ಚನ್ನಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಡಿ.ಕೆ.ಶಿವಕುಮಾರ್: ಮೈತ್ರಿ ಅಭ್ಯರ್ಥಿ ಯಾರು?

ಬೆಂಗಳೂರು,ಜೂನ್‌ 21: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ನಡೆಸಿ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಗೆಲುವು ಸಾಧಿಸಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಚನ್ನಪಟ್ಟಣ ಕ್ಷೇತ್ರದಿಂದ ಹೀನಾಯ ಸೋಲು ಕಂಡ ಡಿಕೆ ಬ್ರದರ್ಸ್‌ ಚನ್ನಪಟ್ಟಣ ವಶಪಡಿಸಿಕೊಳ್ಳಲು ಡಿ ಕೆ ಶಿವಕುಮಾರ್‌ ಸ್ಪರ್ಧೆ ನಡೆಸಿದ್ದು, ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಯಾರು ಪ್ರಶ್ನೆ ಉದ್ಭವಿಸಿದೆ.

ಚನ್ನಪಟ್ಟಣ ಕ್ಷೇತ್ರದ ಚುನಾವಣೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಮಾತನಾಡಿ, ಡಿ ಕೆ ಶಿವಕುಮಾರ್ ಅವರು ಈಗಾಗಲೇ ಶಾಸಕರು ಇದ್ದಾರೆ. ಆದರೂ ಚನ್ನಪಟ್ಟಣದಲ್ಲಿ ಸ್ಪರ್ಧೆಯ ಅಭಿಲಾಷೆ ವ್ಯಕ್ತಪಡಿಸಿದ್ದಾರೆ .ಇದು ಅವರ ಪಕ್ಷದ ತೀರ್ಮಾನ. ಆದರೂ ಜನರ ಮನದಾಳದಲ್ಲಿ ಏನಿದೆ ಅನ್ನೋದು ಇನ್ನೂ ನಿಗೂಢವಾಗಿದೆ.

BY Vijayendra s Reaction on candidate for Channapatna Constituency

ಚನ್ನಪಟ್ಟಣ ಕ್ಷೇತ್ರದಲ್ಲಿ ಶಾಸಕರಾಗಿ ಕುಮಾರಸ್ವಾಮಿಯವರು ಅಭಿವೃದ್ಧಿ ಮಾಡಿದ್ದಾರೆ ಹಾಗೂ ಸೇವೆ ಮಾಡಿದ್ದಾರೆ. ಅವರು ಸಂಸದರಾಗಿ ದೆಹಲಿಗೆ ಹೋದ ಕಾರಣ ಉಪ ಚುನಾವಣೆ ನಡೆಯುತ್ತಿದೆ. ನಮ್ಮ ಅಭ್ಯರ್ಥಿ ಯಾರೆಂಬ ಬಗ್ಗೆ ನಾವು ಮತ್ತು ಜೆಡಿಎಸ್ ಪಕ್ಷದವರು ಜೊತೆಗೂಡಿ ಚರ್ಚಿಸಿ ತೀರ್ಮಾನ ಮಾಡಲಿದ್ದೇವೆ.

