'ಲಿಂಗಾಯತ ವಿರೋಧಿ' ಎಂಬ ಬ್ರಾಂಡ್ ಸೃಷ್ಟಿ: ಕಾಂಗ್ರೆಸ್‌ಗೆ ತಿರುಗೇಟು ನೀಡಲು ಬಿಜೆಪಿ ಪ್ಲ್ಯಾನ್

ಬೆಂಗಳೂರು ಏಪ್ರಿಲ್ 21: 'ಲಿಂಗಾಯತ ವಿರೋಧಿ' ಎಂಬ ಬ್ರಾಂಡ್ ಸೃಷ್ಟಿಸುತ್ತಿರುವ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ಬಿಜೆಪಿ ದೊಡ್ಡ ಪ್ಲಾನ್ ಮಾಡಿದೆ.

ರಾಜಕೀಯವಾಗಿ ಪ್ರಭಾವಿ ಲಿಂಗಾಯತ ಸಮುದಾಯವು ರಾಜ್ಯದ ಜನಸಂಖ್ಯೆಯ ಸುಮಾರು 17 ಪ್ರತಿಶತವನ್ನು ಹೊಂದಿದೆ. ಬಹುತೇಕ ರಾಜ್ಯದ ಉತ್ತರ ಭಾಗಗಳಲ್ಲಿ ಬಿಜೆಪಿ ತನ್ನ ಬಲವಾದ ಮತಬ್ಯಾಂಕ್‌ ಅನ್ನು ಹೊಂದಿದೆ. ಹೀಗಿರುವಾಗ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಲಿಂಗಾಯತ ಹಿರಿಯ ಮುಖಂಡರಾದ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು. ಇದು ಬಿಜೆಪಿಗೆ ಬಹುದೊಡ್ಡ ಹೊಡೆತ ನೀಡಿದೆ. ಮಾತ್ರವಲ್ಲದೆ 'ಬಿಜೆಪಿ ಲಿಂಗಾಯತ ವಿರೋಧಿ' ಎಂಬ ಹಣೆಪಟ್ಟಿಯನ್ನೂ ನೀಡಿದೆ.

Brand anti-Lingayat created: BJP plan to hit back at Congress

ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿರುವುದು ಕಾಂಗ್ರೆಸ್‌ಗೆ ಬಿಜೆಪಿ ವಿರುದ್ಧ ಆರೋಪಗಳನ್ನು ಮಾಡಲು ದೊಡ್ಡ ಅಸ್ತ್ರವೇ ಸಿಕ್ಕಂತಾಗಿದೆ. ಆಡಳಿತ ಪಕ್ಷ ಬಿಜೆಪಿ ಲಿಂಗಾಯತರಿಗೆ ಅನ್ಯಾಯ ಮಾಡುತ್ತಿದೆ. ಬಿಜೆಪಿ ಲಿಂಗಾಯತ ವಿರೋಧಿ ಎಂದು ಕಾಂಗ್ರೆಸ್ ಆರೋಪಿಸುವುದರೊಂದಿಗೆ ತನ್ನ ಬೇಳೆಯನ್ನು ಬೇಯಿಸಿಕೊಳ್ಳುತ್ತಿದೆ. ಹೀಗಾಗಿ ಲಿಂಗಾಯತ ಸಮುದಾಯದ ಮತಬ್ಯಾಂಕ್ ಕೈತಪ್ಪದಂತೆ ನೋಡಿಕೊಳ್ಳುವುದು ಬಿಜೆಪಿಗೆ ಸದ್ಯದ ಬಹು ದೊಡ್ಡ ಸವಾಲಾಗಿದೆ.

ಕರ್ನಾಟಕ ಬಿಜೆಪಿಯ ಪ್ರಬಲ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ನಿವಾಸದಲ್ಲಿ ಬುಧವಾರ ಸಂಜೆ ಬಿಜೆಪಿಯ ಲಿಂಗಾಯತ ಮುಖಂಡರನ್ನು ಭೇಟಿಯಾದರು. ಈ ಸಭೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಮುಂದಿನ ಸಿಎಂ ಲಿಂಗಾಯತ ಸಮುದಾಯದವರೇ ಎಂದು ಬಿಂಬಿಸುವ ಮೂಲಕ ಕಾಂಗ್ರೆಸ್ ಹೇಳಿಕೆಯನ್ನು ಎದುರಿಸಲು ಸಲಹೆಗಳು ಹೆಚ್ಚಿದೆ ಎಂದು ತಿಳಿದುಬಂದಿದೆ.

ಸಭೆ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೆಲವು ವಿಷಯಗಳ ಕುರಿತು ಕಾಂಗ್ರೆಸ್ ಹರಡುತ್ತಿರುವ ತಪ್ಪು ಮಾಹಿತಿಯನ್ನು ಬಲವಾಗಿ ಎದುರಿಸಲು ಸಭೆ ನಿರ್ಧರಿಸಿದೆ ಎಂದು ಹೇಳಿದ್ದಾರೆ.

