ಕುಮಾರಸ್ವಾಮಿ ಕಣ್ಣೀರು ಸುರಿಸಿದ್ದನ್ನು ನಟನೆ ಎಂದ ಬಿಜೆಪಿ

ಬೆಂಗಳೂರು, ಜುಲೈ 15: ಕುಮಾರಸ್ವಾಮಿ ಅವರು ನಿನ್ನೆ ನಡೆದ ಜೆಡಿಎಸ್ ಪಕ್ಷದ ಕಾರ್ಯಕ್ರಮದಲ್ಲಿ ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದನ್ನು ಬಿಜೆಪಿ ಕಾಲೆಳೆದಿದೆ.

ಟ್ವೀಟರ್‌ನಲ್ಲಿ ಕುಮಾರಸ್ವಾಮಿ ಅವರು ಅಳುತ್ತಿರುವ ವಿಡಿಯೋ ಪ್ರಕಟಿಸಿರುವ ರಾಜ್ಯ ಬಿಜೆಪಿ, ಕುಮಾರಸ್ವಾಮಿ ಅವರು ಅತ್ಯುತ್ತಮ ನಟ, ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಬೇಕು ಎಂದು ಹೇಳಿದೆ.

ನಮ್ಮ ದೇಶ ಹಲವು ಅತ್ಯುತ್ತಮ ನಟರನ್ನು ಕೊಡುಗೆಯಾಗಿ ನೀಡಿದೆ. ಹಲವು ನಟರು ತಮ್ಮ ಅತ್ಯುತ್ತಮ ನಟನೆಯಿಂದ ಜನರ ಮನವನ್ನು ಗೆದ್ದಿದ್ದಾರೆ. ಕುಮಾರಸ್ವಾಮಿ ಅವರು ಕೂಡಾ ಅಂತಹಾ ಒಬ್ಬ ಅತ್ಯದ್ಭುತ ನಟರಲ್ಲಿ ಒಬ್ಬರು ಎಂದು ಬಿಜೆಪಿ ಕಾಲೆಳೆದಿದೆ.

BJP tweet about Kumaraswamy emotional speech

ಕುಮಾರಸ್ವಾಮಿ ಕಾಲಕಾಲಕ್ಕೆ ತಮ್ಮ ಸುಳ್ಳು ಕಣ್ಣೀರಿನಿಂದ, ನಟನಾ ಕೌಶಲದಿಂದ ನಾಡಿನ ಜನರನ್ನು ಮೂರ್ಖರನ್ನಾಗಿ ಮಾಡುತ್ತಲೇ ಇರುತ್ತಾರೆ ಎಂದು ಬಿಜೆಪಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹೇಳಿದೆ.

ಈ ವಿಡಿಯೋ ಅಪ್‌ಲೋಡ್ ಆದ ಒಂದು ಗಂಟೆಯಲ್ಲಿ 256 ರೀಟ್ವೀಟ್ ಆಗಿದ್ದು, 623 ಜನ ಲೈಕ್ ಮಾಡಿದ್ದಾರೆ. ಈ ಟ್ವೀಟ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಲವರು ಬಿಜೆಪಿಪರ ಪ್ರತಿಕ್ರಿಸಿದ್ದರೆ, ಹಲವರು ವಿರೋಧಿಸಿ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+