ತಲಕಾವೇರಿಯಲ್ಲಿ ಶುಕ್ರವಾರ ಸಂಜೆ ತೀರ್ಥೋದ್ಭವ

ಮಡಿಕೇರಿ, ಅ. 16 : ಕನ್ನಡ ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಶುಕ್ರವಾರ ಸಂಜೆ ತೀರ್ಥೋದ್ಭವವಾಗಲಿದೆ. ಸಾವಿರಾರು ಭಕ್ತರು ತಲಕಾವೇರಿಗೆ ಆಗಮಿಸುವುದರಿಂದ ಜಿಲ್ಲಾಡಳಿತ ಸಹ ಭಕ್ತರ ಅನುಕೂಲಕ್ಕಾಗಿ ಸಕಲ ರೀತಿಯ ವ್ಯವಸ್ಥೆಯನ್ನು ಮಾಡಿದೆ.

ಅ.17ರ ಶುಕ್ರವಾರ ಸಂಜೆ 6 ಗಂಟೆ ಏಳು ನಿಮಿಷಕ್ಕೆ ಭಾಗಮಂಡಲದ ತಲಕಾವೇರಿಯಲ್ಲಿ ತೀರ್ಥೋದ್ಭವವಾಗಲಿದೆ ಎಂದು ಭಾಗಮಂಡಲ ದೇವಾಲಯ ಸಮಿತಿ ಹೇಳಿದೆ. ಈ ಬಾರಿ ಸಂಜೆ ತೀರ್ಥೋದ್ಭವವಾಗುವುದರಿಂದ ಸೂಕ್ತ ಭದ್ರತೆ, ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್‌, ಸಾರಿಗೆ ಸಂಪರ್ಕ ಮುಂತಾದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

Talacauvery

ಕಾವೇರಿ ಕೊಡಗಿನ ಜನರ ಕುಲದೇವತೆಯಾಗಿದ್ದು, ತೀರ್ಥೋದ್ಭವ ದಿನವನ್ನು ಪ್ರಮುಖ ಹಬ್ಬವಾಗಿ ಆಚರಿಸಲಾಗುತ್ತದೆ. ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು ರಾಜ್ಯದಿಂದಲೂ ನೂರಾರು ಭಕ್ತರು ತೀರ್ಥೋದ್ಭವ ದಿನ ತಲಕಾವೇರಿಗೆ ಆಗಮಿಸುತ್ತಾರೆ. [2013ರ ಕಾವೇರಿ ತೀರ್ಥೋದ್ಭವದ ಚಿತ್ರಗಳು]

ತೀರ್ಥೋದ್ಭವದ ದಿನದಂದು ಕಾವೇರಿ ನೀರನ್ನು ಪ್ರೋಕ್ಷಣೆ ಮಾಡಿಕೊಂಡರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಪ್ರತಿ ವರ್ಷ ನಡೆಯುವ ತೀರ್ಥೋದ್ಭವದಲ್ಲಿ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ತೀರ್ಥವನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಆದ್ದರಿಂದ ತಲಕಾವೇರಿ ಸುತ್ತಮುತ್ತ ಕೊಡ ಮತ್ತು ನೀರಿನ ಕ್ಯಾನ್‌ಗಳ ಮಾರಾಟ ಭರ್ಜರಿಯಾಗಿ ನಡೆಯತ್ತದೆ.

ತೀರ್ಥೋದ್ಭವದ ಸಂದರ್ಭದಲ್ಲಿ ವಿಶೇಷ ಪೂಜೆ ನಡೆಸಲು ಅರ್ಚಕ ಸಮುದಾಯ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದರೆ, ಪವಿತ್ರ ಕ್ಷೇತ್ರಕ್ಕೆ ಆಗಮಿಸುವ ಭಕಕ್ತಾದಿಗಳಿಗೆ ತೊಂದರೆ ಆಗದಂತೆ ಧಾರ್ಮಿಕ ದತ್ತಿ ಇಲಾಖೆ, ದೇವಸ್ಥಾನ ಸಮಿತಿ ಹಾಗೂ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿವೆ.

Cauvery
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+