ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋನ್ ಆಪ್ ಕರ್ಮಕಾಂಡ: ಚೀನಾ ಮೂಲದ ಲಿಯು ಯಿಗೆ ಲುಕ್ಔಟ್ ನೋಟಿಸ್

|
Google Oneindia Kannada News

ಬೆಂಗಳೂರು, ಜು. 13: ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಹಲವು ಆನ್‌ಲೈನ್ ಲೋನ್ ಅಪ್‌ಗಳ ಮೂಲಕ ಲಕ್ಷ ಲಕ್ಷ ಸುಲಿಗೆ ಮಾಡಿದ್ದ ಚೀನಾ ಮೂಲದ ವಂಚಕ ಲಿಯು ಯೀ ಪತ್ತೆಗೆ ಬ್ಯೂರೋ ಆಫ್ ಇಮಿಗ್ರೇಷನ್ ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ.

2019 ರಲ್ಲಿ ಲಿಯು ಯೀ ಬೆಂಗಳೂರಿನಲ್ಲಿ ತನ್ನ ಅಕ್ರಮ ವಹಿವಾಟು ಆರಂಭಿಸಿದ್ದ. ಒಡಿಶಾದದಲ್ಲಿ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಣ ವಂಚನೆ ಮಾಡಿದ್ದಾನೆ. ಈತನ ವಿರುದ್ಧ ತನಿಖೆ ನಡೆಸುತ್ತಿರುವ ಒಡಿಶಾದ ಆರ್ಥಿಕ ಅಪರಾಧ ತನಿಖಾ ದಳದ ಪ್ರಸ್ತಾಪದ ಮೇರೆಗೆ ಲಿಯು ಯೀ ವಿರುದ್ಧ ಬ್ಯೂರೋ ಆಪ್ ಇಮಿಗ್ರೇಷನ್ ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ.

ಈತನ ವಂಚಕ ಲೋನ್ ಆಪ್‌ಗಳು:

ಲಿಯು ಯೀ ಬೆಂಗಳೂರಿನಲ್ಲಿ ಕಂಪನಿ ತೆರೆದಿದ್ದ ಈತನ ಮಾತೃ ಸಂಸ್ಥೆ ಚೀನಾದ ಹಾಂಗ್ ಝನಲ್ಲಿದ್ದು, ಝಿಯಾನ್ ಬಿಂಗ್ ಆಗಿದೆ. ಕಂಪನಿಯ ಇಬ್ಬರು ವ್ಯಕ್ತಿಗಳು ನೀಡುತ್ತಿದ್ದ ಸೂಚನೆ ಮೇರೆಗೆ ಬೆಂಗಳೂರು ಸೇರಿದಂತೆ ಹಲು ರಾಜ್ಯಗಳಲ್ಲಿ ಲೋನ್ ಆಪ್ ಗಳನ್ನು ಪರಿಚಯಿಸಿ ಅಕ್ರಮ ವಹಿವಾಟು ನಡೆಸುತ್ತಿದ್ದ ಎಂದು ಇಡಬ್ಲೂ ಹೇಳಿದೆ.

Bureau of Immigration Issued Look out notice against Liu Yi involved in loan app scam

ಲಿಯು ಯೀ ಕಾನೂನು ಬಾಹಿರ ಆಪ್‌ಗಳು:

ಲಿಯು ಯೀ ಪರಿಚಯಿಸಿದ್ದ ಕೊಕೊ ಲೋನ್ ಜೋಜೋ ಲೋನ್, ಸಿಲ್ವರ್ ಕ್ರೆಡಿಟ್ ಲೋನ್, ಗೋಲ್ಡ್ ಕ್ಯಾಶ್ ಲೋನ್, ಲಿಟಲ್ ಬೋರೌ ಲೋನ್ ಟ್ಯಾಪ್, ಕ್ರೆಡಿಟ್ ಲೋನ್, ಗೋಲ್ಡ್ ಕ್ಯಾಶ್ ಲೋನ್, ಲಿಟಲ್ ಬೌರೋ ಲೋನ್ ಆಪ್, ಸ್ಪೀಡೀ ರುಪೀ ಲೋನ್, ಎಕ್ಸ್ ಪ್ರೆಸ್ ಕ್ರೆಡಿಟ್ ಲೋನ್, ಕ್ರೆಡಿಟ್ ಪ್ಲಾನ್ ಲೋನ್, ಝಪೀ ಡೇ ಲೋನ್, ಮತ್ತಿತರ ಕಾನೂನು ಬಾಹಿರ ಆಪ್‌ಗಳನ್ನು ಪರಿಚಯಿಸಿ ದುಬಾರಿ ಬಡ್ಡಿ ವಸಲಿ ಮಾಡಿ ವಂಚನೆ ಮಾಡುತ್ತಿದ್ದ.

