ಸಮೀಕ್ಷೆ: ಸಿಎಂ ಹುದ್ದೆಗೆ ಕನ್ನಡಿಗರ ನಂ. 1 ಆಯ್ಕೆ ಸಿದ್ದರಾಮಯ್ಯ

Recommended Video

      Karnataka Elections 2018 : C Fore Survey 2018 : ಸಿಎಂ ಹುದ್ದೆಗೆ ಕನ್ನಡಿಗರ ನಂ.1 ಆಯ್ಕೆ ಸಿದ್ದರಾಮಯ್ಯ

      ಬೆಂಗಳೂರು, ಮಾರ್ಚ್ 26: 2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಕನ್ನಡಿಗರ ಮೊದಲ ಆಯ್ಕೆ ಸಿಎಂ ಸಿದ್ದರಾಮಯ್ಯ. ಹೀಗಂಥ ಸಿ-ಫೋರ್ ಹೊಸ ಚುನಾವಣಾಪೂರ್ವ ಸಮೀಕ್ಷೆ ಹೇಳುತ್ತಿದೆ.

      ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

      ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ನಮ್ಮ ಮೊದಲ ಆಯ್ಕೆ ಎಂದು ಶೇಕಡಾ 45 ರಷ್ಟು ಜನರು ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೆ ಸೂಕ್ತ ವ್ಯಕ್ತಿ ಎಂದು ಶೇಕಡಾ 26ರಷ್ಟು ಜನರು ಹೇಳಿದ್ದಾರೆ.

      ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ನಮ್ಮ ಆಯ್ಕೆ ಎಂದು ಶೇಕಡಾ 13ರಷ್ಟು ಜನರು ಹೇಳಿದ್ದಾರೆ. ಉಳಿದ ಶೇಕಡಾ 16 ಜನರು ಬೇರೆ ಆಯ್ಕೆಗಳಿಗೆ ಸೈ ಎಂದಿದ್ದಾರೆ.

      C-Fore survey: 45 % says Siddaramaiah was their top preference for CM

      ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ಮೊದಲ ಆಯ್ಕೆ ಎಂಬುದಕ್ಕೆ ಕಾರಣವನ್ನೂ ಜನರು ನೀಡಿದ್ದಾರೆ. ಸಿದ್ದರಾಮಯ್ಯ ಸರಕಾರದ ಕಾರ್ಯವೈಖರಿ ತುಂಬಾ ಇಷ್ಟವಾಗಿದೆ ಎಂದು ಶೇಕಡಾ 21ರಷ್ಟು ಜನರು ಹೇಳಿದ್ದರೆ, ಪರವಾಗಿಲ್ಲ ಎಂಬ ಅಭಿಪ್ರಾಯವನ್ನು ಶೇಕಡಾ 54ರಷ್ಟು ಜನರು ದಾಖಲಿಸಿದ್ದಾರೆ. ಇನ್ನು ಶೇಕಡಾ 25ರಷ್ಟು ಜನರು ಮಾತ್ರ ನಮಗೆ ಕಾಂಗ್ರೆಸ್ ಸರಕಾರದ ಆಡಳಿತ ಹಿಡಿಸಿಲ್ಲ ಎಂದಿದ್ದಾರೆ.

      C-Fore survey: 45 % says Siddaramaiah was their top preference for CM

      2018ರ ಮಾರ್ಚ್ 1 ರಿಂದ 25ರ ನಡುವೆ ಈ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಗಾಗಿ 154 ವಿಧಾನಸಭಾ ಕ್ಷೇತ್ರಗಳ 22,357 ಮತದಾರರನ್ನು ಸಂದರ್ಶಿಸಲಾಗಿದೆ. ಮತದಾರರು ರಾಜ್ಯದ 2,368 ಮತಗಟ್ಟೆಗಳಿಗೆ ಸೇರಿದ್ದಾರೆ ಎಂದು ಸಂಸ್ಥೆ ತನ್ನ ಸಮೀಕ್ಷೆಯ ಬಗ್ಗೆ ವಿವರ ನೀಡಿದೆ.

      326 ನಗರ ಮತ್ತು 977 ಗ್ರಾಮೀಣ ಪ್ರದೇಶಗಳನ್ನು ಸಮೀಕ್ಷೆಯು ಒಳಗೊಂಡಿದೆ ಎಂದು ಸಿ-ಫೋರ್ ಸಂಸ್ಥೆ ಹೇಳಿದ್ದು, ಶೇಕಡಾ 1ರಷ್ಟು ಇದು ತಪ್ಪುಗಳನ್ನು ಒಳಗೊಂಡಿರಬಹುದು ಎಂದು ಹೇಳಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+