ಬಿ.ವೈ.ವಿಜಯೇಂದ್ರ & ಅಶ್ವತ್ಥ್ ನಾರಾಯಣ್ ಒಂದೇ ವೇದಿಕೆಯಲ್ಲಿ!
ಕರ್ನಾಟಕ ಬಿಜೆಪಿ ನಾಯಕರ ನಡೆ ದಿನದಿಂದ ದಿನಕ್ಕೆ ಕುತೂಹಲದ ಕೇಂದ್ರ ಬಿಂದುವಾಗಿ, ರಾಜಕೀಯ ಅಖಾಡವನ್ನು ಸೆಳೆಯುತ್ತಿದೆ. ಅದರಲ್ಲೂ ಕರ್ನಾಟಕ ಬಿಜೆಪಿ ಒಳಗೆ ಹೊತ್ತಿದ ಅಸಮಾಧಾನದ ಕಿಡಿ ಬಗ್ಗೆ ಬಿಜೆಪಿ ಕೇಂದ್ರ ನಾಯಕರಿಗೆ ತಲೆನೋವು ಶುರುವಾಗಿದೆ. ರಾಜ್ಯ ಬಿಜೆಪಿ ಅಸಮಾಧಾನದ ಪರಿಣಾಮ ಲೋಕಸಭೆ ಚುನಾವಣೆ ಮೇಲೆ ಎಫೆಕ್ಟ್ ಆಗಿಬಿಡುತ್ತಾ? ಅನ್ನೋ ಅನುಮಾನದ ನಡುವೆ, ವಿಜಯೇಂದ್ರ & ಅಶ್ವತ್ಥ್ ನಾರಾಯಣ್ ಅವರೀಗ ಒಂದೇ ವೇದಿಕೆಯಲ್ಲಿ ಕಾಣಿಸಿದ್ದಾರೆ.
ಹೌದು, ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ, ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮತ್ತೊಂದು ಕಡೆ ವಿರೋಧ ಪಕ್ಷದ ನಾಯಕರಾಗಿ ಆರ್. ಅಶೋಕ್ ಅವರು ಆಯ್ಕೆಯಾಗಿದ್ದಾರೆ. ಹೀಗೆ ಈ ಇಬ್ಬರ ಆಯ್ಕೆ ನಂತರ ಕರ್ನಾಟಕ ಬಿಜೆಪಿಯ ಒಳಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿ, ನೇರವಾಗಿ ತಮ್ಮದೇ ಪಕ್ಷದ ನಾಯಕರ ವಿರುದ್ಧ ಮಾತನಾಡುತ್ತಿದ್ದಾರೆ. ಇಂತಹ ವಾತಾವರಣದ ನಡುವೆ, ಬಿ.ವೈ.ವಿಜಯೇಂದ್ರ & ಅಶ್ವತ್ಥ್ ನಾರಾಯಣ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಭಾರಿ ಕುತೂಹಲ ಕೆರಳಿಸಿದೆ.

ಅಸಮಾಧಾನ ಶಮನಕ್ಕೆ ಪ್ರಯತ್ನ?
ಬಿ.ವೈ.ವಿಜಯೇಂದ್ರ ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಎಲ್ಲ ನಾಯಕರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅದರಲ್ಲೂ ಅಸಮಾಧಾನ ಎಲ್ಲಿ, ಎಲ್ಲಿ ಸ್ಫೋಟವಾಗಿದೆಯೋ ಅಲ್ಲೆಲ್ಲಾ ಚರ್ಚೆಯ ಮೂಲಕ ಸಮಸ್ಯೆ ಬಗೆಹರಿಸಲು ಅವರು ಯತ್ನಿಸುತ್ತಿದ್ದಾರೆ. ಇಷ್ಟೆಲ್ಲದರ ಮಧ್ಯೆ ಬಿ.ವೈ.ವಿಜಯೇಂದ್ರ & ಅಶ್ವತ್ಥ್ ನಾರಾಯಣ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಸಮಾರಂಭದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ.
ಶ್ರದ್ಧೇಯ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಹಾಗೂ ಸುಶಾಸನ ದಿನದ ಅಂಗವಾಗಿ ಸೆಂಟ್ರಲ್ ಕಾಲೇಜು ಸಂಯುಕ್ತ ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ʼಉತ್ತಮ ಆಡಳಿತ ದಿನ 2023ʼ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರು ಪಾಲ್ಗೊಂಡರು.
— BJP Karnataka (@BJP4Karnataka) December 25, 2023
ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ… pic.twitter.com/20V5TR5XjH
ಬಿಜೆಪಿ ಕರ್ನಾಟಕ ಹೇಳಿದ್ದು ಏನು?
ಇನ್ನು ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, 'ಶ್ರದ್ಧೇಯ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಹಾಗೂ ಸುಶಾಸನ ದಿನದ ಅಂಗವಾಗಿ ಸೆಂಟ್ರಲ್ ಕಾಲೇಜು ಸಂಯುಕ್ತ ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ʼಉತ್ತಮ ಆಡಳಿತ ದಿನ 2023ʼ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರು ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ @drashwathcn ಮತ್ತು ಪ್ರಮುಖರು ಉಪಸ್ಥಿತರಿದ್ದರು.' ಎಂದು ಪೋಸ್ಟ್ ಮಾಡಿದೆ.
ಒಟ್ನಲ್ಲಿ 2024ರ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿ ನಾಯಕರಿಗೆ, ಕರ್ನಾಟಕ ಬಿಜೆಪಿಯ ಅಸಮಾಧಾನ ತಲೆನೋವು ತರಿಸಿತ್ತು. ಆದರೆ ಇದನ್ನೆಲ್ಲಾ ಸರಿ ಮಾಡೋದಕ್ಕೆ, ಕರ್ನಾಟಕ ಬಿಜೆಪಿಯ ನೂತನ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮುಂದಾದಂತೆ ಕಾಣುತ್ತಿದೆ. ಹೀಗಾಗಿಯೇ ಈ ಹಿಂದೆ ಅಸಮಾಧಾನ ವ್ಯಕ್ತಪಡಿಸಿದ್ದವರು, ಹಾಗೂ ಈಗ ಅಮಸಾಧಾನ ವ್ಯಕ್ತಪಡಿಸುತ್ತಿರುವವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಹೀಗಿದ್ದಾಗ ಮತ್ತೊಂದು ಕಡೆ ಯತ್ನಾಳ್ ಅವರ ನಡೆ ಮಾತ್ರ ಭಾರಿ ಕೂತೂಹಲ ಕೆರಳಿಸಿದೆ.












Click it and Unblock the Notifications