಾವುದೇ ಅಹಿತಕರ ಘಟನೆ ನಡದೆಯದಂತೆ ತಡೆಯುವ ಸಲುವಾಗಿ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಮೀಸಲು ಪಡೆಯ 70 ಪೊಲೀಸ್ ದಳ ಮತ್ತು, ನಗರ ಸಶಸ್ತ್ರಮೀಸಲು ಪಡೆಯ 30 ಪೊಲೀಸ್ ದಳಗಳನ್ನು ನೇಮಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಹೇಳಿದ್ದಾರೆ.

   ಇಂದು ಕಾವೇರಿ ತೀರ್ಪು: ಕರ್ನಾಟಕದಾದ್ಯಂತ ಬಿಗಿ ಬಂದೋಬಸ್ತ್

   ಬೆಂಗಳೂರು ಮಾತ್ರವಲ್ಲದೆ ಮಂಡ್ಯದಲ್ಲಿಯೂ ಅಷ್ಟೇ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆಯ 25 ಮತ್ತು ಜಿಲ್ಲಾ ಸಶಸ್ತ್ರಮೀಸಲು ಪಡೆಯ 20 ಪೊಲೀಸ್ ದಳವನ್ನು ಜಿಲ್ಲೆಯಾದ್ಯಂತ ನೇಮಿಸಲಾಗಿದೆ. ಡಿಎಆರ್, ಕೆ.ಎಸ್.ಆರ್.ಪಿ ಸೇರಿ ಸೇರಿ ಸುಮಾರು 50 ಸ್ಟ್ರೈಕಿಂಗ್ ಪಾರ್ಟಿ ನಿಯೋಜನೆ, ರಸ್ತೆ ತಡೆ ಹಿನ್ನೆಲೆ ಪರ್ಯಾಯ ಮಾರ್ಗಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದು ಮಂಡ್ಯ ಎಸ್ಪಿ ಜಿ.ರಾಧಿಕಾ ಹೇಳಿದ್ದಾರೆ.

   ಕಾವೇರಿ ಕಣಿವೆಯಲ್ಲಿ ಬರುವ ಇನ್ನಿತರ ಎಲ್ಲಾ ಜಿಲ್ಲೆಗಳಲ್ಲೂ ಅಗತ್ಯ ಭದ್ರತೆ ತೆಗೆದುಕೊಳ್ಳಲಾಗಿದೆ.

   ತಮಿಳುನಾಡಿನಲ್ಲೂ ಭದ್ರತೆ:

   ತಮಿಳುನಾಡಿಗೂ ಕಾವೇರಿ ತೀರ್ಪು ಕರ್ನಾಟಕದಷ್ಟೇ ಮಹತ್ವದ್ದಾಗಿರುವುದರಿಂದ ಆ ರಾಜ್ಯದಲ್ಲೂ ಸೂಕ್ತ ಭದ್ರತೆ ಕೈಕೊಳ್ಳಲಾಗಿದೆ. ತಮಿಳುನಾಡಿನಿಂದ ಕರ್ನಾಟಕ್ಕೆ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಕರ್ನಾಟಕದಿಂದ ತಮಿಳುನಾಡಿಗೆ ತೆರಳುವ ಬಸ್ಸುಗಳು ಎಂದಿನಂತ ಕಾರ್ಯನಿರ್ವಹಿಸುತ್ತಿವೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   All eyes are on the Supreme Court as it's poised to act on the decades-old Cauvery water dispute between the neighbouring states of Karnataka, Tamil Nadu, and Kerala.Security tightened espencially in Bengaluru, Mandya and Mysuru
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more