ಮಧ್ಯಂತರ ಚುನಾವಣೆ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಸಿಡಿಸಿದ್ರು ಬಾಂಬ್
Recommended Video
ಬೆಂಗಳೂರು, ಜೂನ್ 21: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮನೆಯಲ್ಲಿ ಯೋಗಾಭ್ಯಾಸ ನಿರತರಾಗಿದ್ದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಬೆಳ್ಳಂಬೆಳ್ಳಗೆ ಸಿಡಿಸಿದ ಬಾಂಬ್ ಗೆ ಪ್ರತಿ ಬಾಂಬ್ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಿಡಿಸಿದ್ದಾರೆ.
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಅವರು ಖಾಸಗಿ ಸುದ್ದಿ ವಾಹಿನಿಯ ಪ್ರತಿನಿಧಿ ಜತೆ ಮಾತನಾಡುತ್ತಾ, ಮೈತ್ರಿ ಸರ್ಕಾರ ಸ್ಥಾಪನೆಯಾಗಲು ಏನು ಕಾರಣ? ಯಾರಿಗೆ ಅಧಿಕಾರ ಅನಿವಾರ್ಯವಾಗಿತ್ತು. ಯಾರಿಂದ ಈಗ ಪರಿಸ್ಥಿತಿ ಹಾಳಾಗಿದೆ ಎಂಬುದರನ್ನು ವಿವರಿಸಿದರು. ಈ ನಡುವೆ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಇದೆಯೆ? ಎಂಬ ಪ್ರಶ್ನೆಗೆ ರಾಜ್ಯ ವಿಧಾನಸಭಾ ಚುನಾವಣೆಗೆ ಮಧ್ಯಂತರ ಚುನಾವಣೆ ಖಚಿತ ಎಂದಿದ್ದರು.
ದೇವೇಗೌಡರ ಹೇಳಿಕೆಯನ್ನು ಅವರ ಪುತ್ರ, ಸಿಎಂ ಕುಮಾರಸ್ವಾಮಿ ಅವರು ಅಲ್ಲಗೆಳೆದು, ದೇವೇಗೌಡರು ಹೇಳಿದ್ದು, ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ಎಂದಿದ್ದಾರೆ. ಆದರೆ, ದೇವೇಗೌಡರ ಹೇಳಿಕೆ ಬಗ್ಗೆ ಬಿಜೆಪಿ ನಾಯಕರು ಪ್ರತಿಕ್ರಿಯಿಸಿ, ಅಪವಿತ್ರ ಮೈತ್ರಿಯಿಂದ ಜನ ಬೇಸತ್ತಿದ್ದಾರೆ, ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ಸ್ಥಾನ ಮಾನದ ಬಗ್ಗೆ ಜನರಿಗೆ ಅರಿವಾಗಿದೆ. ಗೌಡರು ಬಯಸಿದಂತೆ ನಾಳೆಯೇ ಚುನಾವಣೆ ನಡೆದರೂ ಬಿಜೆಪಿ ಸಿದ್ಧವಿದೆ ಎಂದಿದ್ದಾರೆ.

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಯೋಗಾಭ್ಯಾಸದ ನಂತರ ಮಾತನಾಡಿ, ಕಾಂಗ್ರೆಸ್ ನಲ್ಲಿ 20 ಮಂದಿ ಅತೃಪ್ತ ಶಾಸಕರಿದ್ದು, ಅವರನ್ನು ನಾವು ಸಂಪರ್ಕ ಮಾಡಿಲ್ಲ. ಆದರೆ , ಅವರು ಯಾವುದೇ ಸಂದರ್ಭದಲ್ಲಿ ಹೊರ ಬರುವುದು ಖಚಿತ ನಾವು ಯಾವುದೇ ರೀತಿಯಲ್ಲಿ ಸರ್ಕಾರ ಉರುಳಿಸುವ ಕೆಲಸದಲ್ಲಿ ನಿರತನಾಗಿಲ್ಲ ಎಂದಿದ್ದಾರೆ.
ದೇವೇಗೌಡರು ಮಧ್ಯಂತರ ಚುನಾವಣೆಯ ಮಾತನಾಡಿದರೂ, ರಾಜ್ಯದ ಜನತೆ ಇದನ್ನು ಒಪ್ಪುವುದಿಲ್ಲ. ಅಲ್ಲದೇ ಬಿಜೆಪಿ ಅತ್ಯಧಿಕ ಸ್ಥಾನಗಳನ್ನು ಹೊಂದಿದ್ದು, ಮೈತ್ರಿ ಸರ್ಕಾರ ನಡೆಸಲು ಕಾಂಗ್ರೆಸ್-ಜೆಡಿಎಸ್ ನವರಿಗೆ ಯೋಗ್ಯತೆ ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಲಿ ಎಂದು ಯಡಿಯೂರಪ್ಪ ಗುಡುಗಿದ್ದಾರೆ.
ಯಡಿಯೂರಪ್ಪನವರು ಹೇಳಿದಂತೆ ಶಾಸಕರು ವಲಸೆ ಆರಂಭಿಸಿದರೆ, ಸರ್ಕಾರ ತಾನಾಗೇ ಉರುಳಿ ಬೀಳುತ್ತದೆ. ಮಹಾರಾಷ್ಟ್ರ, ಜಾರ್ಖಂಡ್, ಹರಿಯಾಣ ಚುನಾವಣೆಗಳು ಸಮೀಪವಿದ್ದು, ಕರ್ನಾಟಕದಲ್ಲೂ ಅವಧಿಗೆ ಮುನ್ನ ಚುನಾವಣೆ ನಡೆಯುವ ನಿರೀಕ್ಷೆ ಹಲವರು ನಾಯಕರಲ್ಲಿದೆ












Click it and Unblock the Notifications