ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ ಅಧಿವೇಶನಕ್ಕೆ ಮುಂಚೆ ಸಂಪುಟ ವಿಸ್ತರಣೆ ಪಕ್ಕಾ

|
Google Oneindia Kannada News

ಬೆಂಗಳೂರು, ನವೆಂಬರ್ 29: ಹಲವು ತಿಂಗಳುಗಳಿಂದ ಕಗ್ಗಂಟಾಗಿದ್ದ ಸಂಪುಟ ವಿಸ್ತರಣೆಗೂ ಅಂತೂ ಕಾಲ ಕೂಡಿ ಬಂದಿರುವ ಹಾಗಿದೆ. ಇನ್ನು 10-12 ದಿನಗಳಲ್ಲಿ ಸಂಪುಟ ವಿಸ್ತರಣೆ ಪಕ್ಕಾ ಎಂದು ಕಾಂಗ್ರೆಸ್ ಹಿರಿಯ ಮುಖಂಡರೇ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಬೆಳಗಾವಿ ಅಧಿವೇಶನಕ್ಕೆ ಮುನ್ನಾ ಸಂಪುಟ ವಿಸ್ತರಣೆ ಮಾಡುತ್ತೇವೆ, ಈ ಬಗ್ಗೆ ಗೊಂದಲ ಬೇಡ ಎಂದು ಅವರು ಹೇಳಿದ್ದಾರೆ.

ಕುಮಾರಸ್ವಾಮಿ ಮಾತು ಕೇಳಿ ಕಂಗಾಲಾಗಿರುವ ರಾಹುಲ್ ಗಾಂಧಿ!ಕುಮಾರಸ್ವಾಮಿ ಮಾತು ಕೇಳಿ ಕಂಗಾಲಾಗಿರುವ ರಾಹುಲ್ ಗಾಂಧಿ!

ಬೆಳಗಾವಿ ಅಧಿವೇಶನದ ಒಳಗಾಗಿ ಒಂದು ದಿನಾಂಕ ನಿಗದಿಪಡಿಸಿ ಸಂಪುಟ ವಿಸ್ತರಣೆ, ಆ ಮುನ್ನಾ ಜೆಡಿಎಸ್‌ ನಾಯಕರೊಂದಿಗೂ ಚರ್ಚೆ ಮಾಡುತ್ತೇವೆ. ಅವರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ವಿಸ್ತರಣೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ಸೋಮವಾರ (ಡಿಸೆಂಬರ್ 3) ಅಥವಾ ಗುರುವಾರ (ಡಿಸೆಂಬರ್ 6) ರಂದು ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ದಿನೇಶ್ ಗುಂಡೂರಾವ್ ಅವರು ಸ್ಪಷ್ಟಪಡಿಸಿದ್ದಾರೆ.

ಸಂಪುಟ ಸಭೆಗೆ ಗೈರು ಬೆದರಿಕೆಗೆ ಮಣಿದ ಕೈ

ಸಂಪುಟ ಸಭೆಗೆ ಗೈರು ಬೆದರಿಕೆಗೆ ಮಣಿದ ಕೈ

ಸಂಪುಟ ವಿಸ್ತರಣೆಯನ್ನು ಕೂಡಲೇ ಮಾಡದೇ ಇದ್ದಲ್ಲಿ ಅಧಿವೇಶನಕ್ಕೆ ಗೈರಾಗುವುದಾಗಿ ಸಚಿವ ಸ್ಥಾನ ಆಕಾಂಕ್ಷಿಗಳು ಕಾಂಗ್ರೆಸ್‌ ಮುಖಂಡರಿಗೆ ಬೆದರಿಕೆ ಒಡ್ಡಿದ್ದರು. ಬೆದರಿಕೆಗೆ ಬಗ್ಗಿದ ರಾಜ್ಯ ಕಾಂಗ್ರೆಸ್‌ ಅಧಿವೇಶನಕ್ಕೆ ಮುನ್ನವೇ ಸಂಪುಟ ವಿಸ್ತರಣೆ ಮಾಡುವ ನಿರ್ಣಯ ಕೈಗೊಂಡಿದೆ.

