ಬಿಪಿಎಲ್ ಕಾರ್ಡ್ ವಿತರಣೆ ತಾತ್ಕಾಲಿಕ ಸ್ಥಗಿತ!
ಬೆಂಗಳೂರು, ಜೂನ್ 21: ಈಗಾಗಲೇ ತನ್ನ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲು ಆದಾಯಕ್ಕಾಗಿ ಪರದಾಡುತ್ತಿರುವ ಈ ಸಮಯದಲ್ಲಿ ರಾಜ್ಯದ ಬೊಕ್ಕಸಕ್ಕೆ ಆಗುವ ಹೆಚ್ಚುವರಿ ಹೊರೆಯನ್ನು ಸರಿದೂಗಿಸುವ ಬಗ್ಗೆ ಎಚ್ಚರದಿಂದಿರುವ ಕಾಂಗ್ರೆಸ್ ಸರ್ಕಾರವು ಹೊಸ ಬಿಪಿಎಲ್ ಕಾರ್ಡ್‌ಗಳ ಸೇರ್ಪಡೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಬಿಪಿಎಲ್ ಕಾರ್ಡ್ ಅದರ ಸರ್ಕಾರದ ಎರಡು ಪ್ರಮುಖ ಗ್ಯಾರಂಟಿಗಳಿಗೆ ಕಡ್ಡಾಯವಾಗಿ ಬೇಕಾಗಿದೆ. ಅದೆಂದರೆ ಅನ್ನ ಭಾಗ್ಯ (ಪ್ರತಿ BPL ಸದಸ್ಯರಿಗೆ ಹೆಚ್ಚುವರಿ 5 ಕೆಜಿ ಅಕ್ಕಿ ಉಚಿತ) ಮತ್ತು ಗೃಹ ಲಕ್ಷ್ಮಿ (ಪ್ರತಿ ಮನೆಯ ಮಹಿಳೆಗೆ ಪ್ರತಿ ತಿಂಗಳು 2,000 ರೂ.). ಇದರಲ್ಲಿ ಅನ್ನ ಭಾಗ್ಯಕ್ಕೆ 10,092 ಕೋಟಿ ರೂ. ವೆಚ್ಚವಾಗಲಿದ್ದು, ಗೃಹ ಲಕ್ಷ್ಮಿಗೆ ವಾರ್ಷಿಕ 25,000-30,000 ಕೋಟಿ ರೂ. ವೆಚ್ಚವಾಗಿಲಿದೆ ಎಂದು ಅಂದಾಜಿಸಲಾಗಿದೆ.

ಕರ್ನಾಟಕದಲ್ಲಿ 1.2 ಕೋಟಿ ಬಿಪಿಎಲ್ ಕಾರ್ಡ್‌ಗಳು ಇದ್ದು, 4.42 ಕೋಟಿ ಜನರನ್ನು ಒಳಗೊಂಡಿದೆ. ಬಿಪಿಎಲ್ ಕಾರ್ಡ್ ಕೋರಿ 2.95 ಲಕ್ಷ ಅರ್ಜಿಗಳು ಸರ್ಕಾರದ ಮುಂದೆ ಬಾಕಿ ಇವೆ. ವಿಧಾನಸಭೆ ಚುನಾವಣೆಗೆ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗುವವರೆಗೂ ಸರ್ಕಾರ ಕಾರ್ಡ್‌ಗಳನ್ನು ನೀಡುತ್ತಿತ್ತು. ಸದ್ಯಕ್ಕೆ ಕಾರ್ಡು ವಿತರಣೆಯನ್ನು ನಿಲ್ಲಿಸುವಂತೆ ತಿಳಿಸಿರುವುದರಿಂದ ನಾವು ಅದನ್ನು ಪುನರಾರಂಭಿಸಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸದ್ಯಕ್ಕೆ ಸರ್ಕಾರವು ಆಹಾರ ಪೋರ್ಟಲ್‌ನಲ್ಲಿ ಹೊಸ ಅಪ್ಲಿಕೇಶನ್‌ಗಳ ವಿಂಡೋವನ್ನು ಮುಚ್ಚಿದ್ದು, ಇದು ನಾಗರಿಕರು ಹೊಸ ಕಾರ್ಡ್‌ಗಳಿಗಾಗಿ ಅರ್ಜಿ ಸಲ್ಲಿಸಬಹುದಾದ ಆನ್‌ಲೈನ್ ಇಂಟರ್ಫೇಸ್ ಆಗಿದೆ. ಇದಲ್ಲದೆ ಕಾರ್ಡ್‌ಗಳ ವಿಭಜನೆಗೆ ಇತ್ತೀಚೆಗೆ ವಿನಂತಿಗಳು ಹೆಚ್ಚಾಗಿ ಬಂದಿವೆ ಎನ್ನಲಾಗಿದೆ.
