• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಪುಟ ವಿಸ್ತರಣೆ : ಮಾರ್ಚ್ ಮೊದಲ ವಾರದಲ್ಲೇ ಜೆಡಿಎಸ್ ನ 2 ಸ್ಥಾನ ಭರ್ತಿ

|
   ಮಾರ್ಚ್ ಮೊದಲ ವಾರದಲ್ಲೇ ಜೆಡಿಎಸ್ ನ 2 ಸ್ಥಾನ ಭರ್ತಿ | Oneindia Kannada

   ಬೆಂಗಳೂರು, ಫೆಬ್ರವರಿ 28: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಖಾಲಿ ಇರುವ ಎರಡು ಸ್ಥಾನಗಳಿಗೂ ಮಾರ್ಚ್ ಮೊದಲ ವಾರದಲ್ಲಿ ಭರ್ತಿ ಮಾಡುವ ಸುದ್ದಿ ಬಂದಿದೆ. ಎರಡು ಸ್ಥಾನಕ್ಕೆ ಸದ್ಯಕ್ಕೆ ಮೂವರು ಆಕಾಂಕ್ಷಿಗಳು ಕಂಡು ಬಂದಿದ್ದಾರೆ.

   ಜೆಡಿಎಸ್ ಪಾಲಿನ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಹಾಗೂ ಸಂಸದೀಯ ಕಾರ್ಯದರ್ಶಿಗಳ ನೇಮಕಾತಿಗೆ ಚಾಲನೆ ನೀಡಿದ ನಂತರ ಸಚಿವ ಸಂಪುಟ ವಿಸ್ತರಣೆಯತ್ತ ಕುಮಾರಸ್ವಾಮಿ ಅವರು ಗಮನ ಹರಿಸುತ್ತಿದ್ದಾರೆ.

   ಮಾರ್ಚ್‌ 4 ಸಮನ್ವಯ ಸಮಿತಿ ಸಭೆ: ಸೀಟು ಹಂಚಿಕೆ ಚರ್ಚೆ

   ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಜಾತಿ ಹಾಗೂ ಪ್ರಾದೇಶಿಕತೆ ಪ್ರಾತಿನಿಧ್ಯ ಆಧಾರದ ಮೇಲೆ ಇಬ್ಬರು ಸಚಿವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ಕುಮಾರಸ್ವಾಮಿಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಕಿವಿಮಾತು ಹೇಳಿದ್ದಾರೆ ಎಂಬ ಸುದ್ದಿಯಿದೆ.

   ಎರಡು ಸಚಿವ ಸ್ಥಾನಗಳ ಪೈಕಿ ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ ಹಾಗೂ ಲಿಂಗಾಯತ ಸಮುದಾಯದ ಶಾಸಕರಿಂದ ಬೇಡಿಕೆಯಿದೆ.ನಿಗಮ-ಮಂಡಳಿ ಅಧ್ಯಕ್ಷರ ನೇಮಕಾತಿ ಮುಂದುವರೆಯಲಿದ್ದು, ಶಿವರಾತ್ರಿ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕೆಲ ಹಿರಿಯ ಮುಖಂಡರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.

   ಜೆಡಿಎಸ್‌ಗೆ 7 ಸೀಟು ಕೊಡಲು ಕಾಂಗ್ರೆಸ್ ತಂತ್ರ? ಸಿದ್ದು-ಗೌಡರ ಸಭೆ

   ಹಲವು ಬಾರಿ ಸಚಿವ ಸ್ಥಾನ ವಂಚಿತರಾಗಿದ್ದ ವಿಧಾನಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಉದ್ಯಮಿ ಬಿ.ಎಂ.ಫಾರೂಕ್ ಹಾಗೂ ವಿಧಾನಸಭಾ ಸದಸ್ಯ ಎಂ.ಪಿ.ಕುಮಾರಸ್ವಾಮಿ ಸಂಪುಟ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಶಾಸಕ ಡಾ.ಅನ್ನದಾನಿ ಅವರನ್ನು ದೇವರಾಜ ಅರಸು ಹಿಂದುಳಿದ ನಿಗಮಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಹೀಗಾಗಿ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿಲ್ಲ.

   ಈ ಹಿಂದೆ ಕಾಂಗ್ರೆಸ್ ಪಾಲಿನ ಸಚಿವ ಸ್ಥಾನಗಳನ್ನು ಹತ್ತು ಹಲವು ಚರ್ಚೆ ನಂತರ ಭರ್ತಿ ಮಾಡಲಾಗಿತ್ತು. ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಈ.ತುಕಾರಾಂ, ಪರಮೇಶ್ವರ ನಾಯ್ಕ, ಸಿ.ಎಸ್.ಶಿವಳ್ಳಿ, ಎಂ.ಟಿ.ಬಿ.ನಾಗರಾಜು, ರಹೀಂಖಾನ್, ಆರ್‌.ಬಿ.ತಿಮ್ಮಾಪುರ ಅವರುಗಳು ಪ್ರಮಾಣ ವಚನ ಸ್ವೀಕರಿಸಿ, ಸಚಿವರಾದರು.

   English summary
   Cabinet expansion : Karnataka CM HD Kumaraswamy is all set to induct two MLAs to his cabinet from JDS. There are three aspirants to two vacant spot.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X