ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ರಣಕಣದಿಂದ 20,000 ವಾಟ್ಸಪ್ ಗ್ರೂಪ್

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 27: ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಕಿತ್ತಾಟ ತಾರಕಕ್ಕೇರುತ್ತಿದೆ. ಕರ್ನಾಟಕ ಬಿಜೆಪಿ ಕೇಂದ್ರ ಕಚೇರಿಯಲ್ಲಿ ವಾಟ್ಸಾಪ್ ಗುಂಪುಗಳಲ್ಲಿ ಪಕ್ಷದ ಬಗ್ಗೆ ಪ್ರಚಾರಕ್ಕಾಗಿ ಪ್ರತ್ಯೇಕ ತಂಡವೆ ರಚನೆಯಾಗಿದೆ.

ಬಿಜೆಪಿ ಪರ ಕಾರ್ಯ ನಿರ್ವಹಿಸಲು ಟೆಕ್ಕಿಗಳು, ಸ್ವಯಂಸೇವಕರು, ವೃತ್ತಿಪರರು ಮುಂದೆ ಬಂದಿದ್ದಾರೆ. ಕಾಲಕಾಲಕ್ಕೆ ಟ್ವೀಟ್ ಮಾಡುತ್ತಾ, ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡುತ್ತಾ, ವಾಟ್ಸಾಪ್ ಚಾಟ್ ಮಾಡುತ್ತಾ ಇದ್ದಾರೆ.

ಬೆಳಗ್ಗೆ 8.30ಕ್ಕೆ ಶುರುವಾಗುವ ಕೆಲಸ ಮಧ್ಯರಾತ್ರಿ 2 ಗಂಟೆ ತನಕ ನಡೆಯುತ್ತದೆ. ಕಳೆದ ಆರು ತಿಂಗಳಿನಿಂದ ಹಗಲು ರಾತ್ರಿ ದುಡಿಯುತ್ತಿರುವ ಈ ಉತ್ಸಾಹಿಗಳು ಸರಿ ಸುಮಾರು 20 ಸಾವಿರ ವಾಟ್ಸಾಪ್ ಗ್ರೂಪ್ ಗಳನ್ನು ಸೃಷ್ಟಿಸಿದ್ದಾರೆ. ಇಲ್ಲಿ ನಿರಂತರವಾಗಿ ಚರ್ಚೆ ನಡೆಯುತ್ತಿದೆ.

BJPs Election battle room equipped with 20,000 WhatsApp groups

ಈ ಬಾರಿ ಇಂಟರ್ನೆಟ್ ಎಲ್ಲೆಡೆ ಲಭ್ಯವಿರುವುದಕ್ಕೋ, ಜಿಯೋ ಕೃಪೆಯಿಂದಲೋ ಯುವ ಜನಾಂಗಕ್ಕೆ ರಾಜಕೀಯ ಆಗು ಹೋಗುಗಳ ಮೇಲೆ ಆಸಕ್ತಿ ಹೆಚ್ಚಾಗಿದೆ. ಬಿಜೆಪಿ ಸೃಷ್ಟಿಸಿರುವ 20 ಸಾವಿರ ವಾಟ್ಸಪ್ ಗುಂಪನ್ನು ನೋಡಿಕೊಳ್ಳಲು ಸದ್ಯ 40 ಮಂದಿಯ ತಂಡವಿದೆ ಎಂದು ರಾಜ್ಯ ಬಿಜೆಪಿ ಸಾಮಾಜಿಕ ಜಾಲ ತಾಣ ನಿರ್ವಹಣಾ ಕೇಂದ್ರದ ಸಂಚಾಲಕ ಬಾಲಾಜಿ ಶ್ರೀನಿವಾಸ್ ಹೇಳಿದ್ದಾರೆ.

ಒಂದು ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ 2.5 ಕೋಟಿ ಮಂದಿ ಮೊಬೈಲ್ ಫೋನ್ ಬಳಸುತ್ತಿದ್ದಾರೆ. ನಗರ ಪ್ರದೇಶವಲ್ಲದೆ, ಗ್ರಾಮೀಣ ಭಾಗದ ಜನರನ್ನು ತಲುಪುವುದು ನಮ್ಮ ಉದ್ದೇಶ ಎಂದು ಶ್ರೀನಿವಾಸ್ ಹೇಳಿದರು.

English summary
BJP’s war room in Malleswaram, abuzz with activity blend of people , from professionals to volunteers to techies, posting, tweeting and WhatsApping maintaining 20,000 WhatsApp groups
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X