ಬೆಂಗಳೂರು ಗ್ರಾಮೀಣ ಕ್ಷೇತ್ರದಲ್ಲಿ ತಮ್ಮನ್ನು ಸೋಲಿಸೋರೇ ಇಲ್ಲ ಅಂತ ಅವರು ಅನ್ಕೊಂಡಿದ್ರು ಆದರೆ ಜನರ ತೀರ್ಪು ಏನಿತ್ತು ಅಂತ ಎಲ್ರೂ ನೋಡಿದ್ದೀರ. ಚನ್ನಪಟ್ಟಣ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಯಾರಾಗಬೇಕು ಅಂತ ನಾವು ಮತ್ತು ಜೆಡಿಎಸ್ ನಾಯಕರು ಅತೀ ಶೀಘ್ರದಲ್ಲೇ ತೀರ್ಮಾನ ಮಾಡುತ್ತೇವೆ ಅಂತ ಹೇಳಿದರು. ಇತ್ತ ಚನ್ನಪಟ್ಟಣ ಕ್ಷೇತ್ರಕ್ಕೆ ಸಿ ಪಿ ಯೋಗೇಶ್ವರ್‌ ಅವರನ್ನ ಕಣಕ್ಕಿಳಿಸುತ್ತಾರಾ ಅಥವಾ ನಿಖಿಲ್‌ ಕುಮಾರಸ್ವಾಮಿ ಕಣಕ್ಕಿಳಿಯುತ್ತಾರಾ ಎಂದ ಚರ್ಚೆ ಹುಟ್ಟಿಕೊಂಡಿದ್ದು, ಬಹುತೇಕ ಸಿ ಪಿ ಯೋಗೇಶ್ವರ್‌ ಅವರನ್ನ ಮೈತ್ರಿ ನಾಯಕರು ಕಣಕ್ಕಿಳಿಸಲಿದ್ದಾರೆ.

ಕೇಂದ್ರದ ಸಚಿವ ಸಂಪುಟಕ್ಕೆ ಆಯ್ಕೆಯಾದ ಸಚಿವರಿಗೆ ಅಭಿನಂದನಾ ಕಾರ್ಯಕ್ರಮವೂ ಇರಲಿದೆ. ನಮ್ಮ ರಾಜ್ಯದಿಂದ ಬಿಜೆಪಿ ಜೆಡಿಎಸ್ ನಿಂದ ಆಯ್ಕೆ ಆಗಿರುವ 19 ಸಂಸದರಿಗೆ ಸನ್ಮಾನ ಮಾಡಲಾಗುವುದು ಎಂದು‌ಬಿಜೆಪಿ ರಾಜ್ಯಧ್ಯಕ್ಷರಾದ ಬಿ.ವೈ‌ವಿಜಯೇಂದ್ರ ಅವರು ಹೇಳಿದರು

ದಾವಣಗೆರೆ ಸೋಲಿಗೆ ಯಡಿಯೂರಪ್ಪ, ವಿಜಯೇಂದ್ರ ಕಾರಣ ಎಂಬ ಶಾಸಕ ಬಿ ಪಿ ಹರೀಶ್ ಹೇಳಿಕೆ ವಿಚಾರವಾಗಿ ಮಾತನಾಡಿ, ಬಿಜೆಪಿ ಶಾಸಕ ಬಿ ಪಿ ಹರೀಶ್ ಗೆ ವಿಜಯೇಂದ್ರ ತಾಕೀತು. ನಮ್ಮ ಶಾಸಕ ಮಿತ್ರ ಹರೀಶ್ ಆಗಲೀ ಅಥವಾ ಬೇರೆ ಯಾರೇ ಆಗಲೀ ಅವರಿಗೆ ಒಂದು ಮಾತು ಹೇಳ್ತೇನೆ. ಬಹಿರಂಗವಾಗಿ ಹೇಳಿಕೆ ಕೊಡೋದ್ರಿಂದ ಸಮಸ್ಯೆಗೆ ಪರಿಹಾರ ಸಿಗುತ್ತೆ ಅಂದ್ರೆ ಹೇಳಲಿ, ನನ್ನದೇನೂ ತಕರಾರಿಲ್ಲ. ಆದರೆ ನಾನು ರಾಜ್ಯಾಧ್ಯಕ್ಷ ಆಗಿ ಮನವಿ ಮಾಡೋದು, ಏನೇ ಸಮಸ್ಯೆ ಇದ್ರೂ ಪಕ್ಷದ ಕಚೇರಿಗೆ ಬಂದು ಚರ್ಚೆ ಮಾಡಿ ಈ ರೀತಿ ಹೇಳಿಕೆ ಕೊಡೋದರಿಂದ ಅದು ಪಕ್ಷಕ್ಕೂ ಲಾಭ ಆಗಲ್ಲ. ಸಂಘಟನೆಗೂ ಲಾಭ ಆಗಲ್ಲ. ಬಿಜೆಪಿಯಲ್ಲಿ ಗುಂಪುಗಾರಿಕೆ ಜಾಸ್ತಿ ಆಗುತ್ತಿಲ್ಲ, ಎಲ್ಲವನ್ನೂ ಸರಿ ಮಾಡುತ್ತೇವೆ ಅಂತ ಹೇಳಿದರು.

