ಸ್ವಾತಂತ್ರ್ಯ ಬಂದಾಗಿನಿಂದಲೂ ಇಂಥ ತೀರ್ಪು ನೋಡಿಲ್ಲ: ಎಸ್ಸೆಂ ಕೃಷ್ಣ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 21: ರಾಜ್ಯದಲ್ಲೀಗ ಅಕ್ಷರಶಃ ಕುದಿ ಮೌನ. ಮುಂದೇನು? ಎಂಬುದು ಸದ್ಯಕ್ಕಿರುವ ಪ್ರಶ್ನೆ ಸೆ.27ರವರೆಗೆ ಪ್ರತಿ ದಿನ ತಮಿಳುನಾಡಿಗೆ ಆರು ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂಬುದು ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ನೀಡಿರುವ ಆದೇಶ. ಇದರ ಜೊತೆಗೆ ನೀರು ನಿರ್ವಹಣೆ ಮಾಡುವುದಕ್ಕೆ ಸಮಿತಿಯೊಂದನ್ನು ರಚಿಸಿ ಎಂದು ಕೂಡ ಸೂಚಿಸಿರುವುದು ಮತ್ತೂ ಆತಂಕಕ್ಕೆ ಕಾರಣವಾಗಿದೆ.

ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಯಾರು, ಏನೆಂದರು? ಇಲ್ಲಿದೆ, ಓದಿಕೊಳ್ಳಿ.

 ಕಾವೇರಿ ಕೊಳ್ಳದ ರೈತರು ಬಡವರು

ಕಾವೇರಿ ಕೊಳ್ಳದ ರೈತರು ಬಡವರು

ನೀರಿನ ಸಮಸ್ಯೆ ಬಗೆಹರಿಸುವುದಕ್ಕೆ ಕೇಂದ್ರ ಸರಕಾರ ಮಧ್ಯಪ್ರವೇಶಿಸಬೇಕು. ಯಾವುದೇ ರಾಜ್ಯದಲ್ಲಿ ಇಂಥ ಸ್ಥಿತಿ ಏರ್ಪಟ್ಟರೂ ಕೇಂದ್ರ ಸ್ಪಂದಿಸಲೇಬೇಕು. ಕಾವೇರಿ ಕೊಳ್ಳದ ರೈತರು ಬಡವರು. ತಮಿಳುನಾಡಿನ ರೈತರು ಜಮೀನ್ದಾರರು. ಅವರಿಗೆ ಇಲ್ಲಿನ ಸಣ್ಣ ರೈತರ ಸಮಸ್ಯೆ ಅರ್ಥವಾಗುವುದಿಲ್ಲ.
ದೇವನೂರ ಮಹಾದೇವ, ಸಾಹಿತಿ

 ಮುಖ್ಯಮಂತ್ರಿ ರಾಜೀನಾಮೆ ನೀಡಲಿ

ಮುಖ್ಯಮಂತ್ರಿ ರಾಜೀನಾಮೆ ನೀಡಲಿ

ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಮತ್ತೆ ಆದೇಶಿಸಿದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಕುಡಿಯುವುದಕ್ಕೆ ನೀರಿಲ್ಲದ ಸ್ಥಿತಿಯಲ್ಲಿ ಅಂಥ ಅದೇಶ ಬಂದರೆ ಸಿಎಂ ಕುರ್ಚಿ ತ್ಯಜಿಸುತ್ತೇನೆ ಎಂಬ ಮಾತನ್ನು ಅವರು ಉಳಿಸಿಕೊಳ್ಳಲಿ.
-ಸಿ.ಎಚ್.ವಿಜಯಶಂಕರ್, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ

