ರಾಜಸ್ಥಾನದ ರೀತಿ ಕರ್ನಾಟಕದಲ್ಲೂ ಕಾಂಗ್ರೆಸ್ ಪೀಸ್ ಪೀಸ್: ಬಿಜೆಪಿ!

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿಗಳನ್ನೇ ಅಸ್ತ್ರ ಮಾಡಿಕೊಂಡಿರುವ ಕರ್ನಾಟಕ ಬಿಜೆಪಿಯ ಯುದ್ಧ ಮುಂದುವರಿದಿದೆ. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವ ಬಿಜೆಪಿ, ರಾಜಸ್ಥಾನ ಕಾಂಗ್ರೆಸ್‌ಗೆ ಆದ ಗತಿಯೇ ಇಲ್ಲೂ ಆಗುತ್ತೆ ಅಂತಿದೆ. ಹಾಗಾದ್ರೆ ರಾಜ್ಯ ಬಿಜೆಪಿ ಘಟಕ ಹೇಳಿದ್ದೇನು? ಅದರ ಪರಿಣಾಮ ಏನಾಗಬಹುದು? ತಿಳಿಯೋಣ ಬನ್ನಿ.

ಇನ್ನೇನು ಬಿಬಿಎಂಪಿ ಚುನಾವಣೆ ಹತ್ತಿರ ಬಂತು, ಹಾಗೇ ಲೋಕಸಭೆ ಎಲೆಕ್ಷನ್ ಕೂಡ ಕೆಲ ತಿಂಗಳಲ್ಲೇ ನಡೆಯಲಿದೆ. ಹೀಗಿದ್ದಾಗ ಹೊಸ ಸರ್ಕಾರದ ವಿರುದ್ಧ ವಿರೋಧ ಪಕ್ಷವಾಗಿ BJP ಗುಡುಗಲೇ ಬೇಕು. ಹೀಗಾಗಿ ಕಾಂಗ್ರೆಸ್‌ನ ಗ್ಯಾರಂಟಿ ವಿಚಾರಗಳನ್ನೇ ಅಸ್ತ್ರ ಮಾಡಿಕೊಂಡು, ವಾಗ್ದಾಳಿ ನಡೆಸ್ತಿದೆ ಅನ್ನೋದು ಕಾಂಗ್ರೆಸ್ ನಾಯಕರ ಆರೋಪ. ಈ ಮೊದಲು ಗ್ಯಾರಂಟಿ ಯೋಜನೆ ಜಾರಿ ಆಗೋದೆ ಇಲ್ಲ ಅಂತಿದ್ದ ಬಿಜೆಪಿ, ಈಗ ಗ್ಯಾರಂಟಿ ಜಾರಿಯಾದರೆ ಹೊಸ ಕಿರಿಕ್ ತೆಗೆದಿದೆ (Congress Guarantee).

BJP war against Congress guarantee has been continued on Twitter

ರಾಜಸ್ಥಾನ & ಕರ್ನಾಟಕಕ್ಕೆ ಹೋಲಿಕೆ!

ಹೌದು 'ಕರ್ನಾಟಕದಂತೆ ರಾಜಸ್ಥಾನದಲ್ಲೂ ವಂಚನೆಯ ಗ್ಯಾರಂಟಿ ನೀಡಿ ಅಧಿಕಾರಕ್ಕೆ ಬಂದು ಮಹಾದ್ರೋಹ ಮಾಡಿದ ರಾಜಸ್ಥಾನ ಕಾಂಗ್ರೆಸ್ ಛಿದ್ರವಾಗಿದೆ' ಎಂದಿದೆ ಬಿಜೆಪಿ. ಹೀಗೆ ಬಿಜೆಪಿ & ಕಾಂಗ್ರೆಸ್ ಮಧ್ಯೆ ಗ್ಯಾರಂಟಿ ವಾರ್‌ಗೆ ಬ್ರೇಕ್ ಬಿದ್ದಿಲ್ಲ. 'ಹೈಕಮಾಂಡ್ ಕಾರ್ಯವೈಖರಿಗೆ ಸಿಡಿದು ಮತ್ತೊಂದು 'ಪೈಲಟ್‌' ಪಕ್ಷ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ಉದಯವಾಗುತ್ತಿದೆ. ರಾಜಸ್ಥಾನ ಮಾಡೆಲನ್ನೇ ಕರ್ನಾಟಕ ಕಾಂಗ್ರೆಸ್ ಪಾಲಿಸಲಿದೆ ಎಂಬುದನ್ನು ಅವರೇ ಮಾತನಾಡುತ್ತಿದ್ದಾರೆ! ಇದು ಗ್ಯಾರಂಟಿ. ಇದು ಗ್ಯಾರಂಟಿ ಮಹಿಮೆ!' ಎಂದು ಸಿದ್ದರಾಮಯ್ಯ ಸರ್ಕಾರವನ್ನ ಕೆಣಕಿದೆ ರಾಜ್ಯ ಬಿಜೆಪಿ ಘಟಕ.