ರಾಹುಲ್ ಗಾಂಧಿ ಅನುಮೋದನೆಗೆ ಕಾಯುತ್ತಿಲ್ಲ?

ರಾಹುಲ್ ಗಾಂಧಿ ಅನುಮೋದನೆಗೆ ಕಾಯುತ್ತಿಲ್ಲ?

ರಾಹುಲ್ ಗಾಂಧಿ ಅನುಮೋದನೆ ಬಳಿಕವೇ ಸಂಪುಟ ವಿಸ್ತರಣೆ ಎಂದು ಈ ಮುನ್ನಾ ಪರಮೇಶ್ವರ್ ಹೇಳಿದ್ದರು. ಅವರು ಚುನಾವಣೆಯಲ್ಲಿ ನಿರತರಾಗಿದ್ದಾರೆ ಹಾಗಾಗಿ ಚುನಾವಣೆ ಮುಗಿದ ನಂತರ ವಿಸ್ತರಣೆ ಮಾಡಲಾಗುವುದು ಎನ್ನಲಾಗಿತ್ತು. ಆದರೆ ಈಗ ರಾಹುಲ್ ಅನುಮೋದನೆ ಇಲ್ಲದೆಯೇ ವಿಸ್ತರಣೆ ಮಾಡಲಾಗುತ್ತಿದೆಯೇ ಎಂಬ ಅನುಮಾನ ಇದೆ.

ಸಿದ್ದರಾಮಯ್ಯ ಭೇಟಿ ಮಾಡಿದ ಸಚಿವ ಸ್ಥಾನ ಆಕಾಂಕ್ಷಿಗಳು, ಮತ್ತೆ ಲಾಬಿ ಶುರುಸಿದ್ದರಾಮಯ್ಯ ಭೇಟಿ ಮಾಡಿದ ಸಚಿವ ಸ್ಥಾನ ಆಕಾಂಕ್ಷಿಗಳು, ಮತ್ತೆ ಲಾಬಿ ಶುರು

ಈ ಸಾಧ್ಯತೆಯೂ ಇದೆ

ಈ ಸಾಧ್ಯತೆಯೂ ಇದೆ

ಡಿಸೆಂಬರ್ 7 ಕ್ಕೆ ತೆಲಂಗಾಣ ಚುನಾವಣೆ ಮೂಲಕ ಪಂಚ ರಾಜ್ಯಗಳ ಚುನಾವಣೆ ಮುಕ್ತಾಯವಾದಂತಾಗುತ್ತದೆ. ಹಾಗಾಗಿ ಅಧಿವೇಶನ ಡಿಸೆಂಬರ್ 10 ಕ್ಕೆ ಪ್ರಾರಂಭವಾಗುತ್ತದೆ. ಈ ನಡುವಿನಲ್ಲಿ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿ ಮಾಡುವ ಸಾಧ್ಯತೆ ಇದೆ. ಸಚಿವ ಸ್ಥಾನ ಕೈತಪ್ಪಿದವರು ಬಂಡಾಯ ಎದ್ದರೂ ಚುನಾವಣೆಗಳ ಮೇಲೆ ಪರಿಣಾಮ ಬೀರದಂತೆ ಈ ತಂತ್ರ ಅನುಸರಿಸುವ ಸಾಧ್ಯತೆ ಇದೆ.

