ಮತ್ತೆ ಧರ್ಮದಂಗಲ್ : ಈ ಬಾರಿ ಗೋವು ಹಾಯುವುದು ಬಿಜೆಪಿಗೋ, ಕಾಂಗ್ರೆಸ್ಸಿಗೋ?
ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ನಂತರ ಮತ್ತೆ ಲೋಕಸಭಾ ಚುನಾವಣೆಗೆ ಸಜ್ಜಾಗಲು ಬಿಜೆಪಿ, ಕಾಂಗ್ರೆಸ್ ವಿರುದ್ದ ಅಸ್ತ್ರವೊಂದನ್ನು ಹುಡುಕುತ್ತಿತ್ತು. ಕಾಂಗ್ರೆಸ್ ಯಾವ ರೀತಿ ಈ ಪರಿಸ್ಥಿತಿಯನ್ನು ನಿಭಾಯಿಸಲಿದೆ ಎನ್ನುವುದರ ಮೇಲೆ ನಿಂತಿದೆ ಬಿಜೆಪಿ ಪ್ರಯೋಗಿಸಲು ಹೊರಟಿರುವ ಗೋಹತ್ಯಾ ಅಸ್ತ್ರದ ಎಫೆಕ್ಟ್.
ಚುನಾವಣೆಯ ವೇಳೆ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಭರವಸೆ ಗ್ಯಾರಂಟಿ ಆದ ನಂತರ ಕಾಂಗ್ರೆಸ್ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಂಡಿದೆ. ವರ್ತಮಾನ ಕಾಲದಲ್ಲಿ ದೇಶದ ಯಾವುದೇ ರಾಜ್ಯ ಸರ್ಕಾರ ಮಾಡದ ಜನಪರ ಕೆಲಸ ಇದೆಂದು ವ್ಯಾಖ್ಯಾನಿಸಲಾಗುತ್ತಿದೆ. ರಾಜ್ಯದ ಎಲ್ಲಾ ಮನೆಮನಗಳಲ್ಲೂ ಗ್ಯಾರಂಟಿಯದ್ದೇ ಚರ್ಚೆ, ಅದರಲ್ಲೂ ವಿಶೇಷವಾಗಿ ಮಹಿಳಾ ವರ್ಗದಲ್ಲಿ.

ಇದೇ ಮೂಮೆಂಟಂ ಅನ್ನು ಕನಿಷ್ಠ ಪಕ್ಷ ಮುಂದಿನ ವರ್ಷದ ಲೋಕಸಭಾ ಚುನಾವಣೆಯ ತನಕ ಮುಂದುವರಿಸಿಕೊಂಡು ಹೋಗಲು ನಿಶ್ಚಯಿಸಿರುವ ಕಾಂಗ್ರೆಸ್ಸಿಗೆ, ಸಿದ್ದರಾಮಯ್ಯನವರ ಸರ್ಕಾರದ ಮಂತ್ರಿಯೊಬ್ಬರು ಆಡಿದ ಮಾತು ಪೇಚಿಗೆ ತಂದು ನಿಲ್ಲಿಸಿದೆ. ಪಠ್ಯಪುಸ್ತಕ ಪರಿಷ್ಕರಣೆ ಸುದ್ದಿಯಲ್ಲಿರುವ ಈ ಹೊತ್ತಿನಲ್ಲಿ ಬಿಜಿಪಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಮುಂದಿಟ್ಟುಕೊಂಡು ಬೀದಿಗೆ ಇಳಿಯಲಿದೆ.
ವಿದ್ಯುತ ದರ ಏರಿಕೆ, ಗೋಹತ್ಯೆ ನಿಷೇಧ ಕಾಯ್ದೆ ರದ್ದತಿ
ವಿದ್ಯುತ ದರ ಏರಿಕೆ, ಗೋಹತ್ಯೆ ನಿಷೇಧ ಕಾಯ್ದೆ ರದ್ದತಿ, ಹಾಲಿಗೆ ಪ್ರೋತ್ಸಾಹ ಧನ ಕಡಿತ ವಿರೋಧಿಸಿ ಬಿಜೆಪಿ ತಾಲೂಕು/ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಲಿದೆ. ಆ ಮೂಲಕ, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಹದಿನೈದೇ ದಿನದಲ್ಲಿ ಬಿಜೆಪಿ ತನ್ನ ಮೊದಲ ಪ್ರತಿಭಟನೆಯನ್ನು ನಡೆಸಲು ಸಜ್ಜಾಗಲಿದೆ.
ಗೋಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವ ಬಗ್ಗೆ ಚರ್ಚೆ
"ಎಮ್ಮೆ ಕೋಣಗಳನ್ನು ಕಡಿದು ಹಾಕುವುದಾದರೇ ಹಸುಗಳನ್ನು ಏಕೆ ಕಡಿಯಬಾರದು? ನನ್ನ ಮನೆಯಲ್ಲೂ ಮೂರ್ನಾಲ್ಕು ಹಸುಗಳಿವೆ. ಈ ಪೈಕಿ ಒಂದು ಹಸು ಸತ್ತಾಗ ಗುಂಡಿ ತೋಡಿ ಹೂಳಲು ತುಂಬಾ ಕಷ್ಟ ಪಡಬೇಕಾಯಿತು. 25 ಮಂದಿ ಬಂದರೂ ಸತ್ತ ಹಸುವಿನ ಮೃತದೇಹ ಎತ್ತಲು ಸಾಧ್ಯವಾಗಲಿಲ್ಲ. ಜೆಸಿಬಿ ತರಿಸಿ ಮೃತ ಹಸುವನ್ನು ಎತ್ತಿಸಿ ಗುಂಡಿ ತೋಡಿ ಹೂಳಬೇಕಾಯಿತು. ಹೀಗಾಗಿ ಗೋಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವ ಬಗ್ಗೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ" ಎನ್ನುವ ಹೇಳಿಕೆಯನ್ನು ಪಶುಸಂಗೋಪನಾ ಖಾತೆಯ ಸಚಿವ ಕೆ.ವೆಂಕಟೇಶ್ ಮೈಸೂರಿನಲ್ಲಿ ಹೇಳಿದ್ದರು.
ಗೋವುಗಳು ಭಾರತದ ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆ ನೀಡಿವೆ
"ಗೋಹತ್ಯೆ ನಿಷೇದ ಕಾಯಿದೆ ವಾಪಸ್ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯುವುದು ಸೂಕ್ತ. ಗೋವುಗಳು ಭಾರತದ ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆ ನೀಡಿವೆ. ಇಂತಹ ಗೋವುಗಳ ಹತ್ಯೆ ನಿಷೇದ ಕಾಯಿದೆಯನ್ನು ಸರ್ಕಾರ ರದ್ದುಪಡಿಸುವುದು ಸಮಂಜಸವಲ್ಲ, ಅದರ ಬದಲು ಕಾಯಿದೆಗಳನ್ನು ಮತ್ತಷ್ಟು ಕಠಿಣವಾಗಿ ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಬೇಕು. ಸರ್ಕಾರ ಯಾವುದೇ ಒಂದು ಕೋಮಿನ ಜನರನ್ನು ಓಲೈಸಲು ಗೋಹತ್ಯೆ ಕಾಯಿದೆ ನಿಷೇದ ವಾಪಸ್ಸು ಪಡೆಯುವ ಬಗ್ಗೆ ಚಿಂತನೆ ನಡೆಸಿರುವುದು ಸಮಂಜಶವಲ್ಲ"ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥಶ್ರೀಗಳು ಸಲಹೆ ನೀಡಿದ್ದರು.
ರಾಜ್ಯ ಗೃಹ ಸಚಿವ ಡಾ.ಪರಮೇಶ್ವರ್ ಹೇಳಿಕೆ
ಈ ವಿಚಾರ ಮುನ್ನಲೆಗೆ ಬರುತ್ತಿದ್ದಂತೆಯೇ ಹೇಳಿಕೆಯನ್ನು ನೀಡಿರುವ ರಾಜ್ಯ ಗೃಹ ಸಚಿವ ಡಾ.ಪರಮೇಶ್ವರ್, "ಗೋಹತ್ಯಾ ಕಾಯಿದೆ ವಾಪಸ್ ಪಡೆಯುವ ವಿಚಾರ, ಕ್ಯಾಬಿನೆಟ್ ನಲ್ಲಾಗಲಿ ಅಥವಾ ಯಾವುದೇ ಸರ್ಕಾರೀ ಮಟ್ಟದಲ್ಲಿ ಚರ್ಚೆಯೇ ಆಗಿಲ್ಲ. ಸಚಿವರು ನೀಡಿರುವ ಹೇಳಿಕೆ ಅದು ವೈಯಕ್ತಿಕ, ಅದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಬಿಜೆಪಿಯವರು ಇದನ್ನು ಸುಮ್ಮನೆ ಸುದ್ದಿ ಮಾಡುತ್ತಿದ್ದಾರೆ"ಎಂದು ಪರಮೇಶ್ವರ್ ಸ್ಪಷ್ಟನೆಯನ್ನು ನೀಡಿದ್ದಾರೆ.