 ರೈತರಿಗೆ ಪರಿಹಾರ ಪ್ಯಾಕೇಜ್ ಘೋಷಿಸಿ

ರೈತರಿಗೆ ಪರಿಹಾರ ಪ್ಯಾಕೇಜ್ ಘೋಷಿಸಿ

ಕಾವೇರಿ ಕೊಳ್ಳದ ರೈತರಿಗೆ ಸರಕಾರ ಪರಿಹಾರದ ಪ್ಯಾಕೇಜ್ ಘೋಷಿಸಬೇಕು. ಸದ್ಯಕ್ಕೆ ಪರಿಹಾರ ನೀಡುವುದೊಂದೆ ಅಲ್ಪ ಪ್ರಮಾಣದಲ್ಲಿ ನಿರಾಳತೆ ತರಬಹುದು. ಮಂಗಳವಾರದ ತೀರ್ಪು ಕರ್ನಾಟಕದ ವಕೀಲರ ತಂಡದ ಅಸಮರ್ಥತೆಯನ್ನು ಎತ್ತಿ ತೋರಿಸುತ್ತದೆ. ಇದರಿಂದ ಕೊನೆಗೆ ತೊಂದರೆ ಆಗೋದು ರೈತರಿಗೆ, ಶ್ರೀ ಸಾಮಾನ್ಯರಿಗೆ. ಆದ್ದರಿಂದ ಕೂಡಲೇ ರೈತರಿಗೆ ಪರಿಹಾರ ಪ್ಯಾಕೇಜ್ ಘೋಷಿಸಬೇಕು.
-ರಾಜೀವ್ ಚಂದ್ರಶೇಖರ್, ರಾಜ್ಯಸಭಾ ಸದಸ್ಯ

ಕಾನೂನು ತಜ್ಞರ ಸಲಹೆ

ಕಾನೂನು ತಜ್ಞರ ಸಲಹೆ

ಕಾನೂನು ತಜ್ಞರ ಸಲಹೆಯನ್ನು ಪಡೆದು ಮುಂದೆ ಏನು ಮಾದಬೇಕು ಎಂದು ತೀರ್ಮಾನ ಮಾಡುತ್ತೇವೆ. ರೈತರ ಹಿತವನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ. ಬುಧವಾರ ನಡೆಯುವ ಸಂಪುಟ ಸಭೆ ಮತ್ತು ಸರ್ವಪಕ್ಷ ಸಭೆ ನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ.

ಸಿದ್ದರಾಮಯ್ಯ, ಮುಖ್ಯಮಂತ್ರಿ

ರಾಜ್ಯ ಸರಕಾರ ವಿಫಲ

ರಾಜ್ಯ ಸರಕಾರ ವಿಫಲ

ಸುಪ್ರೀಂ ಕೋರ್ಟ್ ಗೆ ರಾಜ್ಯದ ಪರಿಸ್ಥಿತಿ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಕಾವೇರಿ ನೀರು ಹಂಚಿಕೆ ಸಮಸ್ಯೆ ಕುರಿತು ಚರ್ಚಿಸುವುದಕ್ಕೆ ತಕ್ಷಣವೇ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಬೇಕು.
ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಆದೇಶ ಉಲ್ಲಂಘಿಸಿದರೂ ತಪ್ಪಿಲ್ಲ

ಆದೇಶ ಉಲ್ಲಂಘಿಸಿದರೂ ತಪ್ಪಿಲ್ಲ

ಸುಪ್ರೀಂ ಕೋರ್ಟ್ ನಿರ್ದೇಶನ ರಾಜ್ಯದ ಪಾಲಿಗೆ ಮರಣಶಾಸನ. ಈ ತೀರ್ಪನ್ನು ರಾಜ್ಯ ಸರಕಾರ ಉಲ್ಲಂಘಿಸಿದರೂ ತಪ್ಪಿಲ್ಲ. ಆ ನಂತರ ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಬಹುದು. ನೀರು ನಿರ್ವಹಣೆ ಮಂಡಳಿ ರಚನೆ ಆಗಬೇಕು ಅನ್ನೋದು ರಾಜ್ಯದ ಹಿತಾಸಕ್ತಿಗೆ ವಿರುದ್ಧವಾದದ್ದು. 10 ಸಾವಿರ ಕ್ಯೂಸೆಕ್ ನೀರು ಬಿಡ್ತೀವಿ ಅಂತ ಪ್ರಮಾಣ ಪತ್ರ ಸಲ್ಲಿಸಿದ್ದೇ ತಪ್ಪು.
ಬಿ.ವಿ.ಆಚಾರ್ಯ, ಮಾಜಿ ಅಡ್ವೋಕೇಟ್ ಜನರಲ್