ವಿಭಜನೆ ಎಂದರೆ ಹಿಂದಿನ ಅವಿಭಕ್ತ ಕುಟುಂಬವು ಎರಡು ಕಾರ್ಡ್‌ಗಳನ್ನು ಎರಡು ಪ್ರತ್ಯೇಕ ಘಟಕಗಳಾಗಿ ಪರಿಗಣಿಸಲು ಸರ್ಕಾರವನ್ನು ಕೋರುವ ಮೂಲಕ ಹಕ್ಕು ಪಡೆಯುವುದು. ಇದು ಅನ್ನ ಭಾಗ್ಯಕ್ಕೆ ಸಮಸ್ಯೆಯಾಗದಿದ್ದರೂ ಜನರ ಸಂಖ್ಯೆ ಹಾಗೆಯೇ ಉಳಿಯುತ್ತದೆ. ಇದು ಗೃಹ ಲಕ್ಷ್ಮಿ ಯೋಜನೆಯ ಮೇಲೆ ಪರಿಣಾಮ ಬೀರುತ್ತದೆ.
ಇದಲ್ಲದೆ, ಕೇಂದ್ರ ಸರ್ಕಾರವು ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಲು ನಗರ ಜನಸಂಖ್ಯೆಯ 45% ಮತ್ತು ಗ್ರಾಮೀಣ ಜನಸಂಖ್ಯೆಯ 70% ಗುರಿಯನ್ನು ನಿಗದಿಪಡಿಸಿದರೆ, ಕರ್ನಾಟಕವು ಈಗಾಗಲೇ ಈ ಗುರಿಯನ್ನು ಮೀರಿದೆ. ರಾಜ್ಯದಲ್ಲಿ ಅಗತ್ಯಕ್ಕಿಂತ 14 ಲಕ್ಷ ಹೆಚ್ಚುವರಿ ಕಾರ್ಡ್‌ಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಿತಿಯನ್ನು ಪಾಲಿಸುವುದು ಕಡ್ಡಾಯವಲ್ಲವಾದರೂ, ಅಂತಹ ಕಾರ್ಡ್‌ಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ವಿತರಿಸಲಾದ ಧಾನ್ಯಗಳ ವೆಚ್ಚವನ್ನು ಭರಿಸುವವರೆಗೆ ರಾಜ್ಯವು ಹೆಚ್ಚುವರಿ ಕಾರ್ಡ್‌ಗಳನ್ನು ನೀಡಬಹುದು. ಸರ್ಕಾರವು 3.2 ಲಕ್ಷ ನಕಲಿ ಕಾರ್ಡ್‌ಗಳನ್ನು ತೆಗೆದುಹಾಕಿದ್ದು, ಅದರ ಬದಲು ಹೊಸ ಕಾರ್ಡ್‌ಗಳನ್ನು ನೀಡುತ್ತಿದೆ. ಯಾವುದೇ ಹೊಸ ಕಾರ್ಡ್‌ಗಳ ವಿತರಣೆಗೆ ಮುಖ್ಯಮಂತ್ರಿಗಳು ಈಗಲೇ ಅನುಮೋದನೆ ನೀಡಬೇಕಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications