Get Updates
Get notified of breaking news, exclusive insights, and must-see stories!

ಬಿಜೆಪಿ ಸಂಸದರ ವಿರುದ್ಧ ಬಿಜೆಪಿ ಮಾಜಿ ಸಚಿವರಿಂದ ಕೊಲೆ ಸಂಚು ಆರೋಪ: #BJPvsBJP ಕಾದಾಟವು ರಕ್ತಪಾತದ ಹಂತಕ್ಕೆ ತಲುಪಿದೆಯೇ?

ಬೆಂಗಳೂರು, ಆಗಸ್ಟ್‌ 11: ಬಿಜೆಪಿ ಸಂಸದರೊಬ್ಬರು ತಮ್ಮ ವಿರುದ್ಧ ಕೊಲೆ ಸಂಚು ರೂಪಿಸಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಪ್ರಭು ಚೌಹಾಣ್‌ ಆರೋಪಿಸಿದ್ದಾರೆ. ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, #BJPvsBJP ಕಾದಾಟವು ರಕ್ತಪಾತದ ಹಂತಕ್ಕೆ ತಲುಪಿದೆಯೇ ಎಂದು ಪ್ರಶ್ನಿಸಿದೆ.

'ಬಿಜೆಪಿಯ ಮಾಜಿ ಸಚಿವ ಪ್ರಭು ಚೌಹಾಣ್ ಅವರನ್ನು ಬಿಜೆಪಿ ಸಂಸದ ಭಗವಂತ ಖೂಬಾ ಅವರು ಗುಂಡಿಕ್ಕಿ ಕೊಲೆ ಮಾಡಲು ಸಂಚು ರೂಪಿಸಿದ್ದಾರಂತೆ. ಬಿಜೆಪಿಯಲ್ಲಿ ಮಾಜಿ ಸಚಿವರೊಬ್ಬರ ಜೀವಕ್ಕೆ ರಕ್ಷಣೆ ಇಲ್ಲದಾಗಿದೆಯೇ? #BJPvsBJP ಕಾದಾಟವು ರಕ್ತಪಾತದ ಹಂತದವರೆಗೂ ಬಂದಿದೆಯೇ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

'ಸಂಸದರೊಬ್ಬರ ಮೇಲೆ ಇಂತಹ ಗಂಭೀರ ಆರೋಪ ಬಿಜೆಪಿಯವರೇ ಮಾಡಿರುವಾಗ ಬಿಜೆಪಿ ಪಕ್ಷ ಮೌನವಹಿಸಿರುವುದೇಕೆ?' ಎಂದು ಕೇಳಿದೆ.

bjp-vs-bjp-in-karnataka

'ಬಿಜೆಪಿಯ ಸಂಸದ ಭಗವಂತ್ ಖೂಬಾ ಬಿಜೆಪಿಯ ಮಾಜಿ ಸಚಿವ ಪ್ರಭು ಚೌಹಾಣ್ ಅವರನ್ನು ಕೊಲೆ ಮಾಡುವ ಸಂಚು ರೂಪಿಸಿದ ಆರೋಪವನ್ನು ಸ್ವತಃ ಪ್ರಭು ಚೌಹಾಣ್ ಮಾಡಿದ್ದಾರೆ. ಈ ಆರೋಪದ ಬಗ್ಗೆ ಸಂಸದರ ವಿರುದ್ಧ ನರೇಂದ್ರ ಮೋದಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವರೇ?' ಎಂದು ಕಾಂಗ್ರೆಸ್ ಕೇಳಿದೆ.

'ಬಿಜೆಪಿಯ ಪ್ರಭುವನ್ನು ಭಗವಂತನಿಂದ ಕಾಪಾಡುವವರು ಯಾರು? ಬಿಜೆಪಿಯ ಭಗವಂತನೇ ಬಿಜೆಪಿಯ ಪ್ರಭುವಿಗೆ ಮೃತ್ಯು ಸ್ವರೂಪಿಯಾಗಿ ಕಾಡುತ್ತಿದ್ದರೂ ಸರ್ವಶಕ್ತ ನರೇಂದ್ರ ಮೋದಿ ಅವರು ಕಣ್ಮುಚ್ಚಿ ಕುಳಿತಿರುವುದೇಕೆ? ಬಿಜೆಪಿಯಲ್ಲಿನ ದಲಿತ ರಾಜಕಾರಿಣಿಗಳ ಗೋಳನ್ನು ಕೇಳುವವರು ಯಾರೂ ಇಲ್ಲವೇ?' ಎಂದು ಕಾಂಗ್ರೆಸ್‌ ಪ್ರಶ್ನಿಸಿದ್ದಾರೆ.