ಹಾಗೇ ಇನ್ನೊಂದು ಟ್ವೀಟ್‌ನಲ್ಲಿ 'ರಾಜ್ಯದಲ್ಲಿ ಅವಾಸ್ತವಿಕ ಗ್ಯಾರಂಟಿಗಳ ಅನುಷ್ಠಾನಕ್ಕೆ ಪತರುಗುಟ್ಟುತ್ತಿರುವ @siddaramaiah ಸರ್ಕಾರ ಸಿಕ್ಕ ಸಿಕ್ಕ ಇಲಾಖೆಗೆ 'ಕೈ' ಹಾಕಿ ಆರ್ಥಿಕ ದಿವಾಳಿ ಎಬ್ಬಿಸುತ್ತಿದೆ. 1 ಬಿಎಂಟಿಸಿ- ಆರ್ಥಿಕ ಇಂಧನವಿಲ್ಲ 2 ಜಲಮಂಡಳಿ- ಹಣಕಾಸಿನ ಹಾಹಾಕಾರ 3 ಕೆಎಸ್‌ಆರ್‌ಟಿಸಿ - ನಷ್ಟದ ಹೆದ್ದಾರಿಯಲ್ಲಿ 4 ವಿದ್ಯುತ್ ಸರಬರಾಜು ಕಂಪೆನಿಗಳು - ಮುಳುಗುವ ಹಾದಿಯಲ್ಲಿ 5 ಇನ್ನು ಹಲವು ಇಲಾಖೆಗಳ ಸಂಸ್ಥೆಗಳು ಅಧಃಪತನದ ಪಟ್ಟಿಯಲ್ಲಿದ್ದು, 'ಅರ್ಥ'ವಿಲ್ಲದ #ATMSarkara ಸೃಷ್ಟಿಸಿರುವ ಅರಾಜಕತೆಗೆ ಬಲಿಯಾಗಲು 'ಸಿದ್ದ'ವಾಗಿವೆ.' ಎಂದು ಆರೋಪಿಸಿದೆ ಬಿಜೆಪಿ.

ಬಿಜೆಪಿಗೆ ಆರೋಪವೇ ತಿರುಗುಬಾಣ!

ಹೀಗೆ ಬಿಜೆಪಿ ಟ್ವೀಟ್‌ಗೆ ವೆರೈಟಿ ವೆರೈಟಿ ರೀಪ್ಲೇಗಳು ಕೂಡ ಬಂದಿವೆ. ಕರ್ನಾಟಕದ ವಿವಿಧ ಇಲಾಖೆಗಳು ಈಗಾಗಲೇ ದಿವಾಳಿ ಆಗಿವೆ ಅಂತಾ ಪರೋಕ್ಷವಾಗಿ ಬಿಜೆಪಿ ಹೇಳುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದಕ್ಕೆ ನೆಟ್ಟಿಗರು ಕಳೆದ 4 ವರ್ಷ ನೀವೇ ಅಲ್ವಾ ಅಧಿಕಾರ ನಡೆಸಿದ್ದು? ಅಂತಾ ಬಿಜೆಪಿಗೆ ಪ್ರಶ್ನೆ ಕೇಳ್ತಿದ್ದಾರೆ. ಹಾಗೇ ಈ ಇಲಾಖೆಗಳು ನಷ್ಟದ ಹಾದಿಗೆ ಬರಲು ನೀವೆ ತಾನೆ ಕಾರಣ? ಅನ್ನೋ ಪ್ರಶ್ನೆಯನ್ನ ಕೇಳುತ್ತಿದ್ದಾರೆ. ಯಾಕಂದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಇನ್ನೂ 1 ತಿಂಗಳು ಕೂಡ ಕಂಪ್ಲೀಟ್ ಆಗಿಲ್ಲ. ಹೀಗಾಗಿ ಇದಕ್ಕೆ ನೀವೆ ಹೊಣೆ ಅಂತಿದ್ದಾರೆ ಸೋಷಿಯಲ್ ಮೀಡಿಯಾ ಮಂದಿ.

