ಜುಲೈ 9 ಬುಧವಾರ ಬಸ್ & ಮೆಟ್ರೋ ಸೇವೆ ಬಂದ್? ಆಟೋ & ಕ್ಯಾಬ್ ಕೂಡ ಸಿಗಲ್ವಾ? Karnataka Bandh
ಕರ್ನಾಟಕ ರಾಜ್ಯ ಭಾರತದ ಅತ್ಯಂತ ಶ್ರೀಮಂತ ರಾಜ್ಯಗಳ ಪೈಕಿ ಒಂದಾಗಿದ್ದು, ಕನ್ನಡಿಗರ ರಾಜಧಾನಿ ಬೆಂಗಳೂರು ಜಗತ್ತಿನ ಐಟಿ ಸಿಟಿ ಅನ್ನೋ ಹೆಗ್ಗಳಿಕೆ ಗಳಿಸಿದೆ. ಇಂತಹ ನಮ್ಮ ಬೆಂಗಳೂರಿನಲ್ಲಿ ಕೋಟಿ, ಕೋಟಿ ಜನರಿಗೆ ಬಸ್, ಮೆಟ್ರೋ ರೀತಿಯ ಸಾರ್ವಜನಿಕ ಸಾರಿಗೆ ಜೊತೆಗೆ ಆಟೋ & ಕ್ಯಾಬ್‌ಗಳೇ ಆಧಾರವಾಗಿವೆ. ಪ್ರತಿನಿತ್ಯವೂ ಕೂಡ 1,00,00,000 ಹೆಚ್ಚು ಜನರು ಬೆಂಗಳೂರಿನ ರಸ್ತೆಗಳ ಮೇಲೆ ಸಂಚಾರ ಮಾಡುತ್ತಾರೆ. ಇಂತಹ ಸಮಯದಲ್ಲೇ, ಜುಲೈ 9 ಬುಧವಾರ ಬಸ್ & ಮೆಟ್ರೋ ಸೇವೆ ಬಂದ್? ಆಟೋ & ಕ್ಯಾಬ್ ಕೂಡ ಸಿಗಲ್ವಾ?
ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಬ್ಯಾನ್ ಆಗಿದ್ದು, ಭಾರಿ ದೊಡ್ಡ ಗಲಾಟೆ ಕೂಡ ನಡೆಯುತ್ತಿದೆ. ಒಂದು ಕಡೆ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಬ್ಯಾನ್ ಆದ ನಂತರ ಆಟೋ & ಕ್ಯಾಬ್ ಚಾಲಕರು ಡಬಲ್ ಹಣ ಚಾರ್ಜ್ ಮಾಡುತ್ತಿದ್ದಾರೆ ಅನ್ನೋ ಆರೋಪ ಕೂಡ ಕೇಳಿ ಬರುತ್ತಿದೆ. ಪರಿಸ್ಥಿತಿ ಹೀಗೆ ಇದ್ದಾಗಲೇ, ಮತ್ತೆ ಬೈಕ್ ಟ್ಯಾಕ್ಸಿ ಶುರು ಮಾಡಿ, ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸರ್ವಿಸ್ ಮತ್ತೆ ಶುರುವಾಗಲಿ ಅಂತಾ ಕೂಡ ಒತ್ತಾಯವನ್ನ ಮಾಡುತ್ತಿದ್ದಾರೆ ಕೆಲವರು. ಇಷ್ಟೆಲ್ಲಾ ಗಲಾಟೆಗಳ ನಡುವೆ ಜುಲೈ 9 ಬುಧವಾರ ಬಸ್ & ಮೆಟ್ರೋ ಸೇವೆ ಬಂದ್? ಆಟೋ & ಕ್ಯಾಬ್ ಕೂಡ ಸಿಗಲ್ವಾ?

ಬಸ್ & ಮೆಟ್ರೋ ಸೇವೆ ಬಂದ್?