ಕಾಂಗ್ರೆಸ್ಸಿಗೆ ಹಿನ್ನಡೆಯಾಗಲು ಈ ವಿಚಾರಗಳೂ ಕಾರಣವಾಗಿದ್ದವು
ಕಳೆದ ಬಾರಿ ಸಿದ್ದರಾಮಯ್ಯನವರ ಸರ್ಕಾರ ಅಧಿಕಾರದಲ್ಲಿದ್ದಾಗ ಟಿಪ್ಪು ಜಯಂತಿ ಆಚರಣೆಯ ಜೊತೆಗೆ ಗೋಹತ್ಯಾ ಕಾಯಿದೆ ನಿಷೇಧ ವಿಚಾರವೂ ದೊಡ್ಡ ಸುದ್ದಿಯನ್ನು ಮಾಡಿತ್ತು. ಅಂದು ಕಾಂಗ್ರೆಸ್ಸಿಗೆ ಹಿನ್ನಡೆಯಾಗಲು ಈ ವಿಚಾರಗಳೂ ಕಾರಣವಾಗಿದ್ದವು. ಹಾಗಾಗಿ, ಇದು ಸೂಕ್ಷ್ಮ ವಿಚಾರವಾಗಿರುವುದರಿಂದ ಹಾಲೀ ಸರ್ಕಾರ ಬಹಳ ಜಾಗರೂಕತೆಯಿಂದ ಹೆಜ್ಜೆಯನ್ನು ಇಡುತ್ತದೆ.
ಭಾವನಾತ್ಮಕ ವಿಚಾರಗಳು ಎಲ್ಲಾ ಸಮಯದಲ್ಲೂ ವರ್ಕೌಟ್ ಆಗುವುದಿಲ್ಲ
ಭಾವನಾತ್ಮಕ ವಿಚಾರಗಳು ಎಲ್ಲಾ ಸಮಯದಲ್ಲೂ ವೋಟ್ ಗಿಟ್ಟಿಸಿಕೊಳ್ಳಲು ಸಹಾಯಕಾರಿ ಆಗುವುದಿಲ್ಲ ಎನ್ನುವುದು ಇತ್ತೀಚಿಗೆ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ರುಜುವಾತಾಗಿದೆ, ಅದು ಬಿಜೆಪಿಗೂ ಗೊತ್ತಿರುವ ವಿಚಾರ. ಆದರೆ, ಗೋಹತ್ಯೆ ಕಾಯಿದೆಯ ವಿಚಾರದಲ್ಲಿ ನಾಡಿನ ಪೀಠಾಧಿಪತಿಗಳು ಈಗಾಗಲೇ ಹೇಳಿಕೆಯನ್ನು ನೀಡಲಾರಂಭಿಸಿದ್ದಾರೆ. ಇದು ಸರ್ಕಾರಕ್ಕೆ ಬಿಸಿಮುಟ್ಟುವ ಸಾಧ್ಯತೆಯಿಲ್ಲದಿಲ್ಲ. ಹಾಗಾಗಿ, ಬಿಜೆಪಿ ಈ ವಿಚಾರವನ್ನು ಜೀವಂತವಾಗಿಸಲು ಪ್ರಯತ್ನವನ್ನು ನಡೆಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಹಸು ಸಾಕುವ ಯಾವುದೇ ರೈತ ಅದು ಗೊಡ್ಡಾದ ಮೇಲೆ ಸಾಕುವುದಿಲ್ಲ
ಹಸು ಸಾಕುವ ಯಾವುದೇ ರೈತ ಅದು ಗೊಡ್ಡಾದ ಮೇಲೆ ಸಾಕುವುದಿಲ್ಲ ಎನ್ನುವುದು ವಾಸ್ತವತೆ, ಪ್ರತಿ ವಾರಕ್ಕೊಮ್ಮೆ ರೈತರು ದನಗಳ ಸಂತೆಗೆ ಹೋಗುತ್ತಾರೆ, ಇದನ್ನೇ ದೇವೇಗೌಡ್ರು ಹಿಂದಿನಿಂದಲೂ ಹೇಳಿಕೊಂಡು ಬರುತ್ತಿದ್ದಾರೆ. ಬಿಜೆಪಿ ಮತ್ತೆ ಈ ವಿಚಾರವನ್ನು ಮುನ್ನಲೆಗೆ ತರಲು ಹೊರಟಿದೆ. ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹೇಳುವುದಾದರೆ, ಗೋವು ಹಾಯುವುದು ಬಿಜೆಪಿಗೋ, ಕಾಂಗ್ರೆಸ್ಸಿಗೋ? ಎನ್ನುವುದನ್ನು ಕಾದು ನೋಡಬೇಕಿದೆ.
-
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ಇಡೀ ಸರ್ಕಾರವೇ ಉಮೇಶ್ ಮೇಟಿ ಜೊತೆಗಿದೆ: ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ.ಶಿವಕುಮಾರ್ ಅಭಯ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು












Click it and Unblock the Notifications