Get Updates
Get notified of breaking news, exclusive insights, and must-see stories!

Siddaramaiah Cabinet: ಸಿದ್ದರಾಮಯ್ಯ ಸರ್ಕಾರದ ಸಚಿವರ ವಯಸ್ಸು, ಜಾತಿ, ವಿದ್ಯಾರ್ಹತೆಯ ಮಾಹಿತಿ ಇಲ್ಲಿದೆ

ಬೆಂಗಳೂರು : ಹದಿನಾರನೇ ವಿಧಾನಸಭೆಯ ಚುನಾವಣಾ ಫಲಿತಾಂಶ ಹೊರಬಿದ್ದ ಬಹುತೇಕ ಎರಡು ವಾರದ ನಂತರ ಸಿದ್ದರಾಮಯ್ಯನವರ ಸರ್ಕಾರ ನಿಧಾನವಾಗಿ ಟೇಕ್ ಆಫ್ ಆಗುತ್ತಿದೆ. ಮುಖ್ಯಮಂತ್ರಿ ಮತ್ತು ಸಚಿವ ಸ್ಥಾನಕ್ಕಾಗಿನ ಹಗ್ಗಜಗ್ಗಾಟವಿದ್ದರೂ, ಕಾಂಗ್ರೆಸ್ ನಿರೀಕ್ಷಿಸಿದ ರೀತಿಯಲ್ಲಿ ಸದ್ಯದ ಮಟ್ಟಿಗೆ, ಕೆಲವೊಂದು ಅಪವಾದವನ್ನು ಹೊರತು ಪಡೆಸಿದರೆ ಎಲ್ಲವೂ ಸಸೂತ್ರವಾಗಿ ನಡೆಯುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಒಟ್ಟು 34 ಮುಖಂಡರು ಪ್ರಮಾಣ ವಚನವನ್ನು ಸ್ವೀಕರಿಸಿದ್ದಾಗಿದೆ. ಯಾರಿಗೆ ಯಾವ ಖಾತೆ ಎನ್ನುವುದು ಬಹುತೇಕ ದೆಹಲಿಯಲ್ಲೇ ಫೈನಲ್ ಆಗಿತ್ತು. ಮಾಧ್ಯಮಗಳಲ್ಲಿ ಎರಡು ದಿನಗಳ ಹಿಂದೆ ಹರಿದಾಡುತ್ತಿದ್ದ ಪಟ್ಟಿಯು ಅಸಲಿ ಪಟ್ಟಿ ಎಂದು ಸಚಿವ ಸತೀಶ್ ಜಾರಕಿಹೊಳಿ ಕೂಡಾ ಹೇಳಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಸಂಪುಟ ಸದಸ್ಯರ ವಿದ್ಯಾರ್ಹತೆ, ವಯಸ್ಸು, ಜಾತಿ ಲೆಕ್ಕಾಚಾರ ಈ ಕೆಳಗಿನಂತಿದೆ:

Caste, Age and Qualification details Of Newly Formed Siddaramaiah Government Ministers
ಹೆಸರು
ಪ್ರತಿನಿಧಿಸುವ ಕ್ಷೇತ್ರ
ವಯಸ್ಸು ವಿದ್ಯಾರ್ಹತೆ ಜಾತಿ
