ಬೀದರಿನಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಬಲಿ

Posted By:
Subscribe to Oneindia Kannada

ಬೀದರ್, ನವೆಂಬರ್ 8 : ಆರ್ ಎಸ್ ಎಸ್‌ ಕಾರ್ಯಕರ್ತ ರುದ್ರೇಶ್ ಹತ್ಯೆ, ಮೈಸೂರಿನ ರವಿ ನಿಗೂಢ ಸಾವಿನ ಬೆನ್ನಲ್ಲೆ ಮತ್ತೊಬ್ಬ ಬೀದರ್ ನ ಬಿಜೆಪಿ ಕಾರ್ಯಕರ್ತ ಸುನಿಲ್ ಡೋಂಗ್ರೆಯವರ ಹತ್ಯೆಯಾಗಿದೆ.

ಭಾನುವಾರ ರಾತ್ರಿ ಔರಾದ್ ತಾಲೂಕಿನ ಸೋನಲ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಒಂದು ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ ಅವರ ಮೃತದೇಹ ಸಿಕ್ಕಿದೆ. ಮುಖ ಮತ್ತು ದೇಹದ ಭಾಗಗಳಲ್ಲಿ ಇರಿತದ ಗಾಯಗಳಾಗಿವೆ.

ತಾಯಿ ಹೆಂಡತಿ ಮತ್ತು ಮೂರು ಮಕ್ಕಳು ಮನೆಯ ವಾರಸುದಾರನನ್ನು ಕಳೆದುಕೊಂಡಿದ್ದಾರೆ.[ರುದ್ರೇಶ್ ಕೊಲೆ ಪ್ರಕರಣ: ಭುಗಿಲೆದ್ದ ಬಿಜೆಪಿ ಆಕ್ರೋಶ]

BJP worker brutally murdered in Aurad taluk

ಡೊಂಗ್ರೆ 35, ಅವರು ನಾನು ಶಾಸಕ ಪ್ರಭು ಚೌಹಾಣ್ ರ ಕಟ್ಟಾ ಅನುಯಾಯಿ ಎಂದು ಹೇಳಿಕೊಂಡಿದ್ದು, ತಮ್ಮ ಹಳ್ಳಿಯ ಸುತ್ತ ಮುತ್ತ ಪ್ರಭಾವಿ ವ್ಯಕ್ತಿಯಾಗಿದ್ದರು. ಅವರಿಗೆ 50 ಎಕರೆಗೂ ಮೀರಿದ ಕೃಷಿ ಭೂಮಿ ಸೊನಲ್ ನಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕೊಲೆ ಹಿಂದೆ ರಾಜಕೀಯ ಪ್ರೇರಣೆಯೇನಾದರೂ ಇದೇಯೇ ? ಎಂಬ ಶಂಕೆ ವ್ಯಕ್ತವಾಗಿದ್ದು, ತನಿಖೆಗೆ ಮುಂದಾಗಿದ್ದೇವೆ. ಅವರ ಫೋನಿಗೆ ಭಾನುವಾರ ರಾತ್ರಿ 10 ಗಂಟೆಗೆ ಕರೆ ಬಂದಿತ್ತು ಮೃತ ದೇಹಕ್ಕೆ ಆಗಿರುವ ಇರಿತದ ಗಾಯಗಳು ಪ್ರಾಥಮಿಕ ತನಿಖೆಗೆ ಸಹಾಯವಾಗಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.[ರುದ್ರೇಶ್ ಹತ್ಯೆ : ಶೋಭಾ ವಿರುದ್ಧ ಮಾನನಷ್ಟ ಮೊಕದ್ದಮೆ]

ಇನ್ನು ಶಾಸಕ ಚೌಹಾಣ್, ಮೃತ ಡೋಂಗ್ರೆ ಮನೆಗೆ ಭೇಟಿ ನೀಡಿದ್ದು, ಪರಿವಾರದವರನ್ನು ಸಮಾಧಾನ ಪಡಿಸಿದ್ದಾರೆ. ರಾಜ್ಯ ಸರ್ಕಾರ ಬಿಜೆಪಿ ಮತ್ತು ಆರ್ ಎಸ್ ಎಸ್ ನ ಕಾರ್ಯಕರ್ತರನ್ನು ಗುರಿಯಾಗಿಟ್ಟುಕೊಂಡು ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಇಂತಹ ರಾಜಕೀಯದಲ್ಲಿ ಡೋಂಗ್ರೆ ಟಾರ್ಗೆಟ್ ಆಗಿದ್ದಾನೆ. ಗೃಹ ಸಚಿವ ಜಿ. ಪರಮೇಶ್ವರ ಅವರ ಆಡಳಿತ, ಕರ್ತವ್ಯ ಸಂಪೂರ್ಣವಾಗಿ ವಿಫಲವಾಗಿದೆ. ಅವರು ಡೊಂಗ್ರೆ ಅವರ ಕೊಲೆಯನ್ನು ಉನ್ನತ ಮಟ್ಟದ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಭಾಲ್ಕಿ ವ್ಯಾಪ್ತಿಯ ಡಿವೈಎಸ್ಪಿ ಅಶೋಕ್ ಕುಮಾರ್, ಎಸ್ಪಿ ಪ್ರಕಾಶ್ ಇತರ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳದಲ್ಲಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Another BJP activist, Sunil Dongre, was murdered at Sonal village of Aurad taluk on Sunday night. Dongre’s body, which was found near the Government Primary School in the early hours of Monday, bore multiple stab injuries in the intestine, face and other parts.
Please Wait while comments are loading...