ವಿಧಾನಸಭೆ ವಿಸರ್ಜಿಸಿ

ವಿಧಾನಸಭೆ ವಿಸರ್ಜಿಸಿ

ವಿಧಾನಸಭೆ ವಿಸರ್ಜಿಸಿ ಒಕ್ಕೂಟ ವ್ಯವಸ್ಥೆ ಧಿಕ್ಕರಿಸಲು ಸರಕಾರ ಮುಂದಾಗಬೇಕು. ಒಕ್ಕೂಟ ವ್ಯವಸ್ಥೆಯ ಹೆಸರಿನಲ್ಲಿ ಕರ್ನಾಟಕದ ಮೇಲೆ ಬಲಾತ್ಕಾರ ನಡೆಯುತ್ತಿದೆ. ಪದೇ ಪದೇ ನಮ್ಮ ರೈತರಿಗೆ ವಿಷ ಉಣಿಸಲಾಗುತ್ತಿದೆ. ಅನ್ಯಾಯವನ್ನು ತಡೆಯಲು ಇರುವ ಅಂತಿಮ ಮಾರ್ಗವನ್ನು ಅನುಸರಿಸಬೇಕಿದೆ.
ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ

ನ್ಯಾಯಮೂರ್ತಿಗಳಿಗೆ ಜಲಾಶಯದ ಮಾಹಿತಿ ಇಲ್ಲ

ನ್ಯಾಯಮೂರ್ತಿಗಳಿಗೆ ಜಲಾಶಯದ ಮಾಹಿತಿ ಇಲ್ಲ

ನ್ಯಾಯಮೂರ್ತಿಗಳಿಗೆ ಜಲಾಶಯದ ಬಗ್ಗೆ ಮಾಹಿತಿ ಇಲ್ಲ ಎಂದು ಅನಿಸುತ್ತದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಇಂಥ ತೀರ್ಪು ನೋಡಿಲ್ಲ. ನಾನೂ ಮುಖ್ಯಮಂತ್ರಿ ಆಗಿದ್ದವನು. ಈಗಿನ ಮುಖ್ಯಮಂತ್ರಿ ಎದುರಿಸುತ್ತಿರುವ ಪರಿಸ್ಥಿತಿ ನನಗೆ ಅರ್ಥವಾಗುತ್ತಿದೆ.
ಎಸ್.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ

ಆಡಳಿತ-ವಿಪಕ್ಷ ಒಂದಾಗಲಿ

ಆಡಳಿತ-ವಿಪಕ್ಷ ಒಂದಾಗಲಿ

ಸುಪ್ರೀಂ ಕೋರ್ಟ್ ಕಾವೇರಿ ನೀರು ಹಂಚಿಕೆ ಬಗ್ಗೆ ನೀಡಿರುವ ಆದೇಶದಲ್ಲಿ ತರ್ಕವೇ ಇಲ್ಲ. ಜತೆಗೆ ತಾತ್ವಿಕವಾಗಿಯೂ ಇಲ್ಲ. ಈ ವಿಚಾರದಲ್ಲಿ ಆಡಳಿತ ಪಕ್ಷ, ವಿಪಕ್ಷ ಅನ್ನದೆ ಒಂದೇ ನಿಲುವು ತೆಗೆದುಕೊಳ್ಳಬೇಕು. ಕಾವೇರಿ ಕೊಳ್ಳದ ರೈತರಿಗೆ ಪರಿಹಾರವನ್ನು ನೀಡಬೇಕು.
ಬರಗೂರು ರಾಮಚಂದ್ರಪ್ಪ, ಸಾಹಿತಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
On the backdrop supreme court direction people angry on situation. What's next? this is the question answered and some of the people express their opinion.
Please Wait while comments are loading...