ಉಪ ಚುನಾವಣೆ: ಬಿಜೆಪಿ-ಕಾಂಗ್ರೆಸ್ ನಾಯಕರನ್ನು ಕಂಗಾಲು ಮಾಡಿದ ದೇವೇಗೌಡರ ರಣತಂತ್ರ!
ಬೆಂಗಳೂರು, ಅ. 08: ಇಬ್ಬರು ಮಾಜಿ ಸಚಿವರ ನಿಧನದಿಂದ ತೆರುವಾಗಿರುವ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಇದೇ ಅ. 30 ರಂದು ಉಪ ಚುನಾವಣೆ ನಡೆಯಲಿದೆ. ಮೂರು ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಗೆಲವು ಸಾಧಿಸಲು ಭರ್ಜರಿ ತಯಾರಿಯನ್ನು ಆರಂಭಿಸಿವೆ. ವಿಜಯಪುರದ ಸಿಂದಗಿ ಹಾಗೂ ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ.
ಮೇಲ್ನೋಟಕ್ಕೆ ಎರಡೂ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಇರುವಂತೆ ಕಂಡು ಬರುತ್ತಿದೆ. ಆದರೆ ಕೊನೆಯ ಕ್ಷಣದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರು ಹಾಕಿರುವ ರಾಜಕೀಯ ದಾಳ ಎರಡೂ ಪಕ್ಷಗಳ ನಾಯಕರನ್ನು ಕಂಗಾಲು ಮಾಡಿದೆ. ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆಗಿದ್ದು, ಕೊನೆಯ ಘಳಿಗೆಯಲ್ಲಿ ಕಿಂಗ್ ಆಗುವ ಸಾಧ್ಯತೆಗಳನ್ನು ರಾಜಕೀಯ ವಿಶ್ಲೇಷಕರು ಮಾಡುತ್ತಿದ್ದಾರೆ. ಅದಕ್ಕೆ ನಿಖರ ಕಾರಣಗಳನ್ನು ಕೊಟ್ಟಿದ್ದಾರೆ.
ಹಾನಗಲ್ ಹಾಗೂ ಸಿಂಧಗಿ ಉಪ ಚುನಾವಣೆಗಳಿಗೆ ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಘೋಷಣೆಯಾಗಿರುವುದರಿಂದ ಉಪ ಚುನಾವಣೆಯ ರಣಕಣ ರಂಗು ಪಡೆದುಕೊಂಡಿದೆ. ಎಂ.ಸಿ. ಮನಗೂಳಿ ಅವರ ನಿಧನದ ನಂತರ ತೆರವಾಗಿದ್ದ ಸಿಂಧಗಿ ಕ್ಷೇತ್ರಕ್ಕೆೆ ಜೆಡಿಎಸ್‌ನಿಂದ ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಅವರನ್ನು ಕಾಂಗ್ರೆೆಸ್ ನಾಯಕರು ಆಪರೇಶನ್ ಮಾಡಿದ್ದಾರೆ, ಈಗ ಅವರೇ ಸಿಂಧಗಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಹೀಗಾಗಿ ಸಿಂಧಗಿ ಕ್ಷೇತ್ರಕ್ಕೆೆ ಅಭ್ಯರ್ಥಿಯನ್ನೇ ಹಾಕುವುದಿಲ್ಲ ಎಂದು ಮೊದಲು ಘೋಷಿಸಿದ್ದ ಜೆಡಿಎಸ್ ನಾಯಕರು ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸವಾಲು ಒಡ್ಡಿದ್ದಾರೆ.

