ಧಿಡೀರನೆ ಮುಂಬೈಗೆ ಹೊರಟ ವಿಜಯೇಂದ್ರ, ಕೈ ಅತೃಪ್ತ ಶಾಸಕರ ಭೇಟಿ?
Recommended Video

ಬೆಂಗಳೂರು, ಫೆಬ್ರವರಿ 07: ವಿರೋಧ ಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರು ಇಂದು ರಾತ್ರಿ ದಿಢೀರನೆ ಮುಂಬೈಗೆ ತೆರಳಿದ್ದು, ಅಲ್ಲಿ ಕಾಂಗ್ರೆಸ್ ಅತೃಪ್ತ ಶಾಸಕರ ಭೇಟಿ ಆಗಲಿದ್ದಾರೆ ಎನ್ನಲಾಗಿದೆ.
ಇಂದು ಸದನಕ್ಕೆ ಗೈರಾಗಿರುವ ಶಾಸಕರಲ್ಲಿ ಕೆಲವರು ಮುಂಬೈನಲ್ಲಿ ಇದ್ದಾರೆ ಎಂದು ಶಂಕಿಸಲಾಗಿದ್ದು, ವಿಜಯೇಂದ್ರ ಅವರು ಮುಂಬೈಗೆ ಹಾರಿರುವ ಸುದ್ದಿ ಗಮನಿಸಿದರೆ ಶಂಕೆ ನಿಜವೆನಿಸುತ್ತದೆ.

ಮುಂಬೈನಲ್ಲಿ ಇರುವ ಕಾಂಗ್ರೆಸ್‌ನ ಅತೃಪ್ತ ಶಾಸಕರನ್ನು ಭೇಟಿ ಆಗಿ ಮಾತುಕತೆ ಆಡಲು ಯಡಿಯೂರಪ್ಪ ಅವರ ಪ್ರತಿನಿಧಿಯಾಗಿ ವಿಜಯೇಂದ್ರ ಅವರು ಮುಂಬೈಗೆ ತೆರಳಿದ್ದಾರೆ.
ಅತೃಪ್ತ ಶಾಸಕರನ್ನು ಗುರುವಾರ ಅಥವಾ ಬಜೆಟ್ ದಿನ ಕರೆತಂದು ಬಜೆಟ್‌ಗೆ ವಿರುದ್ಧವಾಗಿ ಮತಚಲಾಯಿಸುವಂತೆ ಮಾಡುವ ಸಾಧ್ಯತೆ ಇದೆ. ಇದರ ಜವಾಬ್ದಾರಿಯನ್ನು ವಿಜಯೇಂದ್ರ ಅವರಿಗೆ ಯಡಿಯೂರಪ್ಪ ಅವರು ವಹಿಸಿರುವ ಸಾಧ್ಯತೆ ಇದೆ.
ಇಂದು ಆರಂಭವಾದ ಬಜೆಟ್ ಅಧಿವೇಶನದಕ್ಕೆ ಎಂಟು ಜನ ಕಾಂಗ್ರೆಸ್ ಶಾಸಕರು ಮತ್ತು ಒಬ್ಬರು ಜೆಡಿಎಸ್ ಶಾಸಕರು ಗೈರಾಗಿದ್ದರು. ಅದರಲ್ಲಿ ಕೆಲವರು ಬಿಜೆಪಿಯ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ.
ಶಾಸಕರಾದ ರಮೇಶ್ ಜಾರಕಿಹೊಳಿ (ಗೋಕಾಕ್), ಬಿ.ನಾಗೇಂದ್ರ (ಬಳ್ಳಾರಿ ಗ್ರಾಮಾಂತರ), ಮಹೇಶ್ ಕುಮಟಳ್ಳಿ (ಅಥಣಿ), ಡಾ.ಕೆ.ಸುಧಾಕರ್ (ಚಿಕ್ಕಬಳ್ಳಾಪುರ), ಬಿ.ಸಿ.ಪಾಟೀಲ್ (ಹಿರೆಕೇರೂರು). ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿದ್ದ ಮುಳಬಾಗಿಲು ಶಾಸಕ ಎಚ್.ನಾಗೇಶ್ ಮತ್ತು ರಾಣೆಬೆನ್ನೂರು ಶಾಸಕ ಆರ್.ಶಂಕರ್ ಇಂದು ಅಧಿವೇಶನಕ್ಕೆ ಗೈರಾಗಿದ್ದರು.












Click it and Unblock the Notifications