ಬಿಜೆಪಿ ಕಾರ್ಯಕರ್ತರು ಯಾರನ್ನ ಬೇಕಾದರೂ ಸೋಲಿಸುತ್ತಾರೆ, ಅದಕ್ಕೆ ನಾನೇ ಸಾಕ್ಷಿ: ಪ್ರಮೋದ್ ಮಧ್ವರಾಜ್

ಶಿವಮೊಗ್ಗ, ಜೂನ್‌ 19: ಬಿಜೆಪಿ ಕಾರ್ಯಕರ್ತರು ಯಾವತ್ತೂ ಕೂಡ ನಮ್ಮ ಆಸ್ತಿ. ಬಿಜೆಪಿ ಕಾರ್ಯಕರ್ತರು ಯಾರನ್ನ ಬೇಕಾದರೂ ಸೋಲಿಸಬಲ್ಲರ. ಅದಕ್ಕೆ ನಾನೇ ಸಾಕ್ಷಿ ಎಂದು ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಜನಸಭಾ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಯಾವತ್ತೂ ಕೂಡ ನಮ್ಮ ಆಸ್ತಿ. ಉದಾಹರಣೆಗೆ ಮಾವಿನ ಮರದಿಂದ ಬಿದ್ದ ಹಣ್ಣು ಯಾರು ತಿನ್ನದಿದ್ದರೆ ಅದು ಕೊಳೆತು ಮೊಳೆತು ಸಸಿಯಾಗಿ ಹೆಮ್ಮರವಾಗಿ ಸಾವಿರಾರು ಹಣ್ಣುಗಳನ್ನ ನೀಡುತ್ತದೆ. ಈಗ ನಾವು ಸೋತಿದ್ದೇವೆ ಎಂದು ಯಾರೂ ಬೇಸರಗೊಳ್ಳುವುದು ಬೇಡ ಇದೇ ಕೊಳೆತ ಮಾವಿನ ಹಣ್ಣಿನಿಂದ ಸಾವಿರಾರು ಮಾವಿನ ಹಣ್ಣುಗಳು ಉತ್ಪತ್ತಿ ಆಗುತ್ತೆ. ಯಾರಿಗೂ ಅನುಮಾನ ಬೇಡ. ಬಿಜೆಪಿ ಕಾರ್ಯಕರ್ತರು ಮನಸ್ಸು ಮಾಡಿದರೆ ಪುನಃ ನಮ್ಮನ್ನ ಮೇಲೆ ಎತ್ತುವ ಕೆಲಸವನ್ನು ಮಾಡುತ್ತಾರೆ ಎಂದರು.

