• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಎಸ್ವೈ ಕಣ್ಣೀರಿಗೆ ಪ್ರತೀಕಾರ, ನಳಿನ್ ಕಟೀಲ್ ತಂಡಕ್ಕೆ ಮರ್ಮಾಘಾತ!

|
Google Oneindia Kannada News

ಕರ್ನಾಟಕದ ನೂತನ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಆಯ್ಕೆಯ ವಿಚಾರದಲ್ಲಿ ಹಲವು ಚರ್ಚೆಗಳು ನಡೆಯುತ್ತಿದೆ. ಎರಡೂ ವಿಚಾರದಲ್ಲಿ ಯಡಿಯೂರಪ್ಪನವರು ಮೇಲುಗೈ ಸಾಧಿಸಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಇತ್ತ, ಬಿಜೆಪಿಗೆ ಯಡಿಯೂರಪ್ಪನವರೇ ಹೈಕಮಾಂಡ್ ಎಂದು ಕಾಂಗ್ರೆಸ್ ಲೇವಡಿ ಮಾಡುತ್ತಿದೆ.

ಜಾತಿ ಪ್ರಾತಿನಿಧ್ಯಕ್ಕೆ ಒತ್ತು ಕೊಟ್ಟ ಹಾಗೇ, ಜಿಲ್ಲಾವಾರು ಪ್ರಾತಿನಿಧ್ಯತೆಗೆ ಒತ್ತು ಕೊಡಲಿಲ್ಲ ಎನ್ನುವ ಕೂಗು ಜೋರಾಗಿ ಕೇಳಿ ಬರುತ್ತಿದೆ. ಮಧ್ಯ ಕರ್ನಾಟಕ ಭಾಗಕ್ಕೆ, ಬಿಜೆಪಿಯ ಶಕ್ತಿಕೇಂದ್ರವಾದ ಕೊಡಗು ಜಿಲ್ಲೆಗೂ ಪ್ರಾತಿನಿಧ್ಯ ಸಿಗಲಿಲ್ಲ ಎಂದು ಆ ಭಾಗದ ನಾಯಕರು ಬೇಸರ ವ್ಯಕ್ತ ಪಡಿಸಿದ್ದಾರೆ.

ಯಡಿಯೂರಪ್ಪ ನೇಮಿಸಿದ್ದ ಸಲಹೆಗಾರರಿಗೆ ಬೊಮ್ಮಾಯಿ 'ಬಿಗ್ ಗೇಟ್ ಪಾಸ್'ಯಡಿಯೂರಪ್ಪ ನೇಮಿಸಿದ್ದ ಸಲಹೆಗಾರರಿಗೆ ಬೊಮ್ಮಾಯಿ 'ಬಿಗ್ ಗೇಟ್ ಪಾಸ್'

ಸಂಪುಟ ವಿಸ್ತರಣೆಗೆ ಎರಡು ದಿನ ಸತಾಯಿಸಿ ಬಿಜೆಪಿ ವರಿಷ್ಠರು ಅನುಮತಿಯನ್ನು ನೀಡಿದ್ದಾರೆ. ಎಲ್ಲದಕ್ಕೂ ಹೈಕಮಾಂಡ್ ಎಂದು ಕಾಂಗ್ರೆಸ್ ಪಕ್ಷವನ್ನು ದೂರುತ್ತಿದ್ದ ಕೇಸರಿ ಪಡೆಗಳು ಈಗೇನು ಹೇಳುವಿರಿ ಎಂದು ಕೆಪಿಸಿಸಿ, ಬಿಜೆಪಿಯನ್ನು ಕುಟುಕಿದೆ. ಯಡಿಯೂರಪ್ಪನವರ ಮಾತೇ ಅಂತಿಮವಾಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಕೆಪಿಸಿಸಿ ಕೆಣಕಿದೆ.

