Karnataka By Elections: ಕರ್ನಾಟಕದ ರಾಜಕಾರಣಿಗಳು & ರಾಜಕೀಯ ಪಕ್ಷಗಳ ಭವಿಷ್ಯ ನಿರ್ಧರಿಸಲಿದೆ ಉಪಚುನಾವಣೆ ಫಲಿತಾಂಶ!
ಕರ್ನಾಟಕ ರಾಜಕೀಯದಲ್ಲಿ ಬಿರುಗಾಳಿ ಏಳಲು ಕ್ಷಣಗಣನೆ ಆರಂಭವಾಗಿದೆ. ಇಡೀ ಭಾರತವೇ ರಾಜಕೀಯ ವಿಚಾರದಲ್ಲಿ ಒಂದು ಲೆಕ್ಕ ಹೊಂದಿದ್ದರೆ, ಭಾರತದ ಬಹುಮುಖ್ಯ ರಾಜ್ಯವಾದ ಕರ್ನಾಟಕದ ರಾಜಕೀಯ ವ್ಯವಸ್ಥೆಯೇ ಬೇರೆ. ಯಾಕಂದ್ರೆ ನಮ್ಮ ಕರ್ನಾಟಕದ ಮತದಾರರು ದೇಶದಲ್ಲೇ ಅತ್ಯಂತ ಬುದ್ಧಿವಂತರು ಎಂಬುದರಲ್ಲಿ 2 ಮಾತು ಇಲ್ಲ. ಹೀಗಿದ್ದಾಗ ಕರ್ನಾಟಕ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಲು ಉಪ ಚುನಾವಣೆ ಫಲಿತಾಂಶ ಈಗ ಸಜ್ಜಾಗಿದೆ!
ಚನ್ನಪಟ್ಟಣ, ಸಂಡೂರು & ಶಿಗ್ಗಾವಿ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಹೀಗಾಗಿ ಇಡೀ ದೇಶದ ಗಮನ ಈ ಕ್ಷೇತ್ರಗಳ ಮೇಲೆ ನೆಟ್ಟಿದೆ. ಈಗಾಗಲೇ ಗೆಲುವಿಗಾಗಿ ಭಾರಿ ದೊಡ್ಡ ಹೋರಾಟ ನಡೆಸಿರುವ ಕಾಂಗ್ರೆಸ್, ಬಿಜೆಪಿ & ಜೆಡಿಎಸ್ ನಾಯಕರು ಗೆದ್ದು ಬೀಗಲು ಏನೇನು ಬೇಕು ಅದೆಲ್ಲವನ್ನೂ ಮಾಡುತ್ತಿದ್ದಾರೆ. ಇನ್ನೇನು ಕೆಲವೇ ನಿಮಿಷದಲ್ಲಿ ಕರ್ನಾಟಕ ರಾಜ್ಯದ ಉಪ ಚುನಾವಣೆ ಫಲಿತಾಂಶದ ಪಕ್ಕಾ ಚಿತ್ರಣ ಹೊರ ಬೀಳಲಿದ್ದು ಕರ್ನಾಟಕ ರಾಜಕೀಯದಲ್ಲಿ ಬಿರುಗಾಳಿಯೇ ಎದ್ದಿದೆ.

ಸಿಎಂ & ರಾಜ್ಯಾಧ್ಯಕ್ಷರ ಬದಲಾವಣೆ ಪಕ್ಕಾ?
ಕರ್ನಾಟಕದ ಮುಖ್ಯಮಂತ್ರಿ ಸ್ಥಾನ ಬದಲಾಗಲಿದೆ ಎಂಬ ಸುದ್ದಿ ಹಲವು ತಿಂಗಳಿಂದ ಕೂಡ ಹಬ್ಬಿದೆ. ಸಿಎಂ ಸಿದ್ದರಾಮಯ್ಯ ಅವರನ್ನು ಕೆಳಗೆ ಇಳಿಸಿ, ಅವರ ಜಾಗಕ್ಕೆ ಬೇರೆಯವರನ್ನ ಕೂರಿಸಬೇಕು ಎಂಬುದು ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ. ಹೀಗಿದ್ದಾಗ ಉಪ ಚುನಾವಣೆ ಗೆಲ್ಲಲೇಬೇಕಾದ ಅನಿವಾರ್ಯ ಸ್ಥಿತಿ ಕಾಂಗ್ರೆಸ್‌ಗೆ ಏರ್ಪಟ್ಟಿದೆ. ಹೀಗಂತಾ ವಿರೋಧ ಪಕ್ಷವಾದ ಬಿಜೆಪಿಗೆ ಉಪ ಚುನಾವಣೆ ಏನು ಸುಲಭವಾಗಿಲ್ಲ!