ಸಂಪುಟ ವಿಸ್ತರಣೆಗೆ ಬೇಡಿಕೆ ಇಟ್ಟ ಎಂ.ಬಿ.ಪಾಟೀಲ್ಸಂಪುಟ ವಿಸ್ತರಣೆಗೆ ಬೇಡಿಕೆ ಇಟ್ಟ ಎಂ.ಬಿ.ಪಾಟೀಲ್

ಸಿದ್ದರಾಮಯ್ಯ-ದೇವೇಗೌಡ ಹೆಗಲಿಗೆ ಜವಾಬ್ದಾರಿ

ಸಿದ್ದರಾಮಯ್ಯ-ದೇವೇಗೌಡ ಹೆಗಲಿಗೆ ಜವಾಬ್ದಾರಿ

ಸಂಪುಟ ವಿಸ್ತರಣೆ ಹಾಗೂ ಅದರ ನಂತರದ ಬೆಳವಣಿಗೆಗಳನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹಿರಿಯ ಮುಖಂಡರಾದ ಸಿದ್ದರಾಮಯ್ಯ ಹಾಗೂ ದೇವೇಗೌಡ ಅವರಿಗೆ ಹೈಕಮಾಂಡ್‌ಗೆ ಹೊರಿಸಲಾಗಿದೆ. ಈ ಬಗ್ಗೆ ದೇವೇಗೌಡ, ಸಿದ್ದರಾಮಯ್ಯ, ಕೆ.ಸಿ.ವೇಣುಗೋಪಾಲ್ ಕೆಪಿಸಿಸಿ ಅಧ್ಯಕ್ಷ, ಉಪಾಧ್ಯಕ್ಷರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.

ಯಾರ ಬಳಿ ಎಷ್ಟು ಸ್ಥಾನ?

ಯಾರ ಬಳಿ ಎಷ್ಟು ಸ್ಥಾನ?

ಕಾಂಗ್ರೆಸ್‌ ಬಳಿ ಆರು ಸಚಿವ ಸ್ಥಾನಗಳು ಖಾಲಿ ಇದ್ದರೆ, ಜೆಡಿಎಸ್‌ ಬಳಿ ಎರಡು ಸ್ಥಾನಗಳು ಖಾಲಿ ಇವೆ. ಕಾಂಗ್ರೆಸ್‌ನಲ್ಲಿ ಹಲವು ಆಕಾಂಕ್ಷಿಗಳು ಇದ್ದಾರೆ. ಈಗಾಗಲೇ ಕಾಂಗ್ರೆಸ್‌ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಆಕಾಂಕ್ಷಿಗಳು ಇದ್ದಾರೆ. ಸಚಿವ ಸ್ಥಾನ ವಂಚಿತರು ಪಕ್ಷದ ವಿರುದ್ಧ ಕೆಂಪು ಬಾವುಟ ತೋರುವ ಭಯವೂ ಕೆಪಿಸಿಸಿಗೆ ಇದೆ.

ಸಿದ್ದರಾಮಯ್ಯ ಸೂಚನೆ: ದೆಹಲಿಗೆ ತೆರಳಿದ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಸೂಚನೆ: ದೆಹಲಿಗೆ ತೆರಳಿದ ಕಾಂಗ್ರೆಸ್ ನಾಯಕರು

ಆಕಾಂಕ್ಷಿಗಳು ಯಾರ್ಯಾರು?

ಆಕಾಂಕ್ಷಿಗಳು ಯಾರ್ಯಾರು?

ಕಾಂಗ್ರೆಸ್‌ನಲ್ಲಿ ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಎಂಟಿಬಿ ನಾಗರಾಜು, ಆನಂದ್ ಸಿಂಗ್, ಬಿ.ಸಿ.ಪಾಟೀಲ್, ರಾಮಲಿಂಗಾ ರೆಡ್ಡಿ, ತನ್ವೀರ್ ಸೇಠ್, ತುಕಾರಾಂ, ಮುನಿಯಪ್ಪ, ಸುಧಾಕರ್, ಎಚ್‌.ಕೆ.ಪಾಟೀಲ್ ಇನ್ನೂ ಹಲವರು ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನಕ್ಕೆ ಲಾಭಿ ಮಾಡುತ್ತಿದ್ದಾರೆ.

English summary
Cabinet expansion guarantee before belgaum session said KPCC president Dinesh Gundurao. December 3rd or 6th government will expand cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X