ಈ ಲೋನ್ ಆಪ್‌ ಗಳಲ್ಲಿ ಕನಿಷ್ಠ 03 ಸಾವಿರ ರೂ. ನಿಂದ ಹತ್ತು ಸಾವಿರ ರೂ. ವರೆಗೂ ಸಾಲ ನೀಡುತ್ತಿದ್ದ. ಸಾಲ ವಾಪಸು ಕೊಡದಿದ್ದರೆ, ಸಾಲಗಾರರಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡುವುದು. ಅದಕ್ಕೂ ಸಾಲ ಪಾವತಿ ಮಾಡದಿದ್ದ ಪಕ್ಷದಲ್ಲಿ ಸಾಲಗಾರರ ಚಿತ್ರವನ್ನು ಅಶ್ಲೀಲಗೊಳಿಸಿ ವಿಡಿಯೋಗಳನ್ನು ಅವರ ಆಪ್ತ ಸಂಪರ್ಕ ಸಂಖ್ಯೆಗಳಿಗೆ ರವಾನಿಸಿ ಮಾನ ಹರಾಜು ಹಾಕುತ್ತಿದ್ದವು. ಅವಮಾನ ಎದುರಿಸಲಾಗದೇ ಅನೇಕರು ಈ ವಂಚಕ ಲೋನ್ ಆಪ್‌ಗಳ ಕಿರುಕುಳಕ್ಕೆ ಬೇಸತ್ತು ಸಾವನ್ನಪ್ಪಿದ್ದರು.

Bureau of Immigration Issued Look out notice against Liu Yi involved in loan app scam

ಕೋವಿಡ್ ಕಾಲದಲ್ಲಿ ಮಧ್ಯಮ ವರ್ಗ ಟಾರ್ಗೆಟ್:

ಕೋವಿಡ್ ಸಂಕಷ್ಟ ಕಾಲದಲ್ಲಿ ಜನ ಸಾಮಾನ್ಯರು ಅನಿವಾರ್ಯವಾಗಿ ಲೋನ್ ಆಪ್‌ಗಳ ಮೊರೆ ಹೋಗಿ ಸಾಲ ಪಡೆದು ವಂಚನೆಗೆ ಒಳಗಾಗಿದ್ದಾರೆ ಲಿಯು ಯಿ ಪರಿಚಯಿಸಿದ್ದ ಆಪ್‌ಗಳಲ್ಲಿ ಸಾಲ ಪಡೆದವರು ನಾಲ್ಕು ಪಟ್ಟು ಬಡ್ಡಿ ಕಟ್ಟಿದರೂ ಸಾಲ ತೀರಿಲ್ಲ. ಇನ್ನೂ ಕೆಲವರ ಮಾನ ಹರಾಜು ಹಾಕಿವೆ. ಕೋಕೋ ಲೋನ್ ಜೋಜೋ ಲೋನ್ ಎಂಬಂತಹ ಆಪ್‌ಗಳು ಒಂದೂವರೆ ಲಕ್ಷ ಕ್ಕೂ ಹೆಚ್ಚು ಮಂದಿ ಈ ಆಪ್‌ ಡೌನ್‌ಲೋಡ್ ಮಾಡಿ ಸಾಲ ಪಡೆದುಕೊಂಡಿದ್ದಾರೆ. ಮಧ್ಯಮ ವರ್ಗವನ್ನೇ ಟಾರ್ಗೆಟ್ ಮಾಡಿ ವಂಚನೆ ಮಾಡಿದೆ ಎಂದು ಒಡಿಶಾದ ಆರ್ಥಿಕ ಅಪರಾಧ ತನಿಖೆ ಸಂಸ್ಥೆ ಹೇಳಿದೆ.

ಲಿಯು ಯೀ ವಿರುದ್ಧ ಒಡಿಶಾದ ಇಒಡಬ್ಲೂ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 21 ರಂದು ಕೇಸು ದಾಖಲಾಗಿದೆ. ಲಿಯು ಯೀ ವಿವಿಧ ರಾಜ್ಯಗಳಲ್ಲಿ ವಂಚನೆ ಮಾಡಿದ್ದು, ಈತನ ಸಹಚರರನ್ನು ಬಂಧಿಸಲಾಗಿದೆ. ಬೆಂಗಳೂರು, ಮುಂಬಯಿ, ದೆಹಲಿಯ ಕಚೇರಿಗಳ ಮೇಲೆ ದಾಳಿ ಮಾಡಿ 6.75 ಕೋಟಿ ರೂ. ಹಣವನ್ನು ಆರ್ಥಿಕ ಅಪರಾಧ ತನಿಖಾ ತಳ ಬಂಧಿಸಿದೆ.

Recommended Video

ಬುಮ್ರಾ ಮತ್ತು ಪತ್ನಿ ಸಂಜನಾ ಗಣೇಶನ್ ಇಂಗ್ಲೆಂಡ್ ಆಟಗಾರರನ್ನು ಒಳಗೂ- ಹೊರಗೂ ಕಾಡಿದ್ದು ಹೀಗೆ | *Cricket | Oneindia

English summary
The Bureau of Immigration Issued Look out notice against Chinese national Liu Yi for his alleged involvement in running an illegal digital loan mobile app case in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X