ಕಾವೇರಿ ವಿವಾದ : 2 ಅರ್ಜಿ ವಿಚಾರಣೆ, ಇಂದು ಮಹತ್ವದ ದಿನ
ಬೆಂಗಳೂರು, ಸೆಪ್ಟೆಂಬರ್ 12 : ಕಾವೇರಿ ವಿವಾದದ ವಿಚಾರದಲ್ಲಿ ಇಂದು ಮಹತ್ವದ ದಿನ. ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ಮತ್ತು ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ನಡೆಯುತ್ತಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್ ಹಾಗೂ ರಾಜ್ಯದ ಅಡ್ವೋಕೇಟ್ ಜನರಲ್ ಮಧುಸೂದನ್ ನಾಯಕ್ ಅವರು ಸುಪ್ರೀಂಕೋರ್ಟ್ ಹಾಗೂ ಮೇಲುಸ್ತುವಾರಿ ಸಮಿತಿಯ ಮುಂದೆ ರಾಜ್ಯದ ಮೇಲ್ಮನವಿಯನ್ನು ಸಲ್ಲಿಸಿದ್ದಾರೆ.[ಕಾವೇರಿ ವಿವಾದ : ತಜ್ಞರ ತಂಡ ಕಳಿಸುವಂತೆ ಕೇಂದ್ರಕ್ಕೆ ಪತ್ರ]

ಸುಪ್ರೀಂಕೋರ್ಟ್ ನಿರ್ದೇಶನದಂತೆ ಸೋಮವಾರ ಮೇಲುಸ್ತುವಾರಿ ಸಮಿತಿಯಲ್ಲಿ ಅರ್ಜಿಯ ವಿಚಾರಣೆ ನಡೆಯಲಿದೆ. ಪ್ರತಿದಿನ 15 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ನೀಡಿರುವ ಆದೇಶವನ್ನು ಮಾರ್ಪಾಡು ಮಾಡುವಂತೆ ಕರ್ನಾಟಕ ಸಲ್ಲಿಸಿರುವ ಅರ್ಜಿಯ ವಿಚಾರಣೆಯೂ ಕೋರ್ಟ್‌ನಲ್ಲಿ ಇಂದು ನಡೆಯಲಿದೆ.[ಕಾವೇರಿ ಕೇಸ್ : ನಾರಿಮನ್ ಆಯ್ಕೆ ಮಾಡಿದ್ದು ಯಾರು?]
ಶಾಶ್ವತ ಪರಿಹಾರ ಅಗತ್ಯ : 'ಕಾವೇರಿ ಜಲ ವಿವಾದ ಎರಡು ನೂರು ವರ್ಷಗಳ ಇತಿಹಾಸವಿರುವ ವಿಷಯವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯುವುದು ಅತ್ಯಾವಶ್ಯವಾಗಿದೆ' ಎಂದು ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.[ಕಾವೇರಿ ವಿವಾದ : ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ವಿವರಗಳು]
'ನ್ಯಾಯಾಧೀಕರಣದ ಅಂತಿಮ ತೀರ್ಪಿನಂತೆ ರಾಜ್ಯದ ಕಾವೇರಿ ಕಣಿವೆಯಿಂದ ತಮಿಳುನಾಡಿಗೆ ಸ್ವಾಭಾವಿಕ ವರ್ಷದಲ್ಲಿ 192 ಟಿಎಂಸಿ ನೀರು ನೀಡಬೇಕಾಗುತ್ತದೆ. ಶಿವನ ಸಮುದ್ರ ಹಾಗೂ ಮೇಕೇದಾಟು ಪ್ರದೇಶದಲ್ಲಿ ಜಲಾಶಯಗಳನ್ನು ನಿರ್ಮಿಸಿ, ವಿದ್ಯುತ್ ಉತ್ಪಾದನೆ ಮಾಡುವ ಜೊತೆಗೆ ನೀರನ್ನು ಪುನರ್ಬಳಕೆ ಮಾಡಲು ಅವಕಾಶವಿದೆ' ಎಂದು ಅವರು ತಿಳಿಸಿದ್ದಾರೆ.
'ತಮಿಳುನಾಡು ಸರ್ಕಾರವು ಹೊಗೆನೇಕಲ್ ಬಳಿ ನಿರ್ಮಿಸಲು ಉದ್ದೇಶಿಸಿರುವ ಜಲಾಶಯದಲ್ಲಿ ನೀರು ಸಂಗ್ರಹಿಸಿ ಸದ್ಭಳಕೆ ಮಾಡಿಕೊಳ್ಳಬಹುದು. ಅಂತೆಯೇ, ರಾಜ್ಯ ಶಿವನ ಸಮುದ್ರ ಹಾಗೂ ಮೇಕೇದಾಟು ಯೋಜನೆಗಳ ಅನುಷ್ಠಾನಕ್ಕೆ ಅಡ್ಡಿಪಡಿಸಬಾರದು' ಎಂದು ಸಚಿವರು ಮನವಿ ಮಾಡಿದರು.
'ನಮ್ಮ ರೈತರ ಹಿತ ಕಾಪಾಡಲು ರಾಜ್ಯದ ಕಾವೇರಿ ಕಣಿವೆಯಲ್ಲಿ ಜಲಾಶಯಗಳನ್ನು ನಿರ್ಮಿಸಲಾಗಿದೆಯೇ ಹೊರತು ತಮಿಳುನಾಡು ರಾಜ್ಯಕ್ಕೆ ನೀರು ಬಿಡಲು ಅಲ್ಲ. ಕಾವೇರಿ ಜಲ ವಿವಾದದ ಇತಿಹಾಸವನ್ನು ಅವಲೋಕಿಸಿದಾಗ ಎರಡು ಶತಮಾನಗಳಿಂದಲೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇದೆ' ಎಂದು ಜಯಚಂದ್ರ ಹೇಳಿದರು.












Click it and Unblock the Notifications