ಕೆಲವು ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳು ಇನ್ನೂ ನಿಗೂಢ
ಬೆಂಗಳೂರು, ಮಾ. 26 : ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬುಧವಾರವೇ ಕೊನೆಯ ದಿನವಾದರೂ ಜೆಡಿಎಸ್ ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳ್ಳದಿರುವುದು ಗೊಂದಲಕ್ಕೆ ಕಾರಣವಾಗಿದೆ. ಬೆಳಗಾವಿ, ಬಾಗಲಕೋಟೆ, ವಿಜಾಪುರ, ಧಾರವಾಡ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಯಾರು ಎಂಬುದು ಇನ್ನೂ ನಿಗೂಢವಾಗಿದೆ.
ಮಾ.26ರ ಬುಧವಾರ ಮಧ್ಯಾಹ್ನ 3ಗಂಟೆಯೊಳಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬೇಕು. ಆದರೆ, ಕೆಲವು ಜಿಲ್ಲೆಗಳ ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ಮಂಗಳವಾರ ಅಂತಿಮಗೊಂಡಿಲ್ಲ. ಆಯಾ ಜಿಲ್ಲಾ ಘಟಕಕ್ಕೆ ಅಭ್ಯರ್ಥಿಗಳ ಆಯ್ಕೆ ತೀರ್ಮಾನವನ್ನು ಬಿಡಲಾಗಿದ್ದು, ಜಿಲ್ಲಾಧ್ಯಕ್ಷರಿಗೇ ಬಿ ಫಾರಂ ವಿತರಣೆ ಹೊಣೆ ವಹಿಸಲಾಗಿದೆ ಎಂದು ತಿಳಿದುಬಂದಿದೆ. [ಜೆಡಿಎಸ್ ಪಟ್ಟಿ ನೋಡಿ]

ಚಿಕ್ಕಬಳ್ಳಾಪುರಿಂದ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದು, ಮೈಸೂರು-ಕೊಡಗು ಕ್ಷೇತ್ರದಿಂದ ಮಾಜಿ ಉಪ ಲೋಕಾಯುಕ್ತ ಚಂದ್ರಶೇಖರಯ್ಯ ಸ್ಪರ್ಧಿಸುತ್ತಿದ್ದಾರೆ ಎಂದು ಬುಧವಾರ ಬೆಳಗ್ಗೆ ಘೋಷಿಸಲಾಗಿದೆ. ಆದರೆ, ಬೆಳಗಾವಿ, ಬಾಗಲಕೋಟೆ, ವಿಜಾಪುರ, ಧಾರವಾಡ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಯಾರು ಎಂಬುದು ಅಂತಿಮವಾಗಿಲ್ಲ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿ]
ಜೆಡಿಎಸ್ ಸೋಮವಾರ ಬೆಂಗಳೂರು ಉತ್ತರಕ್ಕೆ ಅಬ್ದುಲ್ ಅಜೀಂ, ಬೆಂಗಳೂರು ಸೆಂಟ್ರಲ್ ನಿಂದ ನಂದಿನಿ ಆಳ್ವಾ, ಬೆಂಗಳೂರು ದಕ್ಷಿಣದಿಂದ ರುತ್ ಮನೋರಮಾ, ಚಿಕ್ಕಬಳ್ಳಾಪುರದಿಂದ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ ಎಂದು ಪ್ರಕಟಿಸಿತ್ತು. ಆದರೆ, ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿರಲಿಲ್ಲ ಮಂಗಳವಾರ ದೇವೇಗೌಡರು ಹಾನದಲ್ಲಿ ನಾಮಪತ್ರ ಸಲ್ಲಿಸಿದರು. ಕುಮಾರಸ್ವಾಮಿ ಬೆಳಗಾವಿ ಪ್ರವಾಸದಲ್ಲಿ ಬ್ಯುಸಿಯಾಗಿದ್ದರು. ಆದ್ದರಿಂದ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ.
ಅಭ್ಯರ್ಥಿ ಬದಲು : ಜೆಡಿಎಸ್ ಮೊದಲು ರಾಯಚೂರು ಕ್ಷೇತ್ರದಿಂದ ಮಾಜಿ ಸಚಿವ ರಾಜಾ ಅಮರೇಶ್ವರ ನಾಯಕ ಅವರು ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿತ್ತು. ಆದರೆ, ಅವರು ಸ್ಪರ್ಧಿಸಲು ನಿರಾಕರಿಸಿದ್ದರಿಂದ ನಿವೃತ್ತ ಐಎಎಸ್ ಅಧಿಕಾರಿ ಬಿ. ವೃಷಬೇಂದ್ರ ನಾಯಕ್ ಅವರಿಗೆ ಟಿಕೆಟ್ ನೀಡಲಾಗಿದೆ.
ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ
ಕೋಲಾರ - ಕೇಶವ
ಬೆಂಗಳೂರು ಗ್ರಾಮಾಂತರ - ಆರ್ ಪ್ರಭಾಕರ ರೆಡ್ಡಿ
ಚಿತ್ರದುರ್ಗ - ಗೂಳಿಹಟ್ಟಿ ಶೇಖರ್
ಉಡುಪಿ ಚಿಕ್ಕಮಗಳೂರು - ಧನಂಜಯ ಕುಮಾರ್
ಬೀದರ್ -ಬಂಡೆಪ್ಪ ಕಾಂಶಂಪುರ್
ಚಿಕ್ಕೋಡಿ - ಶ್ರೀಮಂತ್ ಬಾಳಾಸಾಬ್ ಪಾಟೀಲ್
ಮಂಡ್ಯ - ಸಿ ಎಸ್ ಪುಟ್ಟರಾಜು
ಚಾಮರಾಜನಗರ - ಎಂ. ಕೋಟೆ ಶಿವಣ್ಣ
ಉತ್ತರ ಕನ್ನಡ - ಶಿವಾನಂದ ನಾಯಕ್
ರಾಯಚೂರು - ವೃಷಬೇಂದ್ರ ನಾಯಕ್
ಗುಲ್ಬರ್ಗ - ಎಸ್ ಡಿ ಸಾಗರ್
ಹಾಸನ - ಎಚ್ ಡಿ ದೇವೇಗೌಡ
ತುಮಕೂರು - ಎ ಕೃಷ್ಣಪ್ಪ
ಹಾವೇರಿ - ರವಿ ಮೆಣಸಿನಕಾಯಿ
ಶಿವಮೊಗ್ಗ - ಗೀತಾ ಶಿವರಾಜ್ ಕುಮಾರ್
ಬೆಂಗಳೂರು ಉತ್ತರ - ಅಬ್ದುಲ್ ಅಜೀಂ
ಬೆಂಗಳೂರು ಸೆಂಟ್ರಲ್ - ನಂದಿನಿ ಆಳ್ವಾ
ಬೆಂಗಳೂರು ದಕ್ಷಿಣ - ರುತ್ ಮನೋರಮಾ
ಚಿಕ್ಕಬಳ್ಳಾಪುರ - ಎಚ್.ಡಿ.ಕುಮಾರಸ್ವಾಮಿ
ಮೈಸೂರು - ಚಂದ್ರಶೇಖರಯ್ಯ
ಬಳ್ಳಾರಿ - ರವಿ ನಾಯಕ್












Click it and Unblock the Notifications