ಫಾಲಿ ಎಸ್.ನಾರಿಮನ್ ವಿರುದ್ಧ ಅಕ್ರೋಶವೇಕೆ?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 10 : ಪ್ರತಿ ಬಾರಿ ಕಾವೇರಿ ವಿವಾದ ಭುಗಿಲೆದ್ದಾಗಲೂ ಪ್ರತಿಭಟನಾನಿರತರ ಟಾರ್ಗೆಟ್ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ. ಆದರೆ, ಬಾರಿ ಕರ್ನಾಟಕದ ಪರ ವಾದ ಮಾಡುವ ಹಿರಿಯ ವಕೀಲ ಫಾಲಿ ಎಸ್.ನಾರಿಮನ್ ವಿರುದ್ಧ ಅಕ್ರೋಶ ವ್ಯಕ್ತವಾಗುತ್ತಿದೆ.

ಮಂಡ್ಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ನೂರಾರು ರೈತರು ಕಾವೇರಿ ವಿಚಾರದಲ್ಲಿ ಸರಿಯಾಗಿ ವಾದ ಮಂಡನೆ ಮಾಡದಿರುವ ನಾರಿಮನ್ ವಿರುದ್ಧ ದೂರು ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ನಾರಿಮನ್ ಅವರನ್ನು ಬದಲಾವಣೆ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಮನವಿ ಮಾಡಲಾಗಿದೆ.[ಕಾವೇರಿ ಕೇಸ್ : ನಾರಿಮನ್ ಆಯ್ಕೆ ಮಾಡಿದ್ದು ಯಾರು?]

fali nariman

ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಹಲವು ಬಾರಿ ನಾರಿಮನ್ ಅವರನ್ನು ಸಮರ್ಥಿಸಿ ಕೊಂಡಿದ್ದಾರೆ. ಕಳೆದ ವಾರ ಸುಪ್ರೀಂಕೋರ್ಟ್ 10 ದಿನಗಳ ಕಾಲ ತಮಿಳುನಾಡಿಗೆ ನೀರು ಹರಿಸಬೇಕು ಎಂದು ಆದೇಶ ನೀಡಿದೆ. ನಂತರ, ಪ್ರತಿಭಟನೆಗಳು ನಡೆಯುತ್ತಿವೆ. ನಾರಿಮನ್ ಬದಲಾವಣೆ ಬಗ್ಗೆ ಎದ್ದಿರುವ ಚರ್ಚೆಗಳಿಗೆ ಕರ್ನಾಟಕ ಕಾನೂನು ತಂಡ ಅಸಮಾಧಾನ ವ್ಯಕ್ತವಪಡಿಸಿದೆ.[ತಮಿಳುನಾಡಿಗೆ ಕಾವೇರಿ ನೀರು, ಸೋಮವಾರ ಸುಪ್ರೀಂಗೆ ಅರ್ಜಿ]

ಒನ್ ಇಂಡಿಯಾ ಜೊತೆ ಮಾತನಾಡಿರುವ ವಕೀಲ ಮೋಹನ್‌ ಕಾತರಕಿ ಅವರು, 'ಈ ಬಗ್ಗೆ ಮೊದಲ ಚರ್ಚೆ ನಡೆದಿದ್ದು ಸರ್ವಪಕ್ಷಗಳ ಸಭೆಯಲ್ಲಿ. ಕೆ.ಎಸ್.ಈಶ್ವರಪ್ಪ, ವೈಎಸ್‌ವಿ ದತ್ತಾ ಅವರು ನಾರಿಮನ್ ಯಾವುದಾದರೂ ಕೇಸು ಗೆದ್ದುಕೊಟ್ಟಿದ್ದಾರೆಯೇ?' ಎಂದು ಕೇಳಿದ್ದರು, ಇದು ದುರದೃಷ್ಟಕರ' ಎಂದು ಹೇಳಿದ್ದಾರೆ.

ಕಡಿಮೆ ಶುಲ್ಕ ಪಡೆತ್ತಾರೆ : ಮೋಹನ್‌ ಕಾತರಕಿ ಅವರು ನಾರಿಮನ್ ಅವರ ಶುಲ್ಕದ ಬಗ್ಗೆ ನಡೆಯುತ್ತಿರುವ ಚರ್ಚೆ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. 'ಕರ್ನಾಟಕದ ಪರವಾಗಿ ವಾದ ಮಂಡನೆ ಮಾಡಲು ಅವರು ಕಡಿಮೆ ಶುಲ್ಕವನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರ ಹಲವು ಜ್ಯೂನಿಯರ್‌ಗಳು ಹೆಚ್ಚು ಶುಲ್ಕ ಪಡೆಯುತ್ತಿದ್ದಾರೆ' ಎಂದು ಹೇಳಿದ್ದಾರೆ.

'ಜಯಲಲಿತಾ ಅವರ ಪರವಾಗಿ ನಾರಿಮನ್ ವಾದ ಮಂಡನೆ ಮಾಡಿರುವ ಬಗ್ಗೆ ಚರ್ಚೆ ನಡೆಸುವ ಅಗತ್ಯವಿಲ್ಲ. ವಕೀಲರಾಗಿ ಅವರು ಯಾರ ಪರವಾಗಿ ಬೇಕಾದರೂ ವಾದ ಮಾಡಬಹುದು. ಅದಕ್ಕೆ ಯಾವುದೇ ಅಡೆ-ತಡೆ ಇಲ್ಲ. ಇದಕ್ಕೂ ಕಾವೇರಿ ವಿವಾದದ ವಾದ ಮಂಡನೆಗೂ ಸಂಬಂಧವಿಲ್ಲ' ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Each time the Cauvery waters dispute erupts, the favourite target for the protestors is Tamil Nadu Chief Minister, J Jayalalithaa. This time around there has been a lot of fun being about senior counsel, Fali S Nariman who represents Karnataka in the Cauvery case.
Please Wait while comments are loading...