ಭೂ ಹಗರಣ: ಯಡಿಯೂರಪ್ಪಗೆ ಜುಲೈನಲ್ಲಿ ಅಂತಿಮ ವಿಚಾರಣೆ
ಮಾಜಿ ಮುಖ್ಯಮಂತ್ರಿ ಅವರು ಮುಖ್ಯ ಆರೋಪಿಯಾಗಿರುವ ಅಕ್ರಮ ಜಮೀನು ಡಿನೋಟಿಫಿಕೇಷನ್ ಪ್ರಕರಣದ ಅಂತಿಮ ವಿಚಾರಣೆ ಜುಲೈ 22ರಂದು ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳಲಿದೆ.
ನವದೆಹಲಿ/ಬೆಂಗಳೂರು, ಫೆಬ್ರವರಿ 21: ಮಾಜಿ ಮುಖ್ಯಮಂತ್ರಿ ಅವರು ಮುಖ್ಯ ಆರೋಪಿಯಾಗಿರುವ ಅಕ್ರಮ ಜಮೀನು ಡಿನೋಟಿಫಿಕೇಷನ್ ಪ್ರಕರಣದ ಅಂತಿಮ ವಿಚಾರಣೆ ಜುಲೈ 22ರಂದು ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳಲಿದೆ.
ಅಂತಿಮ ವಿಚಾರಣೆಗೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಹಾಜರಾಗಬೇಕಾಗುತ್ತದೆ. ಯಡಿಯೂರಪ್ಪ ವಿರುದ್ಧ ತನಿಖೆಗೆ ಅನುಮತಿ ನೀಡುವ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.

ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ಜೆ. ಚೆಲಮೇಶ್ವರ್ ಹಾಗೂ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರನ್ನು ಒಳಗೊಂಡ ಪೀಠ ಈ ಅರ್ಜಿ ವಿಚಾರಣೆಯನ್ನು ಜುಲೈ 22ರಂದು ವಿಚಾರಣೆಗೆ ಒಳಪಡಿಸಲು ನಿರ್ಧರಿಸಿದೆ. ಹೈಕೋರ್ಟ್ ಆದೇಶವನ್ನು ಸಿರಾಜಿನ್ ಬಾಷಾ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿದ್ದರು.












Click it and Unblock the Notifications