ಕರ್ನಾಟಕದ ನಾಲ್ವರು ಮುಖ್ಯಮಂತ್ರಿಗಳು ಬಳಸಿದ್ದ ಅತೀ ದೊಡ್ಡ ಬ್ರಾಂಡ್ ಕಾರು ಮಾರಾಟ
ಹೊಸ ಕಾರುಗಳು ಹೇಗೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತವೆಯೋ, ಅದಕ್ಕೂ ಹೆಚ್ಚು ಪ್ರಮಾಣದ ತಾಕತ್ತು ಕೆಲ ಹಳೇ ಕಾರುಗಳಿಗಿದೆ. ಹಿಂದಿನ ಕಾಲದ ರಾಜ ಮಹಾರಾಜರು, ರಾಜಕರಣಿಗಳು ಬಳಸುತ್ತಿದ್ದ ವಾಹನಗಳು ಈಗ ರಸ್ತೆಗಳಿದವೆಂದರೆ ಅವುಗಳ ಗತ್ತೇ ಬೇರೆ ಆಗಿರುತ್ತದೆ. ಹಾಗೆಯೇ ಇದೀಗ ಕರ್ನಾಟಕದ ನಾಲ್ವರು ಮುಖ್ಯಮಂತ್ರಿಗಳು ಬಳಸುತ್ತಿದ್ದ ಕಾರೊಂದು ತುಂಬಾ ಸದ್ದು ಮಾಡುತ್ತಿದೆ.
ಈ ಹಿಂದೆ ಕರ್ನಾಟಕದ ನಾಲ್ವರು ಮುಖ್ಯಮಂತ್ರಿಗಳು ಓಡಾಡಿದಂತಹ ಕಾರನ್ನು ಅತಿ ಹೆಚ್ಚು ಬಿಡ್ ಮಾಡುವ ಮೂಲಕ ಕಾಂಗ್ರೆಸ್ ನಾಯಕರೊಬ್ಬರು ಖರೀದಿ ಮಾಡಿದ್ದಾರೆ. ಹಾಗಾದ್ರೆ ಆ ಕಾರು ಯಾವುದು, ಎಷ್ಟಕ್ಕೆ ಮಾರಾಟವಾಗಿದೆ ಹಾಗೂ ಖರೀದಿ ಮಾಡಿದವರು ಯಾರೆಂದು ಇಲ್ಲಿ ತಿಳಿಯಿರಿ.
ಕರ್ನಾಟಕ ಭವನದಲ್ಲಿ ಅವಧಿ ಮುಕ್ತಾಯಕ್ಕೆ ಬಂದಿದ್ದಂತಹ ಕಾರುಗಳನ್ನು ಹರಾಜಿಗೆ ಇಡಲಾಗಿತ್ತು. ಈ ವೇಳೆ ರಾಜ್ಯದನಾಲ್ವರು ಮುಖ್ಯಮಂತ್ರಿಗಳು ಓಡಾಡಿದಂತಹ ಕಾರನ್ನು ಅತೀ ಹೆಚ್ಚು ಅಂದರೆ 2.10 ಲಕ್ಷ ರೂಗಳಿಗೆ ಬಿಡ್ ಮಾಡಿ ಕಾಂಗ್ರೆಸ್ ನಾಯಕ ಟಿ.ಆರ್ ರಾಮಪ್ಪ ಎಂಬುವವರು ಖರೀದಿ ಮಾಡಿದ್ದಾರೆ.
ಹೊಂಡಾ ಸಿಆರ್‌ಬಿ ಕಾರು ಇದ್ದಾಗಿದ್ದು, ಈ ಕಾರನ್ನು 2010ರಲ್ಲಿ ಕರ್ನಾಟಕ ಭವನದಲ್ಲಿ ಕರ್ತವ್ಯಕ್ಕೆಂದೆ ನಿಯೋಜನೆ ಮಾಡಿಕೊಳ್ಳಲಾಗಿತ್ತು. ಇದೇ ಕಾರಿನಲ್ಲೇ ಮಾಜಿ ಮುಖ್ಯಮಂತ್ರಿಗಳಾದಂತಹ ಬಿ.ಎಸ್ ಯಡಿಯೂರಪ್ಪ, ಡಿ.ವಿ ಸದಾನಂದಗೌಡ, ಜಗದೀಶ್ ಶೆಟ್ಟರ್ ಮತ್ತು ಎಚ್.ಡಿ ಕುಮಾರಸ್ವಾಮಿ ದೆಹಲಿಗೆ ಬಂದಾಗ ಓಡಾಡಿದ್ದರಂತೆ.

