'ನಾಳೆ ಅಥವ ನಾಡಿದ್ದು ದೆಹಲಿಗೆ ಹೋಗುತ್ತೇನೆ'

Posted By:
Subscribe to Oneindia Kannada

ಬೆಂಗಳೂರು, ಜೂನ್ 15 : 'ಸಚಿವ ಸಂಪುಟ ಪುನಾರಚನೆ ಆಗುತ್ತದೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿರ್ಧಾರವನ್ನು ಸಚಿವರಿಗೆ ತಿಳಿಸಿದ್ದೇನೆ. ಸಹಕಾರ ನೀಡುವಂತೆ ಮನವಿ ಮಾಡಿದ್ದೇನೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬುಧವಾರ ವಿಧಾನಸೌಧದಲ್ಲಿ ನಡೆದ ಮಂತ್ರಿ ಪರಿಷತ್ ಸಭೆಯ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, 'ನಾಳೆ ಅಥವ ನಾಡಿದ್ದು ದೆಹಲಿಗೆ ಹೋಗುತ್ತೇನೆ. ಸಂಪುಟ ಪುನಾರಚನೆ ಆಗುವುದು ಖಚಿತ' ಎಂದರು. [ಸಿದ್ದರಾಮಯ್ಯ ಸಂಪುಟ ಸೇರುವವರು ಯಾರು?]

siddaramaiah

'ಯಾವಾಗ ಸಂಪುಟ ಪುನಾರಚನೆ ಎಂಬುದನ್ನು ಎಲ್ಲರಿಗೂ ತಿಳಿಸುತ್ತೇನೆ. ಇಂದಿನ ಸಭೆಯಲ್ಲಿ ಸಚಿವರಿಗೆ ಪಕ್ಷದ ನಿರ್ಧಾರವನ್ನು ತಿಳಿಸಿದ್ದೇನೆ. ಸಹಕಾರ ನೀಡುವಂತೆ ಮನವಿ ಮಾಡಿದ್ದೇನೆ' ಎಂದು ಸಿದ್ದರಾಮಯ್ಯ ತಿಳಿಸಿದರು. [ಯಾರ ಮಂತ್ರಿಗಿರಿ ಕೈ ತಪ್ಪಬಹುದು?]

ಯಾವ ಸಚಿವರನ್ನು ಸಂಪುಟದಿಂದ ಕೈ ಬಿಡಲಾಗುತ್ತದೆ?, ಯಾರನ್ನು ಹೊಸದಾಗಿ ಸೇರಿಸಿಕೊಳ್ಳಲಾಗುತ್ತದೆ? ಮುಂತಾದ ಯಾವ ಪ್ರಶ್ನೆಗೂ ಸಿದ್ದರಾಮಯ್ಯ ಅವರು ಉತ್ತರ ನೀಡಲಿಲ್ಲ. 'ಸಂಪುಟ ಪುನಾರಚನೆ ಆಗುವುದು ಖಚಿತ' ಎಂದು ಮಾತ್ರ ಹೇಳಿ ಅವರು ಹೊರಟು ಹೋದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
After Mantri Parishad meeting at Vidhana Soudha Karnataka Chief Minister Siddaramaiah said, he will visit Delhi to meet high command leaders to discuss about cabinet reshuffle.
Please Wait while comments are loading...