ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿಶೇಷ ರೈಲು ಸೇವೆ
ಬೆಂಗಳೂರು, ಏಪ್ರಿಲ್ 08: ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ಆರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ನೀಡುವ ವರೆಗೂ ಹೋರಾಟ ಕ ಬಿಡಲ್ಲ ಎಂದು ಸಾರಿಗೆ ನೌಕರರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಯುಗಾದಿ ಸಮೀಪಿಸಿರುವ ಕಾರಣ ದೂರದ ಊರುಗಳಿಗೆ ಹೋಗಲಾರದೇ ಪ್ರಯಾಣಿಕರು ಕಂಗೆಟ್ಟಿದ್ದಾರೆ. ಸಂಕಷ್ಟದಲ್ಲಿರುವ ಪ್ರಯಾಣಿಕರಿಗೆ ಅನುಕೂಲವಾಗಲು ನೈರುತ್ಯ ರೈಲ್ವೇ ಏಪ್ರಿಲ್ 08 ರಿಂದ ಏಪ್ರಿಲ್ 11 ರ ವರೆಗೆ ರಾಜ್ಯದಲ್ಲಿ ವಿಶೇಷ ರೈಲು ಸೇವೆ ಆರಂಭಿಸಿದೆ.

ವಿಶೇಷ ದರದೊಂದಿಗೆ ರೈಲು ಪ್ರಯಾಣಕಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಪತ್ರದ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ಈ ವಿಶೇಷ ರೈಲು ಸೇವೆ ಇಂದಿನಿಂದಲೇ ಆರಂಭಿಸಿದೆ.
| ದಿನಾಂಕ | ಟ್ರೈನ್ ನಂಬರ್ | ಎಲ್ಲಿಂದ ಎಲ್ಲಿಗೆ |
| ಏ. 08 | 06545 | ಯಶವಂಪುರ ದಿಂದ ಹುಬ್ಬಳ್ಳಿ |
| ಏ. 09 | 0646 | ಯಶವಂತಪುರ - ಬಿಜಾಪುರ |
| 0646 | ಯಶವಂತಪುರ - ಬೆಳಗಾವಿ | |
| 6215 | ಮೈಸೂರು - ಬೀದರ್ | |
| 06555 | ಮೈಸೂರು - ಯಶವಂತಪುರ | |
| 06556 | ಯಶವಂತಪುರ - ಮೈಸೂರು | |
| 06511 | ಯಶವಂತಪುರ - ಶಿವಮೊಗ್ಗ ಟೌನ್ | |
| 06513 | ಯಶವಂತಪುರ - ಕಾರವಾರ | |
| ಏ.10 | 06557 | ಯಶವಂತಪುರ- ಬೆಳಗಾವಿ |
| 06216 | ಬೀದರ್ - ಮೈಸೂರು | |
| 06551 | ಯಶವಂತಪುರ ಬೀದರ್ | |
| 06553 | ಮೈಸೂರು- ಸಿಟಿ ರೈಲ್ವೇ ನಿಲ್ದಾಣ | |
| 06554 | ಸಿಟಿ ರೈಲ್ವೇ ನಿಲ್ದಾಣ- ಮೈಸೂರು | |
| 06556 | ಯಶವಂತಪುರ- ಮೈಸೂರು | |
| 06512 | ಶಿವಮೊಗ್ಗ ಟೌನ್ - ಸಿಟಿ ರೈಲ್ವೇ ನಿಲ್ದಾಣ | |
| 06514 | ಕಾರವಾರ - ಯಶವಂತಪುರ | |
| ಏ. 11 | 06552 | ಬೀದರ್ - ಯಶವಂತಪುರ |
| 06558 | ಬೆಳಗಾವಿ- ಯಶವಂತಪುರ | |
| ಏ. 14 | 06548 | ಬೆಳಗಾವಿ- ಯಶವಂತಪುರ |
| 06554 | ಸಿಟಿ ರೈಲ್ವೇ ನಿಲ್ದಾಣ- ಮೈಸೂರು | |
| 06553 | ಮೈಸೂರು -ಸಿಟಿ ರೈಲ್ವೇ ನಿಲ್ದಾಣ | |
| 06555 | ಮೈಸೂರು - ಯಶವಂತಪರ | |
| 06556 | ಯಶವಂತಪುರ- ಮೈಸೂರು |












Click it and Unblock the Notifications