ಮನೆಯ ಸರ್ವರಿಗೂ MLA ಟಿಕೆಟ್ ಕೊಡುವುದರಿಂದ ಬಡತನ ನಿರ್ಮೂಲವಾಗದು!
ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2023ರ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.
ಬೆಂಗಳೂರು, ಫೆಬ್ರವರಿ 16; ಕರ್ನಾಟಕ ಬಿಜೆಪಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಟ್ವೀಟ್ ಸಮರ ಮುಂದುವರೆಸಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2023ರ ಬಗ್ಗೆ ಎಚ್. ಡಿ. ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಪಕ್ಷ ತಿರುಗೇಟು ನೀಡಿದೆ.
ಗುರುವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಜೆಡಿಎಸ್ ಕುಟುಂಬ ರಾಜಕೀಯವನ್ನು ಉಲ್ಲೇಖಿಸಿದೆ. ಬುಧವಾರ ಸಹ 'ಎಚ್. ಡಿ. ಕುಮಾರಸ್ವಾಮಿ ಅವರೇ ತಮ್ಮ ಪತ್ನಿ ಮೂರು ಬಾರಿ ಶಾಸಕಿಯಾಗಬಹುದು, ಆದರೆ ನಿಮ್ಮ ಅತ್ತಿಗೆ ಒಂದು ಬಾರಿಯೂ ಶಾಸಕಿಯಾಗಬಾರದೇ?' ಎಂದು ಟ್ವೀಟ್ ಮೂಲಕ ಬಿಜೆಪಿ ಟೀಕೆ ಮಾಡಿತ್ತು.
ಬಿಜೆಪಿ ತನ್ನ ಟ್ವೀಟ್‌ನಲ್ಲಿ, 'ಸ್ನಾನಕ್ಕೆ ಮಿನರಲ್ ವಾಟರ್ ಬಳಸಿಕೊಳ್ಳುವುದರಿಂದ, ಕ್ರೇನ್‌ಗಳಲ್ಲಿ ಊರುದ್ದ ಹಾರ ಹಾಕಿಸಿಕೊಳ್ಳುವುದರಿಂದ, ಟವಲಿಗೆ ವಿಕ್ಸ್ ಹಚ್ಚಿಕೊಳ್ಳುವುದರಿಂದ ಅಥವಾ ತಮ್ಮ ಮನೆಯ ಸರ್ವರಿಗೂ MLA ಟಿಕೆಟ್ ಕೊಡುವುದರಿಂದ ಬಡತನ ನಿರ್ಮೂಲವಾಗದು ಮಾನ್ಯ @hd_kumaraswamy ಅವರೇ!' ಎಂದು ಕುಟುಕಿದೆ.

'ಬಡತನ ನಿರ್ಮೂಲನೆಗೆ ಬೇಕಾಗಿರುವುದು ನಿಸ್ವಾರ್ಥ ಇಚ್ಛಾಶಕ್ತಿ, ಉದ್ಯೋಗ ಸೃಷ್ಟಿಯ ದೃಢ ಸಂಕಲ್ಪ, ಹೂಡಿಕೆದಾರರನ್ನು ಪ್ರೋತ್ಸಾಹಿಸುವ ಆಡಳಿತಾತ್ಮಕ ನೀತಿಗಳು. ಇದನ್ನು ಶ್ರೀ @narendramodi ಹಾಗೂ ಶ್ರೀ @BSBommai ರವರ ನೇತೃತ್ವದ ನಮ್ಮ ಡಬಲ್ ಎಂಜಿನ್ ಸರ್ಕಾರಗಳು ಮಾಡುತ್ತಿವೆ' ಎಂದು ಹೇಳಿದೆ.
ಏರ್ ಶೋ ಉದ್ಘಾಟನೆ; ಸೋಮವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ 2023 ಉದ್ಘಾಟಿಸಿದ್ದರು. ಈ ಬಗ್ಗೆ ಮಾತನಾಡಿದ್ದ ಎಚ್. ಡಿ. ಕುಮಾರಸ್ವಾಮಿ, "ಏರ್ ಶೋ ಬಡತನ ನಿವಾರಿಸುವ ಕಾರ್ಯಕ್ರಮನಾ?. ಏರ್‌ಶೋಗೆ ಬರುವುದರಿಂದ ಬಡತನ ನಿವಾರಣೆ ಆಗುತ್ತದೆಯೇ?" ಎಂದು ಪ್ರಶ್ನಿಸಿದ್ದರು.
ಬಡತನ ನಿರ್ಮೂಲನೆಗೆ ಬೇಕಾಗಿರುವುದು ನಿಸ್ವಾರ್ಥ ಇಚ್ಛಾಶಕ್ತಿ, ಉದ್ಯೋಗ ಸೃಷ್ಟಿಯ ದೃಢ ಸಂಕಲ್ಪ, ಹೂಡಿಕೆದಾರರನ್ನು ಪ್ರೋತ್ಸಾಹಿಸುವ ಆಡಳಿತಾತ್ಮಕ ನೀತಿಗಳು. ಇದನ್ನು ಶ್ರೀ @narendramodi ಹಾಗೂ ಶ್ರೀ @BSBommaiರವರ ನೇತೃತ್ವದ ನಮ್ಮ ಡಬಲ್ ಎಂಜಿನ್ ಸರ್ಕಾರಗಳು ಮಾಡುತ್ತಿವೆ.#BJPYeBharavase
— BJP Karnataka (@BJP4Karnataka) February 16, 2023
2/2
"ಚುನಾವಣೆ ನೆಪದಲ್ಲಿ ಜನರ ದಾರಿ ತಪ್ಪಿಸಲು ಪ್ರಯತ್ನ ನಡೆಸಿದ್ದಾರೆ. ಇದು 14ನೇ ಅವೃತ್ತಿಯ ಏರ್ ಶೋ ಆಗಿದೆ. ಇದನ್ನು ಹಿಂದೆ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ್ದರಾ?" ಎಂದು ಕುಮಾರಸ್ವಾಮಿ ಕೇಳಿದ್ದರು.
ಬಿಜೆಪಿ ತನ್ನ ಟ್ವೀಟ್‌ನಲ್ಲಿ ಈ ಬಾರಿಯ ಏರೋ ಇಂಡಿಯಾದಲ್ಲಿ 80000 ಕೋಟಿ ರೂ. ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬ ಪತ್ರಿಕಾ ವರದಿಯನ್ನು ಉಲ್ಲೇಖಿಸಿದೆ.
ಈ ಬಾರಿಯ ಏರೋ ಇಂಡಿಯಾ ಪ್ರದರ್ಶನದಲ್ಲಿ ಕಳೆದ ಬಾರಿಗಿಂತ 25000 ಕೋಟಿ ಅಧಿಕ ಮೊತ್ತದ ಒಪ್ಪಂದ ನಡೆದಿದೆ. 201 ಒಪ್ಪಂದಗಳು ನಡೆದಿದ್ದು, 53 ಘೋಷಣೆಗಳಾಗಿವೆ.












Click it and Unblock the Notifications