ಸಿದ್ದರಾಮಯ್ಯ ವರುಣಾ 74
ಬಿಎಸ್ ಸಿ, ಎಲ್ಎಲ್ ಬಿ
ಕುರುಬ
ಡಿ.ಕೆ.ಶಿವಕುಮಾರ್ ಕನಕಪುರ 61 ಮಾಸ್ಟರ್ ಡಿಗ್ರಿ ಒಕ್ಕಲಿಗ
ಡಾ. ಜಿ.ಪರಮೇಶ್ವರ್ ಕೊರಟಗೆರೆ 71
ಡಾಕ್ಟರೇಟ್, ಪಿಎಚ್ ಡಿ
ಪರಿಶಿಷ್ಟ ಜಾತಿ
ರಾಮಲಿಂಗಾ ರೆಡ್ಡಿ ಬಿಟಿಎಂ ಲೇಔಟ್ 70 ಬಿಎಸ್ ಸಿ ರೆಡ್ಡಿ
ಎಂ.ಬಿ.ಪಾಟೀಲ್ ಬಬಲೇಶ್ವರ 58 ಬಿಇ ಲಿಂಗಾಯತ
ಸತೀಶ್ ಜಾರಕಿಹೊಳಿ ಯಮಕನಮರಡಿ 61 ಪಿಯುಸಿ ಪರಿಶಿಷ್ಟ ಪಂಗಡ
ಪ್ರಿಯಾಂಕ್ ಖರ್ಗೆ ಚಿತ್ತಾಪುರ 44 ಡಿಪ್ಲೊಮೊ ಪರಿಶಿಷ್ಟ ಜಾತಿ
ಜಮೀರ್ ಅಹ್ಮದ್ ಖಾನ್ ಚಾಮರಾಜಪೇಟೆ 56 ಎಸ್ಎಸ್ಎಲ್ ಸಿ ಮುಸ್ಲಿಂ
ಕೆ.ಎಚ್.ಮುನಿಯಪ್ಪ ದೇವನಹಳ್ಳಿ 75 ಎಲ್ಎಲ್ ಬಿ ಪರಿಶಿಷ್ಟ ಜಾತಿ
ಕೆ.ಜೆ.ಜಾರ್ಜ್ ಸರ್ವಜ್ಞ ನಗರ 76 ಪಿಯುಸಿ ಕ್ರಿಶ್ಚಿಯನ್
ಡಾ.ಎಂ.ಸಿ.ಸುಧಾಕರ್ ಚಿಂತಾಮಣಿ 54 ಎಂಡಿಎಸ್ (ಡೆಂಟಲ್) ಒಕ್ಕಲಿಗ
ಮಂಕಾಳ ವೈದ್ಯ ಭಟ್ಕಳ 50 8ನೇ ತರಗತಿ ಮೊಗವೀರ
ಈಶ್ವರ್ ಖಂಡ್ರೆ ಭಾಲ್ಕಿ 61 ಬಿಇ ಲಿಂಗಾಯತ
ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ ಗ್ರಾಮೀಣ 48 ಎಂಎ ಲಿಂಗಾಯತ
ಮಧು ಬಂಗಾರಪ್ಪ ಸೊರಬ 57 ಬಿಕಾಂ ಈಡಿಗ
ಕೆ.ವೆಂಕಟೇಶ್ ಪಿರಿಯಾಪಟ್ಟಣ 75 ಬಿಎಸ್ ಸಿ ಒಕ್ಕಲಿಗ
ಡಿ ಸುಧಾಕರ್ ಹಿರಿಯೂರು 62 ಬಿಕಾಂ ಜೈನ್
ಎಚ್.ಕೆ.ಪಾಟೀಲ್ ಗದಗ 70 ಬಿಎಸ್ ಸಿ ನಾಮಧಾರಿ ರೆಡ್ಡಿ
ಎನ್.ಚೆಲುವರಾಯಸ್ವಾಮಿ
ನಾಗಮಂಗಲ 63 ಡಿಪ್ಲೊಮೊ ಒಕ್ಕಲಿಗ
ಶಿವಾನಂದ ಪಾಟೀಲ್ ಬಸವನಬಾಗೇವಾಡಿ 61 ಡಿಪ್ಲೊಮೊ ಲಿಂಗಾಯತ