ವಲಸೆ ಬಂದ ಎಲ್ಲರಿಗೂ ಬಸವರಾಜ ಬೊಮ್ಮಾಯಿ ಸರಕಾರದಲ್ಲಿ ಸ್ಥಾನ ಸಿಕ್ಕಿದೆ. ಆ ಮೂಲಕ, ಇವರ ಕಾಂಗ್ರೆಸ್ ಘರ್ ವಾಪಸಿಗೆ ಸದ್ಯಕ್ಕೆ ತೆರೆಬಿದ್ದಿದೆ. ಇವರಿಗೆ ನೂತನ ಸಂಪುಟದಲ್ಲಿ ಸ್ಥಾನ ಸಿಗದಿದ್ದರೆ, ಮತ್ತೆ ಕಾಂಗ್ರೆಸ್ ಕಡೆ ಹೋಗುವ ಚರ್ಚೆ ಜೋರಾಗಿರುವ ಸಮಯದಲ್ಲಿ ಬಿಜೆಪಿ ಸರಿಯಾದ ಹೆಜ್ಜೆಯನ್ನು ಇಟ್ಟಿದೆ.

 ದೆಹಲಿ ಸುತ್ತಿದವರು ಪಲ್ಟಿ, ಬಿಎಸ್ವೈ ಸುತ್ತಿದವರಿಗೆ ಲಾಟರಿ! ಇದೇ ರಾಜಕೀಯದ ತಂತ್ರ, ಮಂತ್ರ ದೆಹಲಿ ಸುತ್ತಿದವರು ಪಲ್ಟಿ, ಬಿಎಸ್ವೈ ಸುತ್ತಿದವರಿಗೆ ಲಾಟರಿ! ಇದೇ ರಾಜಕೀಯದ ತಂತ್ರ, ಮಂತ್ರ

   ಬೊಮ್ಮಾಯಿ ಸಂಪುಟದ ನೂತನ ಮಂತ್ರಿ ಮಂಡಲ | Oneindia Kannada

   ಕಟೀಲ್ ಕಾಮಿಡಿ ಮಾಡಲು ಮಾತ್ರ, ಬಿಜೆಪಿಗೆ ಯಡಿಯೂರಪ್ಪನವರೇ ಹೈಕಮಾಂಡ್

   ಮುಖ್ಯಮಂತ್ರಿಗಳ ಆಯ್ಕೆಯ ವಿಚಾರದಲ್ಲೂ ಕರ್ನಾಟಕ ಕಾಂಗ್ರೆಸ್ ಘಟಕ ಬಿಜೆಪಿಯನ್ನು ಲೇವಡಿ ಮಾಡಿತ್ತು. ಈಗ, ಸಂಪುಟ ವಿಸ್ತರಣೆಯ ಸಂಬಂಧವೂ ಟ್ವೀಟ್ ಮಾಡಿದೆ. ಕೆಪಿಸಿಸಿ ಮಾಡಿದ ಟ್ವೀಟ್ ಹೀಗಿದೆ, "@BSYBJP ಅವರು ತಮ್ಮ ಕಣ್ಣೀರಿಗೆ ತಕ್ಕ ಪ್ರತಿಕಾರ ತೀರಿಸಿಕೊಳ್ಳುತ್ತಿದ್ದಾರೆ, ತಮ್ಮ ವಿರುದ್ಧದ ಬಂಡಾಯಗಾರರನ್ನ ಸಂಪುಟದಿಂದ ದೂರವಿಡುವ ಮೂಲಕ #ಮೀರ್‌ಸಾದಿಕ್

   @nalinkateel ತಂಡಕ್ಕೆ ಮರ್ಮಾಘಾತ ನೀಡಿದ್ದಾರೆ! ಕಟೀಲ್ ಕಾಮಿಡಿ ಮಾಡಲು ಮಾತ್ರ! ಸಿಎಂ ಆಯ್ಕೆಯಿಂದ ಸಚಿವರ ಆಯ್ಕೆವರೆಗೂ BSYಅವರೇ ಹೈಕಮಾಂಡ್ ಆಗಿದ್ದಾರೆ".