ರಾಜ್ಯದ ಹಣಕಾಸು ವ್ಯವಸ್ಥೆ ಮೇಲುಸ್ತುವಾರಿಗೆ ವಿದೇಶಿ ಕನ್ಸಲ್ಟೆನ್ಸಿ ನೇಮಕ ವಿಚಾರವಾಗಿ ಮಾತನಾಡಿ, ಇದು ಆಶ್ಚರ್ಯ ಮತ್ತು ಶಾಕಿಂಗ್ ಕೂಡಾ. ಸಿಎಂ ಸುತ್ತ ಅಷ್ಟು ತಜ್ಞ ಅಧಿಕಾರಿಗಳು ಇರುವಾಗ ವಿದೇಶಿ ಕನ್ಸಲ್ಟೆನ್ಸಿ ಆಯ್ಕೆ ಮಾಡಿದ್ದಾರೆ. ಕಳೆದ ಒಂದು ವರ್ಷದಿಂದ ಸಿದ್ದರಾಮಯ್ಯ ಸರ್ಕಾರ ಎಲ್ಲಾ ವಿಧದಲ್ಲೂ ವಿಫಲ ಆಗಿದೆ. ಒಂದು ವರ್ಷದಿಂದ ಯಾವುದೇ ಅಭಿವೃದ್ಧಿ ಇಲ್ಲ, ಹೂಡಿಕೆ ಬಂದಿಲ್ಲ. ಕರ್ನಾಟಕ ಸಿದ್ದರಾಮಯ್ಯ ನಾಯಕತ್ವದಲ್ಲಿ ಬಳಲುತ್ತಿದೆ. ಯಾಕೆ ಸಿದ್ದರಾಮಯ್ಯ ನಮ್ಮ ರಾಜ್ಯದಿಂದಲೇ ಸೂಕ್ತ ವ್ಯಕ್ತಿಯನ್ನು ಗುರುತಿಸಲಿಲ್ಲ? ಎಂದು ಪ್ರಶ್ನಿಸಿದರು.

ಇನ್ನೂ ಹಲವು ಹಿರಿಯ ಐಎಎಸ್ ಅಧಿಕಾರಿಗಳು ಇದ್ದಾರೆ. ಯಡಿಯೂರಪ್ಪ, ಎಸ್ ಎಂ. ಕೃಷ್ಣ ಇವರೆಲ್ಲಾ ಸಿಎಂ ಆಗಿದ್ದಾಗ ಕರ್ನಾಟಕ ಎಲ್ಲಾ ಹಂತದಲ್ಲೂ ಮುಂದಿತ್ತು. ಯಾವುದೇ ವಿದೇಶಿ ತಜ್ಞರು ಸಿದ್ದರಾಮಯ್ಯಗೆ ಸಹಕಾರ ಮಾಡುತ್ತಾರೆ ಅಂತಾ ನನಗೆ ಅನ್ನಿಸುತ್ತಿಲ್ಲ. ಸಿದ್ದರಾಮಯ್ಯ ಕರ್ನಾಟಕವನ್ನು ಅಭಿವೃದ್ಧಿಶೀಲ ರಾಜ್ಯ, ರಾಜ್ಯಕ್ಕೆ ಸಂಪನ್ಮೂಲ ಹೂಡಿಕೆ ಬರುವುದನ್ನು ಬಯಸುತ್ತಾರೋ ಇಲ್ಲವೋ ಎಂಬುದನ್ನು ರಾಜ್ಯಕ್ಕೆ ಸ್ಪಷ್ಟಪಡಿಸಬೇಕು ಅಂತ ಆಗ್ರಹಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+