ಬಿ.ವೈ. ವಿಜಯೇಂದ್ರ ಸ್ಥಾನವೂ ಬದಲಾಗುತ್ತಾ?
ಉಪ ಚುನಾವಣೆ ಸೋಲು & ಗೆಲುವಿನ ಲೆಕ್ಕಾಚಾರದ ಮೇಲೆ ಬಿಜೆಪಿ ಪಕ್ಷದಲ್ಲೂ ದೊಡ್ಡದಾದ ಬದಲಾವಣೆ ನಿರೀಕ್ಷೆ ಮಾಡಲಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಈಗಾಗಲೇ ಬಸನಗೌಡ ಪಾಟೀಲ್ ಯತ್ನಾಳ್ & ಟೀಂ ದೊಡ್ಡ ಮಟ್ಟದ ಲಾಭಿ ನಡೆಸುತ್ತಿದೆ ಎಂಬ ಆರೋಪ ಇದೆ.
ಹಾಗೇ ಉಪ ಚುನಾವಣೆಯಲ್ಲಿ ಸೋತರೆ ಬಿಜೆಪಿ ರಾಜ್ಯಾಧ್ಯಕ್ಷರನ್ನೇ ಬದಲಾವಣೆ ಮಾಡುವ ಅನುಮಾನಗಳು ಕೂಡ ಮೂಡಿವೆ. ಹೀಗಾಗಿ ಬಿಜೆಪಿ ಪಕ್ಷಕ್ಕೆ ಇದೀಗ, ಶಿಗ್ಗಾವಿ & ಸಂಡೂರು ಕ್ಷೇತ್ರಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯು ಇದೆ. ಮತ್ತೊಂದು ಕಡೆ ಚನ್ನಪಟ್ಟಣದಲ್ಲಿ ಜೆಡಿಎಸ್ & ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ನಿಂತಿದ್ದಾರೆ ನಿಖಿಲ್. ಹೀಗಾಗಿ ಇನ್ನೇನು ಕೆಲವೇ ಹೊತ್ತಲ್ಲಿ ಕರ್ನಾಟಕ ರಾಜಕೀಯ ವಲಯದಲ್ಲಿ ಎದುರಾಗುವ ಬಿರುಗಾಳಿಯ ಮುನ್ಸೂಚನೆ ಕೂಡ ಸಿಗಲಿದೆ. ಇದೇ ಕಾರಣಕ್ಕೆ ಕಾಂಗ್ರೆಸ್, ಜೆಡಿಎಸ್ & ಬಿಜೆಪಿ ನಾಯಕರು ಉಪ ಚುನಾವಣೆ ರಿಸಲ್ಟ್ ಮೇಲೆ ಗಮನ ಇಟ್ಟು ಕಾಯುತ್ತಿದ್ದಾರೆ.
ಆರಂಭದಲ್ಲೇ ಆಘಾತ ನೀಡಿದ್ದ ಯೋಗೇಶ್ವರ್!
ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆಯ, ಆರಂಭಿಕ ಹಂತದಲ್ಲೇ ನಿಖಿಲ್‌ಗೆ ಹಿನ್ನಡೆ ಕಂಡುಬಂತು. ಈ ಸಮಯದಲ್ಲಿ ಸಿಪಿ ಯೋಗೇಶ್ವರ್ ಅವರು ಮುನ್ನಡೆ ಪಡೆದರು. ಹೀಗೆ ಫಲಿತಾಂಶಕ್ಕೆ ಕಾದು ಕೂತಿದ್ದ ನಿಖಿಲ್ ಕುಮಾರಸ್ವಾಮಿ & ಅವರ ಬೆಂಬಲಿಗರಿಗೆ ಇದು ಆಘಾತ ನೀಡಿತ್ತು. ಹೀಗಿದ್ದರೂ, ಆರಂಭಿಕ ಟ್ರೆಂಡ್ ಮಾತ್ರ ಎಂಬ ನೆಮ್ಮದಿ ಇತ್ತು. ನಂತರ, ನಿಖಿಲ್ ಕುಮಾರಸ್ವಾಮಿ ಅವರು ಮುನ್ನಡೆ ಸಾಧಿಸಿದ್ದು ಜಿದ್ದಾಜಿದ್ದಿನ ಪೈಪೋಟಿ ಈಗ ಅಲ್ಲಿ ಮುಂದುವರಿದಿದೆ.












Click it and Unblock the Notifications