Brand anti-Lingayat created: BJP plan to hit back at Congress

ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿರುವ ಸಿಎಂ ಬಸವರಾಜ ಬೊಮ್ಮಾಯಿ, ಲಿಂಗಾಯತರಿಗೆ ಬಿಜೆಪಿ ಯಾವುದೇ ತಾರತಮ್ಯ ಮಾಡಿಲ್ಲ, ಸಿಎಂ ಆಗಿದ್ದ ವೀರೇಂದ್ರ ಪಾಟೀಲ್‌ಗೆ ನೀವು ಮಾಡಿದ ಅನ್ಯಾಯ ಎಲ್ಲರಿಗೂ ಗೊತ್ತಿದೆ, ಧೈರ್ಯವಿದ್ದರೆ ನೀವು ಸಿಎಂ ಅಭ್ಯರ್ಥಿಯನ್ನ ಘೋಷಿಸಿ ಅಂತ ಸವಾಲು ಹಾಕಿದ್ದಾರೆ.

ಈ ಪ್ರಶ್ನೆಯನ್ನು ಮತ್ತೆ ಕೇಳಬೇಡಿ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಕಾಂಗ್ರೆಸ್ ಹಿರಿಯ ಲಿಂಗಾಯತ ನಾಯಕರನ್ನು ಹೇಗೆ ನಡೆಸಿಕೊಂಡಿದೆ ಎಂಬುದಕ್ಕೆ ಹಲವಾರು ನಿದರ್ಶನಗಳಿವೆ, "ಮತ ಬ್ಯಾಂಕ್" ರಚಿಸಲು ಕಾಂಗ್ರೆಸ್ ಸಮುದಾಯವನ್ನು ಒಡೆಯಲು ಹೇಗೆ ಪ್ರಯತ್ನಿಸಿತು ಎಂಬುದನ್ನು ಜನರು ಮರೆಯುವುದಿಲ್ಲ ಎಂದು ಹೇಳಿದರು. ಬಿಜೆಪಿಯಲ್ಲಿ ಎಲ್ಲರಿಗೂ ಅವಕಾಶವಿದೆ ಎಂದ ಬೊಮ್ಮಾಯಿ, ದಲಿತರು, ಲಿಂಗಾಯತರು ಮತ್ತು ಹಿಂದುಳಿದ ವರ್ಗದವರಿಗೆ ಕಾಂಗ್ರೆಸ್ ಮೋಸ ಮಾಡಿದೆ ಎಂದು ಆರೋಪಿಸಿದರು.

Brand anti-Lingayat created: BJP plan to hit back at Congress

ಜೊತೆಗೆ ಪ್ರಣಾಳಿಕೆಯಲ್ಲಿ ಸಿಎಂ ಅಭ್ಯರ್ಥಿ ಘೋಷಣೆಗೆ ಪ್ಲಾನ್ ಮಾಡಿಕೊಂಡಿದ್ದು, ಬಿಜೆಪಿ ಲಿಂಗಾಯತ ನಾಯಕನನ್ನೇ ಸಿಎಂ ಅಭ್ಯರ್ಥಿ ಘೋಷಣೆಗೆ ಚಿಂತನೆ ನಡೆಸಿದ್ದಾರೆ. ಪಕ್ಷ ಬಹುಮತ ಪಡೆದರೆ ಹಾಲಿ ಸಿಎಂ ಬೊಮ್ಮಾಯಿ ಅವ್ರನ್ನೇ ಸಿಎಂ ಆಗಿ ಮುಂದುವರಿಸು ಚಿಂತನೆ ನಡೆಸಿದ್ದಾರೆ. ಅಲ್ಲದೆ ಹೆಸರು ಘೋಷಣೆಗೂ ಮುನ್ನ ಯಡಿಯೂರಪ್ಪ ಜೊತೆ ಮತ್ತೊಮ್ಮೆ ಚರ್ಚೆ ನಡೆಸುವುದರ ಜೊತೆಗೆ ಕೇಂದ್ರದ ಪ್ರಮುಖ ನಾಯಕರಿಂದ ಬಹಿರಂಗ ಘೋಷಣೆ ಮಾಡಿಸೋದಾಗಿದೆ.

ಈ ಮೂಲಕ ಕಾಂಗ್ರೆಸ್​​ಗೆ ಠಕ್ಕರ್ ಕೊಡೋದಲ್ಲದೆ, ನೀವೂ ಕೂಡ ಲಿಂಗಾಯತ ಸಿಎಂ ಘೋಷಿಸಿ ಅಂತ ಸವಾಲು ಹಾಕೋದಾಗಿದೆ. ಜೊತೆಗೆ ಮತದಾರರ ಮುಂದೆಯೂ ಲಿಂಗಾಯತ ಸಿಎಂ ಅಸ್ತ್ರ ಬಳಕೆ ಮಾಡಿ ಲಿಂಗಾಯತ ಮತಗಳು ಚದುರದಂತೆ ಮುಂಜಾಗ್ರತೆ ವಹಿಸೋದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+