ನಾನೇ ಐದು ವರ್ಷ ಸಿಎಂ ಎಂದ ಸಿದ್ದರಾಮಯ್ಯ: ಬಿ ವೈ ವಿಜಯೇಂದ್ರ ಹೇಳಿದ್ದೇನು?
ಬೆಂಗಳೂರು, ನವೆಂಬರ್ 03: ರಾಜ್ಯದಲ್ಲಿ ಪೂರ್ಣಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಬದಲಾವಣೆಯ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ರಾಜ್ಯ ಕಾಂಗ್ರೆಸ್ ನಲ್ಲಿ ಎರಡೂವರೆ ವರ್ಷಗಳ ನಂತರ ಸಿಎಂ ಬದಲಾಗುತ್ತಾರೆ ಎಂಬ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರೆ ಎಳೆದಿದ್ದು, ಐದು ವರ್ಷ ನಮ್ಮದೇ ಸರ್ಕಾರ ಇರಲಿದೆ. ನಾನೇ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ತಿಳಿಸಿದ್ದಾರೆ.
ಸ್ವಾಧೀನ ಕಳೆದು ಕೊಂಡಿರುವ ‘ಕೈ’ ವರಿಷ್ಠರು ಎಷ್ಟೇ ಅದುಮಿಟ್ಟರೂ ‘ಮುಖ್ಯ ಮಂತ್ರಿ’ ಸ್ಥಾನದ ಅಸ್ಥಿರತೆಯ ಸ್ಥಿತಿ ಆಸ್ಫೋಟಗೊಳ್ಳುತ್ತಲೇ ಇದೆ.
— Vijayendra Yediyurappa (@BYVijayendra) November 3, 2023
ಜನತೆ ಸ್ಥಿರ ಸರ್ಕಾರ ದಯಪಾಲಿಸಿದ್ದರೂ ‘ಕಾಂಗ್ರೆಸ್ ಆಂತರಿಕ ಬೇಗುದಿ’ ಕರ್ನಾಟಕವನ್ನು ನಲುಗಿಸುತ್ತಿದೆ, ಜನರನ್ನು ಬಾಧಿಸುತ್ತಿದೆ.
ಜನ ಕಲ್ಯಾಣ ಮರೆತು ಅಧಿಕಾರಕ್ಕಾಗಿ ಬಡಿದಾಡುತ್ತಿರುವ… pic.twitter.com/nqnoPum4Te
ಈ ಕುರಿತು ಬಿಎಸ್ ಯಡಿಯೂರಪ್ಪ ಅವರ ಪುತ್ರ ಹಾಗೂ ಶಾಸಕ ಬಿ ವೈ ವಿಜಯೇಂದ್ರ ಟ್ವೀಟ್ ಮಾಡಿದ್ದು, ಸ್ವಾಧೀನ ಕಳೆದು ಕೊಂಡಿರುವ 'ಕೈ' ವರಿಷ್ಠರು ಎಷ್ಟೇ ಅದುಮಿಟ್ಟರೂ 'ಮುಖ್ಯ ಮಂತ್ರಿ' ಸ್ಥಾನದ ಅಸ್ಥಿರತೆಯ ಸ್ಥಿತಿ ಆಸ್ಫೋಟಗೊಳ್ಳುತ್ತಲೇ ಇದೆ. ಜನತೆ ಸ್ಥಿರ ಸರ್ಕಾರ ದಯಪಾಲಿಸಿದ್ದರೂ 'ಕಾಂಗ್ರೆಸ್ ಆಂತರಿಕ ಬೇಗುದಿ' ಕರ್ನಾಟಕವನ್ನು ನಲುಗಿಸುತ್ತಿದೆ, ಜನರನ್ನು ಬಾಧಿಸುತ್ತಿದೆ ಎಂದು ಕಿಡಿಕಾರಿದ್ಧಾರೆ.

ಜನ ಕಲ್ಯಾಣ ಮರೆತು ಅಧಿಕಾರಕ್ಕಾಗಿ ಬಡಿದಾಡುತ್ತಿರುವ ಕಾಂಗ್ರೆಸ್ಸಿಗರಿಗೆ "ಕುವೆಂಪು ಅವರ ಕನ್ನಡ ಡಿಂಡಿಮ ಬಾರಿಸಿ. ಸತ್ತಂತಿಹರನು ಬಡಿದೆಚ್ಚರಿಸು, ಕಚ್ಚಾಡುವರನು ಕೂಡಿಸಿ ಒಲಿಸು..
ಹೊಟ್ಟೆಯಕಿಚ್ಚಿಗೆ ಕಣ್ಣೀರ್ ಸುರಿಸು ಒಟ್ಟಿಗೆ ಬಾಳುವ ತೆರದಲಿ ಹರಸು! " ಸಾಲುಗಳನ್ನು ನೆನಪಿಸುವಂತಾಗಿದೆ ಎಂದು ಶಾಸಕ ವಿಜಯೇಂದ್ರ ಹೇಳಿದ್ದಾರೆ.
ಇನ್ನೂ ಈ ಕುರಿತು ರಾಜ್ಯ ಬಿಜೆಪಿ ಟ್ವೀಟ್ ಮಾಡಿದ್ದು, ನಾನೇ ಐದು ವರ್ಷ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಅವರೇ ಘೋಷಿಸಿ ರಾತ್ರಿ ಬೆಳಗಾಗಿದೆಯಷ್ಟೆ. ಅಷ್ಟರಲ್ಲೇ ಮುಖ್ಯಮಂತ್ರಿ ಹುದ್ದೆಗೆ ಮತ್ತೂ ಒಬ್ಬರು ಟವೆಲ್ ಹಾಕಿದ್ದಾರೆ! ಮುಖ್ಯಮಂತ್ರಿ ಸ್ಥಾನವೇ ಗ್ಯಾರಂಟಿ ಇಲ್ಲದ ಈ #ATMSarkara ದಲ್ಲಿ ಕಲೆಕ್ಷನ್ ಮಾಸ್ಟರ್ ಆಗಲು ಎಲ್ಲಿಲ್ಲದ ನೂಕುನುಗ್ಗಲು. ನಾನೂ ಸಿಎಂ ಆಗಬಲ್ಲೆ ಎಂದ ಕೂಡಲೇ ಸುತ್ತಲಿದ್ದವರೆಲ್ಲ ನಕ್ಕಿದ್ದು ಮಾತ್ರ ಯಾವುದರ ಸಂಕೇತ ಎಂಬುದನ್ನು ನೇರ ಮತ್ತು ನಿಖರತೆಯಿಂದ ಮಾತನಾಡುವ ಕರ್ನಾಟಕದ ಏಕೈಕ ರಾಜಕಾರಣಿ, Troll Minister ಪ್ರಿಯಾಂಕ್ ಖರ್ಗೆ ಅವರೇ ವ್ಯಾಖ್ಯಾನಿಸಬೇಕು ಎಂದು ಕಿಡಿಕಾರಿದೆ.












Click it and Unblock the Notifications