bjp-vs-bjp-in-karnataka

'ಬಿಜೆಪಿಯಲ್ಲಿ ಪರಿಶಿಷ್ಟ ಸಮುದಾಯದ ರಾಜಕಾರಿಣಿಗಳಿಗೆ ಜೀವ ಬೆದರಿಕೆ ಹಾಕಿ ಬ್ಲಾಕ್ಮೇಲ್ ಮಾಡಿ ಅದುಮಿ ಇಡಲಾಗಿದೆಯೇ? ಈ ಆರೋಪ ಕೇಳಿ ಬಂದಮೇಲೂ ಬಿಜೆಪಿ ಪ್ರಭು ಚೌಹಾಣ್ ನೆರವಿಗೆ ನಿಲ್ಲದಿರುವುದೇಕೆ? ಪರಿಶಿಷ್ಟ ಸಮುದಾಯದವರ ಬಗ್ಗೆ ಬಿಜೆಪಿಗೆ ಇಷ್ಟೊಂದು ತಾತ್ಸಾರವೇಕೆ? ಯಾವೊಬ್ಬ ಬಿಜೆಪಿ ನಾಯಕರೂ ಈ ಹತ್ಯಾ ಸಂಚಿನ ಬಗ್ಗೆ ಮಾತನಾಡದಿರುವುದೇಕೆ? ಬಿಜೆಪಿ ಉತ್ತರಿಸುವುದೇ?' ಎಂದು ಕೆಪಿಸಿಸಿ ಪ್ರಶ್ನಿಸಿದೆ.

'2 ತಿಂಗಳ ಹಿಂದೆಯೇ ಬಿಜೆಪಿಯ ಮಾಜಿ ಸಚಿವ ಪ್ರಭು ಚೌಹಾಣ್ ಮಾಧ್ಯಮಗಳ ಎದುರು ತಮ್ಮದೇ ಪಕ್ಷದ ಸಂಸದ ಭಗವಂತ್ ಖೂಬಾ ಅವರ ಕಿರುಕುಳದ ಬಗ್ಗೆ ಆರೋಪಿಸಿ ಕಣ್ಣೀರು ಸುರಿಸಿದ್ದರು. ಪರಿಶಿಷ್ಟ ಸಮುದಾಯದ ಶಾಸಕರ ಈ ಕಣ್ಣೀರು ಬಿಜೆಪಿ ಕಣ್ಣಿಗೆ ಕಾಣಿಸಲಿಲ್ಲವೇ?' ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

'ಬಿಜೆಪಿಯಲ್ಲಿ ದಲಿತರಿಗೆ ಸಾರ್ವಜನಿಕವಾಗಿ ಕಣ್ಣೀರು ಹಾಕುವಂತಹ ದುಸ್ಥಿತಿ ನಿರ್ಮಾಣವಾಗಿರುವುದೇಕೆ? ರಾಜ್ಯಾಧ್ಯಕ್ಷರ ಅಸಾಮರ್ಥ್ಯವೇ ಬಿಜೆಪಿಯ ಈ ದುಸ್ಥಿತಿಗೆ ಕಾರಣವಲ್ಲವೇ?' ಎಂದು ಕೇಳಿದೆ.

bjp-vs-bjp-in-karnataka

ಕೊಠಡಿಗೆ ಬೆಂಕಿ ಬಿದ್ದಿರುವುದು ಆಕಸ್ಮಿಕವಲ್ಲ, ಷಡ್ಯಂತ್ರ

'ಬಿಬಿಎಂಪಿ ಕಚೇರಿಯ ಕಾಮಗಾರಿಗಳ ಗುಣಮಟ್ಟ ನಿಯಂತ್ರಣ ಪ್ರಯೋಗಲಯದಲ್ಲಿ ಕಾಮಗಾರಿಗಳ ದಾಖಲೆ ಇದ್ದಂತಹ ಕೊಠಡಿಗೆ ಬೆಂಕಿ ಬಿದ್ದಿರುವುದು ಆಕಸ್ಮಿಕವಲ್ಲ, ಷಡ್ಯಂತ್ರ' ಎಂದು ಕಾಂಗ್ರೆಸ್ ಆರೋಪಿಸಿದೆ.

'40 ಪರ್ಸೆಂಟ್‌ ಕಮಿಷನ್ನಿನ ಕಳಪೆ ಕಾಮಗಾರಿಗಳ ಬಗ್ಗೆ ನ್ಯಾಯಾಂಗ ತನಿಖೆಗೆ ವಹಿಸಿದ ಬೆನ್ನಲ್ಲೇ ದಾಖಲೆಗಳಿದ್ದ ಕೊಠಡಿಗೆ ಬೆಂಕಿ ಹಚ್ಚಿರುವ ದುಷ್ಕರ್ಮಿಗಳನ್ನು, ಇದರ ಹಿಂದಿರುವ ಬಿಜೆಪಿ ಭ್ರಷ್ಟರನ್ನು ಹೆಡೆಮುರಿ ಕಟ್ಟುವುದು ನಿಶ್ಚಿತ. ಬಿಜೆಪಿ ತಾನು ಮಾಡಿದ ಭ್ರಷ್ಟಾಚಾರದ ಸಾಕ್ಷ್ಯಗಳಿಗೆ ಬೆಂಕಿ ಇಟ್ಟು ಬಚಾವಾಗಿಬಿಡುವ ಹುನ್ನಾರ ನಡೆಸಿದೆ' ಎಂದು ಕೆಪಿಸಿಸಿ ಟ್ವೀಟ್‌ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+