ಏ.27ರಿಂದ ಐದು ದಿನ ಯಡಿಯೂರಪ್ಪ ಬರ ಪ್ರವಾಸ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 18 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಬರ ಪ್ರವಾಸ ಹೊರಟಿದ್ದಾರೆ. ಏಪ್ರಿಲ್ 27ರಿಂದ ಐದು ದಿನಗಳ ಕಾಲ ಅವರು ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ನಡೆಸಲಿದ್ದಾರೆ.

ಬೀದರ್‌ನಿಂದ ಪ್ರವಾಸ ಆರಂಭಿಸಲಿರುವ ಬಿ.ಎಸ್.ಯಡಿಯೂರಪ್ಪ ಅವರು ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ ಮುಂತಾದ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಕುಡಿಯುವ ನೀರಿನ ಸಮಸ್ಯೆ, ಗೋ ಶಾಲೆಗಳ ಪರಿಸ್ಥಿತಿಗಳ ಬಗ್ಗೆ ಅವರು ಪರಿಶೀಲಿಸಲಿದ್ದಾರೆ. [ಕರ್ನಾಟಕದಲ್ಲಿ ಭೀಕರ ಬರಗಾಲ, ಹೇಳುವವರಿಲ್ಲ ಕೇಳುವವರಿಲ್ಲ]

yeddyurappa

ಪ್ರವಾಸದ ವೇಳಾಪಟ್ಟಿ : ಬಿ.ಎಸ್.ಯಡಿಯೂರಪ್ಪ ಅವರು ಏಪ್ರಿಲ್ 27ರಂದು ಬೀದರ್, ಔರಾದ್ ಮತ್ತು ಬಾಲ್ಕಿಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಏ.28ರಂದು ಕಲಬುರಗಿ ಅಳಂದ, ಏಪ್ರಿಲ್ 29ರಂದು ಯಾದಗಿರಿ, ಏಪ್ರಿಲ್ 30ರಂದು ರಾಯಚೂರು, ಲಿಂಗಸಗೂರು, ದೇವದುರ್ಗ, ಮೇ 1 ರಂದು ವಿಜಯಪುರದಲ್ಲಿ ಪ್ರವಾಸ ನಡೆಸಲಿದ್ದಾರೆ. [ಯಡಿಯೂರಪ್ಪನವರನ್ನು ವಿವಾದದ ಸುಳಿಗೆ ಸಿಲುಕಿಸಿರುವ ಕಾರು!]

ಪ್ರವಾಸದ ಸಂದರ್ಭದಲ್ಲಿ ಬರ ಪೀಡಿತ ಪ್ರದೇಶದಲ್ಲಿ ಸರ್ಕಾರ ಕೈಗೊಂಡಿರುವ ಬರ ಪರಿಹಾರ ಕಾರ್ಯಗಳ ಬಗ್ಗೆ ಯಡಿಯೂರಪ್ಪ ಅವರು ಮಾಹಿತಿ ಸಂಗ್ರಹಣೆ ಮಾಡಲಿದ್ದಾರೆ. [ಭೀಕರ ಬರ, ಜನರ ಸುಲಿಗೆ ಮಾಡುತ್ತಿರುವ ಟ್ಯಾಂಕರ್ ಮಾಫಿಯಾ]

ರೈಲಿನಲ್ಲಿ ಪ್ರಯಾಣ : ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಮಾಡಲು ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ಕೋಟಿ ರೂ. ಬೆಲೆಬಾಳುವ ಕಾರು ಕೊಟ್ಟಿದ್ದರು. ಆದರೆ, ಕಾರಿನ ಬಗ್ಗೆ ವಿವಾದವಾದ ಹಿನ್ನಲೆಯಲ್ಲಿ ಅದನ್ನು ಯಡಿಯೂರಪ್ಪ ಅವರು ವಾಪಸ್ ಕೊಟ್ಟಿದ್ದು, ರೈಲಿನಲ್ಲಿ ರಾಜ್ಯ ಪ್ರವಾಸ ಮಾಡಲಿದ್ದಾರೆ. [ಮಳೆಗಾಲದಲ್ಲಿ ದ್ವೀಪವಾಗುವ ಗ್ರಾಮದಲ್ಲಿ ಈಗ ಒಂದು ಹನಿ ನೀರಿಲ್ಲ]

ಪಕ್ಷ ಸಂಘಟನಾ ಸಭೆ : ಏಪ್ರಿಲ್ 18 ರಿಂದ 23ರ ತನಕ ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಇರಲಿದ್ದು, ಪಕ್ಷ ಸಂಘನೆಗಾಗಿ ವಿಭಾಗೀಯ ಮಟ್ಟದ ಪರಿಶೀಲನೆ ಮತ್ತು ಸಮಾಲೋಚನೆ ಸಭೆಯನ್ನು ನಡೆಸಲಿದ್ದಾರೆ. ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ ಸಭೆ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka BJP president B.S.Yeddyurappa will tour drought-hit districts in north Karnataka from April 27, 2016. More than 120 taluks of Karnataka announced as drought-hit this year.
Please Wait while comments are loading...