ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ರಾಜ್ಯ ಸಚಿವ ಸಂಪುಟದ ನಿರ್ಣಯವೇನು?

|
Google Oneindia Kannada News

ಬೆಂಗಳೂರು, ಜುಲೈ 22: ರಾಜ್ಯ ಸರ್ಕಾರ ಮಹತ್ವದ ಸಚಿವ ಸಂಪುಟ ಸಭೆ ಇಂದು ನಡೆಯಲಿದೆ. ರಾಜ್ಯದಲ್ಲಿನ ವಿವಿಧ ಇಲಾಖೆಗೆ ಸಂಬಂಧಿಸಿದ ಹಲವು ಯೋಜನಗಳಿಗೆ ಅನುಮೋದನೆ ದೊರೆಯುವ ನಿರೀಕ್ಷೆಯನ್ನು ಹೊಂದಲಾಗಿದೆ. ಇನ್ನು ಪಶ್ಚಿಮ ಘಟ್ಟಗಳ ಕುರಿತಾಗಿ ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರ ನೀಡಿರುವ ಐದನೇ ಅಧಿಸೂಚನೆಯ ವಿರುದ್ಧ ನಿರ್ಣಯವನ್ನು ಕೈಗೊಳ್ಳಲು ಸಹ ಸಜ್ಜಾಗಿದ್ದಾರೆ. ಸಂಪುಟ ಸಭೆಯಲ್ಲಿನ ಹೈಲೈಟ್ಸ್ ಇಲ್ಲಿದೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಹಲವು ‌ಮಹತ್ವದ ವಿಷಯಗಳ ಬಗ್ಗೆ ಚರ್ಚೆ, ಯೋಜನೆಗಳಿಗೆ ಒಪ್ಪಿಗೆ ಸಾಧ್ಯತೆಯಿದೆ.

ಜಲಜೀವನ್ ಮಿಷನ್ ಅಡಿ ಕುಡಿಯುವ ನೀರು ಯೋಜನೆಯಾದ ಕಿತ್ತೂರು ತಾ.ದೇಗಾಂವ 16 ಗ್ರಾಮಗಳಿಗೆ ನೀರು ಪೂರೈಕೆಗೆ 565 ಕೋಟಿ ಮೊತ್ತದ ಯೋಜನೆಗೆ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ.

Cabinet Meeting of Karnataka Govt on July 22; Expectations Projects Likely to Get Approval

ಯಾದಗಿರಿಯ ದೇವತ್ಕಲ್ ಏತ ನೀರಾವರಿ ಯೋಜನೆ ಚರ್ಚೆ ನಡೆಸಲಾಗುತ್ತದೆ. ತಳ್ಳಿಹಳ್ಳಿ,ಬೈರಮಡ್ಡಿ ಫೀಡರ್ ಕಾಲುವೆ ಕಾಮಗಾರಿಗಾಗಿ 119 ಕೋಟಿ ರೂ ಯೋಜನೆಗೆ ಒಪ್ಪಿಗೆ ಸಾಧ್ಯತೆ ಇದೆ. ಹುಕ್ಕೇರಿ ತಾಲೂಕಿನ 19 ಕೆರೆಗಳಿಗೆ ನೀರು ಪೂರೈಕೆ, ಹಿರಣ್ಯಕೇಶಿ ನದಿಯಿಂದ ಪೂರೈಕೆಗಾಗಿ ಒಟ್ಟು 42 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ, ಇದಕ್ಕೆ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ.

ಮಚಕಂಡಿ ಕೆರೆಗೆ ಘಟಪ್ರಭಾದಿಂದ ನೀರು ಪೂರೈಕೆ ಮಾಡಲು 49 ಕೋಟಿ ರೂಗಳ ಅನುದಾನಕ್ಕೆ ಒಪ್ಪಿಗೆ ಸಾಧ್ಯತೆ ಇದೆ. ಕೊಪ್ಪಳದ ಹಿರೆಹಳ್ಳ ಬ್ಯಾರೇಜ್ ನಿರ್ಮಾಣಕ್ಕೆ ಅನುಮತಿ ದೊರೆಯುವ ನಿರೀಕ್ಷೆ ಇದೆ. ಬಳ್ಳಾರಿ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ 121 ಕೋಟಿ ಅನುದಾನ ಬಿಡುಗಡೆ ಮಾಡಿ ಸಂಪುಟ ಸಭೆಯಲ್ಲಿ ಅನುಮೋದನೆ ನೀಡುವ ಸಾಧ್ಯತೆ ಇದೆ.