   ಬಿಜೆಪಿ ಈಗ ತಮ್ಮದೇ 'ಬಲಿಷ್ಠ ಹೈಕಮಾಂಡ್' ಎಂದು ಬಿಂಬಿಸಿಕೊಳ್ಳುತ್ತಾ ಡಬಲ್ ಸ್ಟ್ಯಾಂಡರ್ಡ್

   ಹಲವು ವರ್ಷಗಳ ಹಿಂದೆ ಕಾಂಗ್ರೆಸ್ಸಿನಲ್ಲಿ ಹೈಕಮಾಂಡ್ ಸಂಸ್ಕೃತಿ ಅತಿ ಹೆಚ್ಚಾಗಿತ್ತು. ಸೋನಿಯಾ ಗಾಂಧಿಯವರಿಗೆ ಸರ್ಜರಿಯಾಗುವ ಮುನ್ನ ಅವರು ಕೂಡಾ ಪಕ್ಷದಲ್ಲಿ ಸಂಪೂರ್ಣ ಹಿಡಿತವನ್ನು ಸಾಧಿಸಿದ್ದರು. ಆ ವೇಳೆ, ಎಲ್ಲದಕ್ಕೂ ಹೈಕಮಾಂಡ್ ಅನುಮತಿಯನ್ನು ಪಡೆಯಬೇಕಾಗಿತ್ತು. ಈ ಬಗ್ಗೆ ಕೆಪಿಸಿಸಿ ಟ್ವೀಟ್ ಮಾಡಿದ್ದು ಹೀಗೆ, "ಮೊದಲೆಲ್ಲ ಕಾಂಗ್ರೆಸ್‌ಗೆ 'ಹೈಕಮಾಂಡ್ ಸಂಸ್ಕೃತಿ' ಎಂದು ಹೇಳುತ್ತಿದ್ದ ಬಿಜೆಪಿ ಈಗ ತಮ್ಮದೇ 'ಬಲಿಷ್ಠ ಹೈಕಮಾಂಡ್' ಎಂದು ಬಿಂಬಿಸಿಕೊಳ್ಳುತ್ತಾ ತಮ್ಮ ಡಬಲ್ ಸ್ಟ್ಯಾಂಡರ್ಡ್ ನೀತಿ ನಿರೂಪಿಸಿತ್ತು! @BSYBJP ಅವರನ್ನು ಇಳಿಸುವಾಗ ಇದ್ದ ಬಲಶಾಲಿ ದೆಹಲಿ ಹೈಕಮಾಂಡ್, ಇಳಿದಮೇಲೆ ಮಂಡಿಯೂರಿ ಶರಣಾಯಿತಲ್ಲ ಏಕೆ @BJP4Karnataka" ಎಂದು ಕೆಪಿಸಿಸಿ ಪ್ರಶ್ನಿಸಿದೆ.