BJP Leader Pramod Madhwaraj

ಬಿಜೆಪಿ ಕಾರ್ಯಕರ್ತರು ಮನಸ್ಸು ಮಾಡಿದರೆ ಮತ್ತೆ ಮೇಲೆ ಎತ್ತುತ್ತಾರೆ, ಆ ಸಾಮರ್ಥ್ಯ ಅವರಿಗಿದೆ. ನಾನು ಕಾಂಗ್ರೆಸ್ ಪಕ್ಷದಿಂದ ಬಂದವನು. 2018 ರಲ್ಲಿ ನಾನು ಉಡುಪಿ ಕ್ಷೇತ್ರದ ಅಭ್ಯರ್ಥಿಯಾಗಿದೆ. ಆ ಸಮಯದಲ್ಲಿ ಪತ್ರಿಕೆಗಳು ಸರ್ವೇ ಮಾಡಿದರು. ಆಗ ನನ್ನ ಹೆಸರು ಮೊದಲಿತ್ತು. ನಾನು ಗೆಲ್ಲುತ್ತೇನೆ ಎಂಬುವ ಎಲ್ಲಾ ಲಕ್ಷಣಗಳು ಇದ್ದವು. ಆದರೆ ನನಗೆ ಅಂದು ಸೋಲಾಗಿತ್ತು. ಯಾಕಂದರೆ ನಿಮ್ಮಂತ ಬಿಜೆಪಿ ಕಾರ್ಯಕರ್ತರಿಂದ. ಆದರೆ ನನ್ನ ಸೋಲಿಗೆ ಬೇಸರ ಇರಲಿಲ್ಲ. ನನಗೆ ಅಭಿಮಾನ ಇದೆ. ಯಾಕಂದ್ರೆ ಬಿಜೆಪಿ ಕಾರ್ಯಕರ್ತರು ಮನಸ್ಸು ಮಾಡಿದರೆ ಯಾರನ್ನು ಬೇಕಾದರೂ ಸೋಲಿಸಬಲ್ಲರು ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅತೀ ಜನಪ್ರಿಯ ನಾಯಕ‌. ಇವತ್ತು ಕೂಡ ಯಾರಾದರೂ ಅಷ್ಟೊಂದು ಜನಪ್ರಿಯ ವ್ಯಕ್ತಿ ರಾಜ್ಯದಲ್ಲಿ ಇದ್ದರೆ ಅದು ಬಿಎಸ್ ಯಡಿಯೂರಪ್ಪ ಮಾತ್ರ. ನರೇಂದ್ರ ಮೋದಿ ಅವರ ರಾಜಕೀಯ ಜೀವನದಲ್ಲಿ ಎಲ್ಲಾ ಜನಾಂಗದ ಜೊತೆಗೆ ಬಾಂಧವ್ಯ ಇಟ್ಟುಕೊಂಡಿದ್ದರು. 20ವರ್ಷ ಬಾಲ್ಯಾವಸ್ಥೆ, 20 ವರ್ಷ ಆರ್ ಎಸ್ ಎಸ್, 20 ವರ್ಷ ಸಂಘಟನೆ, 20 ವರ್ಷ ಅಧಿಕಾರದಲ್ಲಿ ಹೀಗೆ ಅರವತ್ತು ವರ್ಷಗಳನ್ನು ಪ್ರಧಾನಿ ಸಾರ್ವಜನಿಕ ಜೀವನದಲ್ಲಿ ಕಳೆದಿದ್ದಾರೆ.

BJP Leader Pramod Madhwaraj

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರುವ ಅನುಭವ ಅಗಾಧ. ಅಂತಹ ನೈಪುಣ್ಯತೆ ಇರುವಂತಹ ನಾಯಕ ನಮ್ಮ ನರೇಂದ್ರ ಮೋದಿ. ಇದು ನಮ್ಮ ಹೆಮ್ಮೆ ನಾವೆಲ್ಲ ಇದನ್ನ ಸ್ಮರಿಸಿಕೊಳ್ಳಬೇಕು. ನರೇಂದ್ರ ಮೋದಿ ಅವಶ್ಯಕತೆ ನಮಗೆ ಸಾಕಷ್ಟು ಇದೆ. ಪಾಕಿಸ್ತಾನದಲ್ಲಿ ಯಾವ ತರಹ ಪರಿಸ್ಥಿತಿ ಇದೆ ಎಂಬುದು ನಮಗೆಲ್ಲ ಗೊತ್ತಿದೆ. ಅಲ್ಲಿ ತಿನ್ನುವುದಕ್ಕೆ ಅನ್ನ ಇಲ್ಲ ಎಲ್ಲಾದರೂ ಆಹಾರ ಕಂಡ್ರೆ ಕಿತ್ತು ತಿನ್ನುತ್ತಾರೆ.

ಶ್ರೀಲಂಕಾದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ರಾಷ್ಟ್ರಪತಿ ಹಿಂದಿನ ಭಾಗಿಲಲ್ಲಿ ಓಡಿ ಹೋಗುವ ಪರಿಸ್ಥಿತಿ ಇದೆ. ಈ ದೇಶ ಸಮರ್ಥವಾಗಿ ನಿಲ್ಲುವುದಾದರೆ ಅದು ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ಪರಿಸ್ಥಿತಿ ಹೇಗಿದೆ ಎಂದರೆ 20000 ಆದಾಯವಿರುವ ಮನೆ ಈ ಸರ್ಕಾರದಲ್ಲಿ ಉದ್ದಾರ ಆಗೋದಿಲ್ಲ ಎಂಬಂತಿದೆ. ಕಾಂಗ್ರೆಸ್ ಸರ್ಕಾರ ಬಂದಿದೆ. ಕಾಂಗ್ರೆಸ್ ಪಕ್ಷಕ್ಕೇ ಗ್ಯಾರಂಟಿ ಇಲ್ಲ ಎಂಬ ಸ್ಥಿತಿ ಬರುತ್ತೆ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+