ಕಾಂಗ್ರೆಸ್‌ಗೆ ಅಘಾತ ಕೊಡಲಿದೆಯಾ ಜೆಡಿಎಸ್?
ಎರಡೂ ಕ್ಷೇತ್ರಗಳಲ್ಲಿ ಮೇಲ್ನೋಟಕ್ಕೆ ಬಿಜೆಪಿ ಹಾಗೂ ಕಾಂಗ್ರೆೆಸ್ ನಡುವೆ ನೇರ ಪೈಪೋಟಿ ಏರ್ಪಡುವಂತೆ ಕಂಡರೂ, ಜೆಡಿಎಸ್ ನಾಯಕರ ಕಾರ್ಯತಂತ್ರಗಳು ಚುನಾವಣೆಯ ಫಲಿತಾಂಶದ ಪರಿಣಾಮ ಬೀರುವುದು ಖಚಿತವಾಗಿದೆ. ಸಿಂಧಗಿಯಲ್ಲಿ ಕಾಂಗ್ರೆೆಸ್ ಪಕ್ಷವು ಜೆಡಿಎಸ್ ಶಾಸಕರಾಗಿದ್ದ ಎಂ.ಸಿ. ಮನಗೂಳಿ ಅವರ ಪುತ್ರ ಅಶೋಕ ಮನಗೂಳಿಯ ಅವರನ್ನು ಸೆಳೆದು ಟಿಕೆಟ್ ನೀಡಿದೆ. ಆ ಮೂಲಕ ಜೆೆಡಿಎಸ್‌ಗೆ ಆಘಾತ ನೀಡುವ ಪ್ರಯತ್ನ ಮಾಡಿದೆ. ಏಟಿಗೆ ತಿರುಗೇಟು ಕೊಡಲು ಸಿದ್ಧತೆ ಮಾಡಿಕೊಂಡಿರುವ ಜೆಡಿಎಸ್, ಕಾಂಗ್ರೆಸ್ ಪಕ್ಷಕ್ಕೆ ಆಘಾತ ನೀಡಲೇಂದೆ ನಾಝಿಯಾ ಶಕೀಲಾ ಅಂಗಡಿ ಅವರನ್ನು ಕಣಕ್ಕಿಳಿಸಿದೆ. ಇದು ಕಾಂಗ್ರೆೆಸ್ ಓಟ್ ಬ್ಯಾಂಕ್‌ಗೆ ಏಟು ಕೊಡಲೆಂದೇ ಮಾಡಿರುವ ರಣತಂತ್ರ ಎಂಬ ಮಾತುಗಳು ಕೇಳಿ ವಿಜಯಪುರದಲ್ಲಿ ಕೇಳಿ ಬಂದಿವೆ.

ದೇವೇಗೌಡರ ರಣತಂತ್ರಕ್ಕೆ ಕಾಂಗ್ರೆಸ್ ಕಂಗಾಲು!
ಪಕ್ಷಾಂತರ ಮಾಡಿರುವ ಹಾಲಿ ಕಾಂಗ್ರೆಸ್ ಅಧ್ಯರ್ಥಿ ಅಶೋಕ ಮನಗೂಳಿಗೆ ಈ ಚುನಾವಣೆಯಲ್ಲಿ ತಂದೆಯನ್ನು ಕಳೆದುಕೊಂಡ ಅನುಕಂಪ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆ ಎನ್ನುವುದು ಮಹತ್ವದ್ದಾಗಿದೆ. ಸೋಲು ಗೆಲವಿನ ಮಧ್ಯೆ ದೇವೇಗೌಡರ ಮೇಲಿನ ಅಭಿಮಾನದಿಂದ ಜೆಡಿಎಸ್‌ನಲ್ಲಿಯೇ ಇದ್ದ ಎಂ.ಸಿ. ಮನಗೂಳಿ ನಿಧನವಾದ ವರ್ಷ ತುಂಬುವುದರೊಳಗಾಗಿ ಅವರ ಪುತ್ರ ಕಾಂಗ್ರೆೆಸ್ ಪಕ್ಷಕ್ಕೆ ವಲಸೆ ಹೋಗಿದ್ದಾರೆ. ವಲಸೆ ಹೋಗಿರುವುದರಿಂದ ತಂದೆಯ ಹೆಸರಿನಲ್ಲಿ ಅನುಕಂಪದ ಮತ ಕೇಳಿದರೆ ಜನರು ಯಾವ ರೀತಿ ಪ್ರತಿಕ್ರಿಯಿಸಬಹುದು ಎಂಬುದು ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದೆ.
ಸಿಂಧಗಿ ಉಪ ಚುನಾವಣೆಯಲ್ಲಿ ಬಿಜೆಪಿ ಮಾಜಿ ಶಾಸಕ ರಮೇಶ್ ಭೂಸನೂರು ಅವರನ್ನು ಕಣಕ್ಕಿಳಿಸಿದೆ. ಲಿಂಗಾಯತ ಗಾಣಿಗ ಸಮುದಾಯ ಹೆಚ್ಚಾಗಿರುವುದರಿಂದ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ಪ್ರಭಾವ ಎಷ್ಟರ ಮಟ್ಟಿಗೆ ಆಗುತ್ತದೆ ಎಂಬುದೂ ಕೂಡ ಕುತೂಹಲ ಮೂಡಿಸಿದೆ.

ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಫೈಟ್!
ಇನ್ನು ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಆಯ್ಕೆಯೆ ಚುನಾವಣೆ ಕಣ ಪೈಪೋಟಿಯಿಂದ ಕೂಡುವಂತೆ ಮಾಡಿತ್ತು. ಮಾಜಿ ಸಚಿವ ದಿವಂಗತ ಸಿ.ಎಂ. ಉದಾಸಿಯವರ ಕುಟುಂಬಕ್ಕೆೆ ಟಿಕೆಟ್ ನೀಡದೇ ಆಡಳಿತ ಪಕ್ಷ ಅನುಕಂಪದ ಬದಲು ಪಕ್ಷದ ಸಂಘಟನೆ ಹಾಗೂ ಸರ್ಕಾರದ ಸಾಧನೆಯ ಮೂಲಕ ಚುನಾವಣೆ ಎದುರಿಸಲು ಮಾಜಿ ಶಾಸಕ ಶಿವರಾಜ ಸಜ್ಜನರ್ ಅವರಿಗೆ ಟಿಕೆಟ್ ಕೊಟ್ಟಿದೆ. ಸಿ.ಎಂ. ಉದಾಸಿ ಅಭಿಮಾನಿಗಳ ನಡೆ ಹೇಗಿರುತ್ತದೆ ಎನ್ನುವುದು ಕುತೂಲಹಕ್ಕೆೆ ಕಾರಣವಾಗಿದೆ.

ಹಾನಗಲ್‌ನಲ್ಲೂ ಜೆಡಿಎಸ್ ಅಭ್ಯರ್ಥಿ ನಿರ್ಣಾಯಕ!
ಇನ್ನು ಕಾಂಗ್ರೆೆಸ್ ಹಿಂದೆ ಸಿ.ಎಂ. ಉದಾಸಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಅವರನ್ನೇ ಕಣಕ್ಕಿಳಿಸಿದೆ. ಆದರೆ, ಮಾಜಿ ಸಚಿವ ಮನೋಹರ ತಹಶೀಲ್ದಾರ್ ಅಸಮಾಧನಗೊಂಡಿದ್ದಾರೆ. ಅವರನ್ನು ಸಮಾಧಾನ ಪಡಿಸುವುದರ ಜೊತೆಗೆ ಜೆಡಿಎಸ್ ಕಣಕ್ಕಿಳಿಸಿರುವ ನಿಯಾಜ್ ಶೇಖ್ ಎಂಬ ಮುಸ್ಲಿಂ ಅಭ್ಯರ್ಥಿಯಿಂದಾಗಿ ಮತಗಳ ವಿಭಜನೆಯಾಗುವುದು ಖಚಿತವಾಗಿದೆ. ಹೀಗಾಗಿ ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರನ್ನು ಜೆಡಿಎಸ್ ಕಂಗಾಲು ಮಾಡಿದೆ.
ಹೀಗಾಗಿ ಸ್ವಲ್ಪ ಹೆಚ್ಚುಕಮ್ಮಿಯಾದರೂ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಕಿಂಗ್ ಮೇಕರ್ ಬದಲಿಗೆ ಕಿಂಗ್ ಆಗುವ ಸಾಧ್ಯತೆಗಳಿಗೆ ಎಂಬ ಮಾಹಿತಿಯಿದೆ. ಒಟ್ಟಾರೆ ಉಪ ಚುನಾವಣೆಯಲ್ಲಿ ದೇವೇಗೌಡರ ರಾಜಕೀಯ ದಾಳಿ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ಕಂಗಾಲು ಮಾಡಿರುವುದಂತೂ ನಿಜ!












Click it and Unblock the Notifications