ಸಿದ್ದರಾಮಯ್ಯ, ಡಿಕೆಶಿ ಅವರೇ ನಿಮ್ಮ ನಾಯಕರು ಯಾರಿದ್ದಾರೆ.? ನೀವು ತಬ್ಬಲಿ ಆಗಿದ್ದೀರಿ: ಬಿ.ಎಸ್‌ ಯಡಿಯೂರಪ್ಪ

ಪಕ್ಷವನ್ನ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜ್ಯದ ಉದ್ದಗಲಕ್ಕೂ ‌ಪ್ರವಾಸ ಮಾಡುತ್ತೇನೆ ಎಂದು ಬಿ ಎಸ್ ಯಡಿಯೂರಪ್ಪ ಹೇಳಿದರು.

ಬಾಗಲಕೋಟೆ,ಮಾರ್ಚ್15:‌ ನರೇಂದ್ರ ಮೋದಿಜಿ ಮುಂದೆ ರಾಹುಲ್ ಗಾಂಧಿ ಸಮಾ ಆಗಲು ಸಾಧ್ಯನಾ? ಎಲ್ಲಿಯಾ ನರೇಂದ್ರ ಮೋದಿ, ಎಲ್ಲಿಯ ರಾಹುಲ್ ಗಾಂಧಿ. ? ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶಿಸಿದ್ದಾರೆ.

ಈ ಕುರಿತು ಬಾಗಲಕೋಟೆಯಲ್ಲಿ ಮಂಗಳವಾರ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸೋತು ಸೋತು ವಿಸರ್ಜನೆ ಹಂತಕ್ಕೆ ಬಂದಿದೆ. ಭಾರತ ಭವಿಷ್ಯದಲ್ಲಿ ಕಾಂಗ್ರೆಸ್ ಮುಕ್ತವಾಗಲಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರೇ ನಿಮ್ಮ ನಾಯಕರು ಯಾರಿದ್ದಾರೆ.? ನೀವು ತಬ್ಬಲಿ ಆಗಿದ್ದೀರಿ ಎಂದು ವ್ಯಂಗ್ಯವಾಡಿದ್ದಾರೆ.

BJP Will Come Power Winning 140 Seats Says BS Yediyurappa

ತಬ್ಬಲಿಯಾಗಿರುವ ಕಾಂಗ್ರೆಸ್ ಪಕ್ಷದವರು ನರೇಂದ್ರ ಮೋದಿಯವರಿಗೆ ಹೇಗೆ ಸಮ ಎಂದರಲ್ಲದೆ, ಮೂರು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಕರ್ನಾಟಕದಲ್ಲಿ ಪಕ್ಷವನ್ನ ಸಂಘಟಿಸಿ ಅಧಿಕಾರಕ್ಕೆ ತರುವುದೇ ನನ್ನ ಗುರಿ. ಮೋದಿ ಅವರಿಗೆ ಸಾಟಿ ಆಗುತ್ತೀರೇನು.? ಮೂರು ರಾಜ್ಯಗಳಲ್ಲಿ ದೂಳಿಪಟ ಆದ್ರೂ ಬುದ್ದಿ ಕಲಿಯಲಿಲ್ಲ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದು ನಿಶ್ಚಿತ. ನನಗೆ 81 ವರ್ಷಕ್ಕೆ ಕಾಲಿಟ್ಟಿದ್ದೇನೆ, ದೇವರು ಆರೋಗ್ಯ ಕೊಟ್ಟರೆ ಈ ಸಲ ಮಾತ್ರವಲ್ಲ, ಮುಂದಿನ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ತರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಚುನಾವಣೆ ಸ್ವರ್ಧೆ ಮಾಡಲ್ಲ ಎಂದಿದ್ದ ನನ್ನ ನಿರ್ಧಾರ. ಆದರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವುದು ನೂರಕ್ಕೆ ನೂರು ಸತ್ಯ. ಕೇಂದ್ರದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕಿದೆ. ರಾಜ್ಯದಲ್ಲಿ ಮತ್ತೆ ಲೋಕಸಭೆಯಲ್ಲಿ 25 ಸ್ಥಾನ ಗೆಲ್ಲಬೇಕು, ಅದಕ್ಕಾಗಿ ನಾನು ಪ್ರಯತ್ನ ಮಾಡುತ್ತಿದ್ದೇನೆ. ಕಾಂಗ್ರೆಸ್ ಮಾಡಿದ ಸಾಧನೆ ಏನು.? ಎಂದು ಪ್ರಶ್ನಿಸಿದರು.