ವಿದ್ಯುತ್ ಫಿಕ್ಸೆಡ್ ದರ ಫೈಟ್!

ಹಾಗೇ ವಿದ್ಯುತ್ ಫಿಕ್ಸೆಡ್ ದರ ಏರಿಕೆ ಬಗ್ಗೆಯೂ ಕಾಂಗ್ರೆಸ್ ವಿರುದ್ಧ ಬಿಜೆಪಿ ಆರೋಪವನ್ನ ಮಾಡಿದ್ದು, 'ರಾಜ್ಯದ ಪ್ರತೀ ಮನೆಗೂ ದಿಢೀರ್ ವಿದ್ಯುತ್ ಬಿಲ್ ಫಿಕ್ಸೆಡ್ ದರ ಹೆಚ್ಚಿಸಿದ #ATMSarkara ಜೇಬು ತುಂಬಿಸಿಕೊಳ್ಳಲು ಜನರಿಂದ ಲೂಟಿ ಮಾಡುತ್ತಿದೆ. ಮುಖ್ಯಮಂತ್ರಿ @siddaramaiah ಸರ್ಕಾರ ಗ್ಯಾರಂಟಿ ನೀಡುವ ಮುನ್ನವೇ ಜನರಿಂದ ವಸೂಲಿಗೆ ಇಳಿದಿರುವುದು ಜನತೆ ಇಟ್ಟಿದ್ದ ನಂಬಿಕೆಗೆ ಮಾಡುತ್ತಿರುವ ಮಹಾ ದ್ರೋಹ..! ಕಾಂಗ್ರೆಸ್ಸಿಗರ ಎಲುಬಿಲ್ಲದ ನಾಲಿಗೆಗೆ ನಾಡಿನ ಜನತೆ ತಕ್ಕ ಪಾಠ ಕಲಿಸುವುದು ಉಚಿತ, ಖಚಿತ, ನಿಶ್ಚಿತ..!' ಎಂದು ಹೇಳಿದೆ.

ಒಟ್ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೀಗೆ ಟ್ವೀಟ್ ಫೈಟ್ ಮುಂದುವರಿದಿದೆ. ಹಾಗೇ ಬಿಜೆಪಿ ತನ್ನ ಆಡಳಿತದ ಅವಧಿಯಲ್ಲೇ ವಿದ್ಯುತ್ ದರ ಹೆಚ್ಚಿಸಿದೆ ಅನ್ನೋ ಆರೋಪವನ್ನು ಕಾಂಗ್ರೆಸ್ ಮಾಡುತ್ತಿದೆ, ಆದರೆ ಬಿಜೆಪಿ ನಾಯಕರು ಈಗ ಕಡಿಮೆ ಮಾಡಿ ಅಂತಿದ್ದಾರೆ. ಈ ಕಿತ್ತಾಟದ ನಡುವೆ ರಾಜ್ಯದ ಜನ ಕೂಡ ರೊಚ್ಚಿಗೆದ್ದಿದ್ದು, ಕಿತ್ತಾಟ ಬಿಟ್ಟು ಕೆಲಸ ಮಾಡಿ ಅಂತಿದ್ದಾರೆ. ಆದರೆ ಈ ಫೈಟ್‌ಗೆ ಯಾವಾಗ ಬ್ರೇಕ್ ಬೀಳುತ್ತೋ ಗೊತ್ತಿಲ್ಲ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+