ಆಟೋ & ಕ್ಯಾಬ್ ಓಡಿಸುವ ಕಾರ್ಮಿಕರದ್ದು ನೂರಾರು ಸಮಸ್ಯೆಗಳು ಇವೆ, ಒಂದು ಕಡೆ ಬೆಂಗಳೂರಿನ ಭಾರಿ ಟ್ರಾಫಿಕ್ ಜಾಮ್ ನಡುವೆ ಒದ್ದಾಡುತ್ತಾ ಡ್ರೈವಿಂಗ್ ಮಾಡಬೇಕಿದೆ. ಇನ್ನೊಂದು ಕಡೆ ಗ್ರಾಹಕರ ಜೊತೆಗೂ ಕಿತ್ತಾಡುತ್ತಾ & ಜಗಳ ಮಾಡುತ್ತಾ ಕೆಲಸ ಮಾಡುವ ಪರಿಸ್ಥಿತಿ ಇದೆ. ಇಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಬಸ್ ಓಡಿಸುವ ಚಾಲಕರು & ಕಂಡಕ್ಟರ್‌ಗಳು ಕೂಡ ನೂರಾರು ಸಮಸ್ಯೆ ಎದುರಿಸುತ್ತಿದ್ದಾರೆ. ಸಾರಿಗೆ ಕಾರ್ಮಿಕರು ನೂರಾರು ಸಮಸ್ಯೆ ಎದುರಿಸುತ್ತಾ ಪ್ರತಿದಿನ ಪರದಾಡುತ್ತಾ ಮನೆಗೆ ಹೋಗುವಂತೆ ಆಗುತ್ತಿದೆ. ಹೀಗಿದ್ದಾಗಲೇ, ಜುಲೈ 9 ಬುಧವಾರ ಬಸ್ & ಮೆಟ್ರೋ ಸೇವೆ ಬಂದ್? ಆಟೋ & ಕ್ಯಾಬ್ ಕೂಡ ಸಿಗಲ್ವಾ?
ಕಾರ್ಮಿಕರು ಈಗ ಒಗ್ಗಟ್ಟಿನಿಂದ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲು ಸಂಪೂರ್ಣ ಸಿದ್ಧರಾಗಿದ್ದಾರೆ. ದೇಶದಲ್ಲಿ ಕಾರ್ಮಿಕರ ಹೋರಾಟಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತವೆ, ಹಾಗೇ ಕಾರ್ಮಿಕರು ಹೋರಾಟ ಮಾಡುತ್ತಾರೆ ಅಂದರೆ ದೊಡ್ಡ ಪ್ರತಿಭಟನೆ & ಭಾರತ ಬಂದ್ ಆಗುವುದು ಕೂಡ ಗ್ಯಾರಂಟಿ. ಹೀಗಿದ್ದಾಗಲೇ ಇದೀಗ ಮತ್ತೊಮ್ಮೆ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಮಿಕ ಸಂಘಟನೆಗಳು ಹೋರಾಟ ನಡೆಸಲು & ಆ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಲು ಸಜ್ಜಾಗಿವೆ. ಕೇಂದ್ರ ಸರ್ಕಾರ ಸೇರಿ, ಎಲ್ಲಾ ಸರ್ಕಾರಗಳು ಕಾರ್ಮಿಕರ ವಿರುದ್ಧ ಇವೆ ಅಂತಾ ಆರೋಪಿಸಿ ಇದೀಗ ಹೋರಾಟಕ್ಕೆ ಕರೆ ನೀಡಿವೆ ಕಾರ್ಮಿಕ ಸಂಘಟನೆಗಳು.
ನಾಳೆ ಅಲ್ಲೋಲ & ಕಲ್ಲೋಲ ಗ್ಯಾರಂಟಿ?
ಹೀಗೆ ಅಖಿಲ ಭಾರತ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳು ಇದೀಗ ಕರೆ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್ & ಭಾರತ್ ಬಂದ್ ಆಗುವ ಸಾಧ್ಯತೆ ದಟ್ಟವಾಗಿದೆ. ಕಾರ್ಮಿಕ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆ, ನಮ್ಮ ಬೆಂಗಳೂರು & ಹುಬ್ಬಳ್ಳಿ ಮತ್ತು ಧಾರವಾಡ ಸೇರಿದಂತೆ ಭಾರತದ ಎಲ್ಲಾ ಪ್ರಮುಖ ನಗರಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ತುಂಬಾ ದೊಡ್ಡ ಮಟ್ಟದಲ್ಲೇ ಕಾರ್ಮಿಕರು ಹೋರಾಟ ನಡೆಸಲು ಸಜ್ಜಾಗಿದ್ದು, ಇದೇ ಕಾರಣಕ್ಕೆ ಜುಲೈ 9 ಬುಧವಾರ ಬಸ್ & ಮೆಟ್ರೋ ಸೇವೆ ಬಂದ್? ಆಟೋ ಹಾಗು ಕ್ಯಾಬ್ ಕೂಡ ಸಿಗಲ್ವಾ? ಅನ್ನೋ ಅನುಮಾನ ಮೂಡಿದೆ. ಈಗಾಗಲೇ ಬಹುತೇಕ ಸಂಘಟನೆಗಳು ಈ ಬೃಹತ್ ಹೋರಾಟಕ್ಕೆ ಬೆಂಬಲ ನೀಡಿದ್ದು, ನಾಳೆ ಅಲ್ಲೋಲ & ಕಲ್ಲೋಲ ಉಂಟಾಗುವ ಸಾಧ್ಯತೆ ದಟ್ಟವಾಗಿದೆ!












Click it and Unblock the Notifications