ಕಟ್ಟಡ ಕಾರ್ಮಿಕರ ಉದ್ಯೋಗ ತಿದ್ದುಪಡಿ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯೂ ಇದೆ. ಕರ್ನಾಟಕ ಏರೋಸ್ಫೇಸ್ ಡಿಫೆನ್ಸ್ ನೀತಿಗೆ ಅನುಮೋದನೆ ದೊರೆಯುತ್ತದೆಯೇ? ಎನ್ನುವುದು ಅನುಮಾನವಾಗಿದೆ. ನೂತನ ಜವಳಿ ನೀತಿಗೆ ಸಮ್ಮತಿ ಸಾಧ್ಯತೆಗಳಿದ್ದು ಕರ್ನಾಟಕ ನಾವೀನ್ಯತಾ ಕಾಯ್ದೆಗೆ ತಿದ್ದುಪಡಿ ಬಗ್ಗೆ ಚರ್ಚೆಯಾಗಲಿದೆ.

ಶಾಲೆಯ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆಗೆ 132 ಕೋಟಿ ಅನುದಾನ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಕರ್ನಾಟಕ ಪೊಲೀಸ್ ತಿದ್ದುಪಡಿ ಕಾಯ್ದೆ ಬಗ್ಗೆ ಚರ್ಚೆ ಸಾಧ್ಯತೆಯಿದೆ. ಕುರುಗೋಡಿನಲ್ಲಿ 100 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಒಪ್ಪಿಗೆ ಸಿಗುವ ಸಾಧ್ಯತೆ.

ಸನ್ನಡತೆಯ ಜೀವಾವಧಿ ಕೈದಿಗಳ ಬಿಡುಗಡೆ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಕೈದಿಗಳ ಬಿಡುಗಡೆ ಕುರಿತು ಚರ್ಚೆಯಾಗಲಿದೆ. ಹೇರೂರಿನ 16 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗೆ 43 ಕೋಟಿ ವೆಚ್ಚಕ್ಕೆ ಅನುಮೋದನೆ ಸಾಧ್ಯತೆ.

ಅಥಣಿಯ ಸತ್ತಿ ಗ್ರಾಮದ ಕುಡಿಯುವ ನೀರಿನ ಯೋಜನೆಗೆ 79 ಕೋಟಿ ವೆಚ್ಚಕ್ಕೆ ಅನುಮೋದನೆ ಸಾಧ್ಯತೆ. ಮೈಸೂರು ವಿಮಾನ ನಿಲ್ದಾಣ ಉನ್ನತೀಕರಣ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ವಿಮಾನ ನಿಲ್ದಾಣವೆಂದು ಘೋಷಣೆ ಮಾಡುವ ಸಾಧ್ಯತೆ ಇದೆ. 240 ಎಕರೆ ರಾಷ್ಟ್ರೀಯ ವಿಮಾನ ಪ್ರಾಧಿಕಾರಕ್ಕೆ ಹಸ್ತಾಂತರಕ್ಕೆ ಒಪ್ಪಿಗೆ ಸಿಗಬಹುದು.

Recommended Video

KLರಾಹುಲ್ ಗೆ ಕೊರೋನಾ ಪಾಸಿಟಿವ್: ಕಾಯಿಲೆಯಲ್ಲೇ ಕಾಲ ಕಳೆಯುವಂತಾಯ್ತು ಕನ್ನಡಿಗನ ಪರಿಸ್ಥಿತಿ | *Cricket | OneIndia

ಕಸ್ತೂರಿ ರಂಗನ್ ವರದಿಗೆ ವಿರೋಧ; ಪಶ್ಚಿಮಘಟ್ಟ ಪರಿಸರ ಸೂಕ್ಷ್ಮವಲಯ ಎಂದು ಗುರುತಿಸಲಾಗಿರುವ ಪ್ರದೇಶಗಳಗೆ ತೊಂದರೆಯಾಗುವ ಕಾರಣದಿಂದಾಗಿ ಕೇಂದ್ರ ಪರಿಸರ ಇಲಾಖೆ ಹೊರಡಿಸಿರುವ 5ನೇ ಅಧಿಸೂಚನೆಗೆ ವಿರೋಧ ವ್ಯಕ್ತಪಡಿಸಲು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗುತ್ತದೆ.

English summary
Karnataka Cabinet Meeting on July 22; Expectations and List of Projects Likely to Get Approval.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X