BJP Will Come Power Winning 140 Seats Says BS Yediyurappa

ಭಾಗ್ಯ ಲಕ್ಷ ಯೋಜನೆ ನಾನು ತಂದೆ. ಇದರಿಂದ 25 ಲಕ್ಷ ಹೆಣ್ಣು ಮಕ್ಕಳಿಗೆ ಲಾಭ ಆಗಿದೆ. ರೈತರ ಪಂಪಸೆಟ್ ಗೆ ಉಚಿತ ವಿದ್ಯುತ್‌ ಕೊಟ್ಟಿದ್ದು ಯಾರಾದ್ರೂ ಇದ್ರೆ, ಅದು ನಿಮ್ಮ ಯಡಿಯೂರಪ್ಪ.ರೈತರು ಸ್ವಾಭಿಮಾನ, ಗೌರವದಿಂದ ಬದುಕಬೇಕು ಎನ್ನುವುದು ನನ್ನ ಇಚ್ಛೆ. ರೈತರಿಗೆ ಹತ್ತು ಸಾವಿರ ಕೊಡುತ್ತಿದ್ದೇವೆ. ರಾಜ್ಯದಲ್ಲಿ 140 ಕ್ಕೂ ಅಧಿಕ ಸ್ಥಾನ ಗೆಲ್ಲಲು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುವೆ. ಅಧಿಕಾರದ ಕುರ್ಚಿಗಾಗಿ ಅಂಟಿಕೊಂಡ ವ್ಯಕ್ತಿಯಲ್ಲ. ಇನ್ನೊಬ್ಬರಿಗೆ ಅವಕಾಶ ನೀಡುವ ಉದ್ದೇಶದಿಂದ ನಾನು ಅಧಿಕಾರವನ್ನು ಸ್ವಯಂ ಸ್ಪೂರ್ತಿಯಿಂದ ಬಿಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಬೃಹತ್ ನೀರಾವರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನ ಮತದಾರರೆಲ್ಲರೂ ಸೇರಿ ಗುಜರಿಗೆ ಹಾಕಿದ್ದಾರೆ. ಮೋದಿಜಿಯವರ ಕೊಟ್ಟ ಅಕ್ಕಿಯನ್ನ ನಾನೆ ಕೊಟ್ಟೆ ಎನ್ನುವ ಸಿದ್ದರಾಮಯ್ಯನವರೆ ನಿಮ್ಮದು ಅಕ್ಕಿ ಹಾಕೊ ತಟ್ಟೆ ಮಾತ್ರ ನಿಮ್ಮದು ಅಕ್ಕಿ ಕೇಂದ್ರ ಸರ್ಕಾರದ್ದು. ಕಾಂಗ್ರೆಸ್ ಪಕ್ಷದಿಂದ ದಿನ ದಲಿತರನ್ನೆಲ್ಲ ಮೂಲೆಗುಂಪು ಮಾಡುವ ಕೆಲಸ ನಡೆಯುತ್ತಿದೆ. ಅದಕ್ಕಾಗಿ ಕಾಂಗ್ರೆಸ್ ದಲಿತ ವಿರೋಧಿ ಪಕ್ಷ. ಆ ಪಕ್ಷದ ಸುಳ್ಳಿನ ಮುಖವಾಡ ಜನಕ್ಕೆ ಅರ್ಥವಾಗುತ್ತಿರುವದರಿಂದ ಜನರೇ ಅವರಿಗೆ ಪಾಠ ಕಲಿಸಿದ್ದಾರೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+