   ಕಾಂಗ್ರೆಸ್ಸಿನವರು ದಲಿತ ಸಮುದಾಯದವರು ಮುಂದಿನ ಸಿಎಂ ಎಂದು ಘೋಷಣೆ ಮಾಡುತ್ತಾರಾ

   ಬಸವರಾಜ ಬೊಮ್ಮಾಯಿಯವರ ನೂತನ ಸಂಪುಟದಲ್ಲಿ ಜಾತಿವಾರು ಪ್ರಾತಿನಿಧ್ಯತೆ ನೀಡಲಿಲ್ಲ ಎನ್ನುವುದು ಕಾಂಗ್ರೆಸ್ಸಿನ ಇನ್ನೊಂದು ಆರೋಪ. ಕಾಂಗ್ರೆಸ್ಸಿನವರು ದಲಿತ ಸಮುದಾಯದವರು ಮುಂದಿನ ಸಿಎಂ ಎಂದು ಘೋಷಣೆ ಮಾಡುತ್ತಾರಾ ಎಂದು ನಳಿನ್ ಕಟೀಲ್ ಪ್ರಶ್ನಿಸಿದ್ದರು. ಇದಕ್ಕೆ ಕಾಂಗ್ರೆಸ್ ಟ್ವೀಟ್ ಹೀಗಿದೆ, "#ದವಳಗಿರಿಸರ್ಕಾರ ದ ಸಂಪುಟದಲ್ಲಿ ದಲಿತರನ್ನ ಕಡೆಗಣಿಸಿ
   @BJP4Karnataka ತನ್ನ ದಲಿತ ವಿರೋಧಿ ನೀತಿಯನ್ನ ಮತ್ತೊಮ್ಮೆ ನಿರೂಪಿಸಿದೆ. ದಲಿತರನ್ನು ಸಿಎಂ ಮಾಡುವುದಿರಲಿ ಕೊನೆ ಪಕ್ಷ ಸಂಪುಟದಲ್ಲಿಯೂ ಪ್ರಾತಿನಿಧ್ಯ ನೀಡದ ಬಿಜೆಪಿ ಇತರ ಪಕ್ಷಗಳಿಗೆ ಆರೋಪಿಸುವುದು ಹಾಸ್ಯಾಸ್ಪದ. ಬಿಜೆಪಿಯಲ್ಲಿ ದಲಿತ, ಹಿಂದುಳಿದವರಿಗೆ ಕೊನೆ ಸಾಲಿನ ಕುರ್ಚಿ ಮಾತ್ರ".

   ನಾಯಕತ್ವ ಬದಲಾವಣೆಯ ವಿಚಾರದಲ್ಲೂ ಕಾಂಗ್ರೆಸ್ ಪಾರ್ಟಿ ಬಿಜೆಪಿಯನ್ನು ಟೀಕಿಸಿತ್ತು

   ನಾಯಕತ್ವ ಬದಲಾವಣೆಯ ವಿಚಾರದಲ್ಲೂ ಕಾಂಗ್ರೆಸ್ ಪಾರ್ಟಿ ಬಿಜೆಪಿಯನ್ನು ಟೀಕಿಸಿತ್ತು. ಸಿಎಂ ಬದಲಾವಣೆ ಇದಕ್ಕೆ ಪರಿಹಾರವಲ್ಲ ಎಂದು ಹೇಳಿದ್ದ ಕಾಂಗ್ರೆಸ್ ಈ ರೀತಿ ಟ್ವೀಟ್ ಮಾಡಿತ್ತು. "ನಾಯಕತ್ವ ಬದಲಾವಣೆಯಿಂದ, ಬದಲಾದ ಸಂಪುಟದಿಂದ ರಾಜ್ಯದಲ್ಲಿ ಯಾವ ಬದಲಾವಣೆಯೂ ಆಗದು, ಅದೇ ಆಂತರಿಕ ಕಿತ್ತಾಟ, ಅದೇ ಭ್ರಷ್ಟಾಚಾರ, ಅದೇ ನಿರ್ಲಕ್ಷ್ಯ ಧೋರಣೆ, ಅದೇ ಅರಾಜಕತೆ, ಅದೇ ಅಸಾಮರ್ಥ್ಯ ಮುಂದುವರೆಯಲಿದೆ. ಏಕೆಂದರೆ ಬಿಜೆಪಿಯಲ್ಲಿ ಇರುವವರೆಲ್ಲರೂ ಒಂದೇ ತರದವರು! ಒಟ್ಟಿನಲ್ಲಿ @BJP4Karnataka ಆಡಳಿತವೆಂದರೆ ರಾಜ್ಯಕ್ಕೆ ದುರ್ದಿನಗಳು." ಎಂದು ಕಾಂಗ್ರೆಸ್ ಲೇವಡಿ ಮಾಡಿತ್ತು.

   English summary
   Karnataka Cabinet Expansion: No Importance to Nalin Kumar Kateel's Team, most of the yediyurappa's team members got minister post in bommai cabinet.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X