ಡಾ.ಎಚ್.ಸಿ.ಮಹದೇವಪ್ಪ ತಿ.ನರಸೀಪುರ 70 ಎಂಬಿಬಿಎಸ್ ಪರಿಶಿಷ್ಟ ಜಾತಿ
ಬೈರತಿ ಸುರೇಶ್ ಹೆಬ್ಬಾಳ, ಬೆಂಗಳೂರು 51 ಬಿಇ ಕುರುಬ
ಕೃಷ್ಣ ಭೈರೇಗೌಡ ಬ್ಯಾಟರಾಯನಪುರ 50 ಎಂಎ ಒಕ್ಕಲಿಗ
ಕೆ.ಎನ್.ರಾಜಣ್ಣ ಮಧುಗಿರಿ 72 ಬಿಎಸ್ ಸಿ ಪರಿಶಿಷ್ಟ ಪಂಗಡ
ಬಿ.ನಾಗೇಂದ್ರ ಬಳ್ಳಾರಿ ಗ್ರಾಮಾಂತರ 52 ಬಿಕಾಂ ಪರಿಶಿಷ್ಟ ಪಂಗಡ
ಶರಣಬಸಪ್ಪ ದರ್ಶನಾಪುರ
ಶಹಾಪುರ 62 ಬಿಎಸ್ ಸಿ ರೆಡ್ಡಿ ಲಿಂಗಾಯತ
ಎಸ್.ಎಸ್. ಮಲ್ಲಿಕಾರ್ಜುನ
ದಾವಣಗೆರೆ ಉತ್ತರ 56 ಬಿಕಾಂ ಲಿಂಗಾಯತ
ಶಿವರಾಜ ತಂಗಡಗಿ ಕನಕಗಿರಿ 52 ಬಿಎಸ್ ಸಿ ಭೋವಿ
ರಹೀಂ ಖಾನ್ ಬೀದರ್ 57 ಪಿಯುಸಿ ಮುಸ್ಲಿಂ
ಸಂತೋಷ್ ಲಾಡ್ ಕಲಘಟಗಿ 48 ಬಿಕಾಂ ಮರಾಠ
ಆರ್.ಬಿ.ತಿಮ್ಮಾಪುರ ಮುಧೋಳ 61 ಬಿಇ, ಎಲ್ಎಲ್ ಬಿ ಪರಿಶಿಷ್ಟ ಜಾತಿ
ಡಾ.ಶರಣಪ್ರಕಾಶ್ ಪಾಟೀಲ್
ಸೇಡಂ 56 ಎಂಬಿಬಿಎಸ್ ಲಿಂಗಾಯತ
ದಿನೇಶ್ ಗುಂಡೂರಾವ್ ಗಾಂಧಿನಗರ 54 ಬಿಇ ಬ್ರಾಹ್ಮಣ
ಎನ್.ಎಸ್.ಬೋಸ್ ರಾಜು ಮಾಜಿ ಎಂಎಲ್ಎ 76 ಡಿಪ್ಲೊಮೊ ಕ್ಷತ್ರಿಯ ರಾಜು

ಮೊದಲು ಮಂತ್ರಿ ಸ್ಥಾನಕ್ಕಾಗಿ, ಇದಾದ ನಂತರ ಖಾತೆಯ ವಿಚಾರದಲ್ಲಿನ ಕ್ಯಾತೆಯಿಂದಾಗಿ, ಸಚಿವರ ಇಲಾಖೆಯ ಪಟ್ಟಿ ಕೊಂಚ ವಿಳಂಬವಾಗಿತ್ತು. ಅದರಲ್ಲಿ ಸಾರಿಗೆ ಸಚಿವ ಸ್ಥಾನ ಬೇಡವೆಂದು ರಾಮಲಿಂಗಾ ರೆಡ್ಡಿ ಮತ್ತು ಗೃಹ ಖಾತೆ ಬೇಡವೆಂದು ಡಾ.ಪರಮೇಶ್ವರ್ ತಗಾದೆ ತೆಗೆದಿದ್ದರು ಎಂದು ವರದಿಯಾಗಿತ್ತು. ಡಿಸಿಎಂ ಡಿ.ಕ್.ಶಿವಕುಮಾರ್ ಅವರು ರಾಮಲಿಂಗಾ ರೆಡ್ಡಿಯವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+