2010ರ ಕಾರಿನ ಅವಧಿ ಮುಕ್ತಾಯಗೊಂಡ ಹಿನ್ನೆಲೆ ಸಾರ್ವಜನಿಕರ ಹರಾಜಿಗೆ ಇಡಲಾಗಿತ್ತು. ಸರ್ಕಾರಿ ಮೌಲ್ಯದ 1.35 ಲಕ್ಷ ಬಿಡ್ ನಿಗದಿ ಮಾಡಲಾಗಿತ್ತು. ಆದರೆ, ಇದನ್ನು 2.10 ಲಕ್ಷಕ್ಕೆ ಬಿಡ್ ಮಾಡಿ ಕೋಲಾರ ಮೂಲದ ಕಾಂಗ್ರೆಸ್ ಮುಖಂಡ ಟಿ.ಆರ್ ರಾಮಪ್ಪ ತಮ್ಮ ಸ್ವಂತ ಮಾಡಿಕೊಂಡು ಗಮನ ಸೆಳೆದಿದ್ದಾರೆ.
ಈ ಬಗ್ಗೆ ಮಾತನಾಡಿರುವಂತ ಟಿ.ಆರ್ ರಾಮಪ್ಪ, ನಾಲ್ವರು ಮಾಜಿ ಮುಖ್ಯಮಂತ್ರಿಗಳು ಓಡಾಡಿದಂತ ಅದೃಷ್ಟದ ಕಾರು ಇದಾಗಿದೆ. ಈ ಕಾರಣದಿಂದಲೇ ನಾನು ಹೊಂಡಾ ಸಿ ಆರ್ ಬಿ ಕಾರನ್ನು ಬಿಡ್ ಮಾಡಿ ಖರೀದಿಸಿದ್ದಾಗಿ ತಿಳಿಸಿದ್ದಾರೆ.
ಎಚ್‌ಡಿ ಕುಮಾರಸ್ವಾಮಿ ಆಕ್ರೋಶ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು (ಏಪ್ರಿಲ್ 4) ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಆಕ್ರಮಣಕಾರರಾದ ಮಹಮ್ಮದ್ ಘೋರಿ, ಮಹಮ್ಮದ್ ಘಜ್ನಿ ಮತ್ತು ಮಾಲಿಕ್ ಕಫೂರ್ ರಾಜ್ಯವನ್ನು ಆಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ರಾಜ್ಯವು ವಿನಾಶದ ಅಂಚಿನಲ್ಲಿದೆ. ಈ ಸರ್ಕಾರದ ಅಕ್ರಮಗಳು, ಲೂಟಿ ಮತ್ತು ದರೋಡೆ ರಾಜ್ಯವನ್ನು ಈ ಹಂತಕ್ಕೆ ತಂದಿದೆ. ಮಹಮ್ಮದ್ ಘಜ್ನಿ, ಮಹಮ್ಮದ್ ಘೋರಿ ಮತ್ತು ಮಾಲಿಕ್ ಕಫೂರ್ ರಾಜ್ಯವನ್ನು ಆಳುತ್ತಿದ್ದಾರೆ. ಅವರು ವಿಧಾನಸೌಧದ ಮೂರನೇ ಮಹಡಿಯಲ್ಲಿ ಕುಳಿತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು.
ನಾನು ಈ ಸರ್ಕಾರಕ್ಕೆ ಸವಾಲು ಹಾಕುತ್ತೇನೆ. 40 ವರ್ಷಗಳ ಹಿಂದೆ, ನಾನು 46 ಎಕರೆ ಭೂಮಿಯನ್ನು ಖರೀದಿಸಿದೆ. ನಾನು ರೈತನಂತೆ ಅದನ್ನು ಪ್ರಾಮಾಣಿಕವಾಗಿ ಬೆಳೆಸಿದ್ದೇನೆ. ನಾಲ್ಕು ದಶಕಗಳಲ್ಲಿ ಇಂತಹ ದ್ವೇಷಪೂರಿತ ರಾಜಕೀಯ ಮತ್ತು ಅಧಿಕಾರಿ ದುರುಪಯೋಗ ಎಂದಿಗೂ ನೋಡಿಲ್ಲ ಎಂದು ಹೇಳಿದರು.
ಸರ್ಕಾರ ಚಾರಿತ್ರ್ಯ ಹರಣಕ್ಕೆ ಇಳಿಯಬಾರದು. ಅತಿಕ್ರಮಣ ನಡೆದರೆ ಕ್ರಮ ಕೈಗೊಳ್ಳಿ. ಆದರೆ ನನ್ನ ಹೆಸರಿಗೆ ಕಳಂಕ ತರಬೇಡಿ. ನಾನು ತಲೆ ಬಾಗುವುದಿಲ್ಲ ಎಂದು ಹೇಳಿದರು. ಇನ್ನು ರೈತರಿಂದ ಮಾರಾಟ ಪತ್ರಗಳನ್ನು ಸಂಗ್ರಹಿಸಲು ಪೊಲೀಸರನ್ನು ಕೇತಗಾನಹಳ್ಳಿಗೆ ಕಳುಹಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ರಾಜ್ಯದ ಇತಿಹಾಸದಲ್ಲಿ ಎಂದಾದರೂ ಇಂತಹ ಘಟನೆ ನಡೆದಿದೆಯೇ? ಎಂದು ಪ್ರಶ್ನೆ ಮಾಡುವ ಮೂಲಕ ಆಕ್ರೋಶ ಹೊರಹಾಕಿದರು.












Click it and Unblock the Notifications