'ಆಪ್ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದ ಬಿಜೆಪಿ ಈಗ ಉಚಿತ ವಿದ್ಯುತ್ ಘೋಷಿಸಿದೆ'
ಬೆಂಗಳೂರು, ಏ.23: ಇದುವರೆಗೆ ಆಪ್ ನ ಉಚಿತ ವಿದ್ಯುತ್ ಯೋಜನೆಯ ಬಗ್ಗೆ ಹಗುರವಾಗಿ ಮಾತನಾಡಿತ್ತಿದ್ದ ಬಿಜೆಪಿ, ಇದೇ ತರಹ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲು ಮುಂದಾಗಿದೆ ಮತ್ತು ಎಸ್ಸಿ/ಎಸ್.ಟಿ. ವರ್ಗದವರಿಗೆ 75 ಯೂನಿಟ್ ವಿದ್ಯುತ್ ಉಚಿತ ಎಂದು ಘೋಷಿಸಿದೆ ಎಂದು ಅಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜರಿವಾಲ್ ಅವರ ಇತ್ತೀಚಿನ ಭೇಟಿ ರಾಜ್ಯದ ಮೂರೂ ರಾಜಕೀಯ ಪಕ್ಷಗಳನ್ನು ನಿದ್ದೆಯಿಂದ ಎಬ್ಬಿಸಿದಂತಿದೆ ಎಂದು ಅವರು ಶನಿವಾರ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.
ಕೇಜರಿವಾಲ್ ಅವರ ಬೆಂಗಳೂರಿನ ಭೇಟಿಯ ವಿಚಾರ ಕಿವಿಗೆ ಬೀಳುತ್ತಲೇ, ಇದುವರೆಗೆ ಆಪ್ ನ ಉಚಿತ ವಿದ್ಯುತ್ ಯೋಜನೆಯ ಬಗ್ಗೆ ಹಗುರವಾಗಿ ಮಾತನಾಡಿತ್ತಿದ್ದ ಬಿಜೆಪಿ, ಇದೇ ತರಹ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲು ಮುಂದಾಗಿದೆ ಮತ್ತು ಎಸ್.ಸಿ./ಎಸ್.ಟಿ. ವರ್ಗದವರಿಗೆ 75 ಯೂನಿಟ್ ವಿದ್ಯುತ್ ಉಚಿತ ಎಂದು ಘೋಷಿಸಿದೆ.

ಬಿಜೆಪಿಯವರು ತಮ್ಮ 40% ಪಡೆಯುವುದನ್ನು ನಿಲ್ಲಿಸಿದ್ದೇ ಆದರೆ ನಾಡಿನ ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ ನೀಡಬಹುದು.
ಆಪ್ ಒಂದು ದೊಡ್ಡ ಪಕ್ಷ, ಅವರು ರಾಜಕೀಯದಲ್ಲಿ ಹಲವಾರು ವರ್ಷಗಳಿಂದ ಇದ್ದಾರೆ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ, ಅವರು ರಾಜ್ಯದಲ್ಲಿ ಚುನಾವಣೆಯಲ್ಲಿ ಇನ್ನೂ ಭಾಗವಹಿಸಿಲ್ಲ. ಆದರೆ ಇಂದು ಕೇಜರಿವಾಲ್ ಬಂದು "ನಾವು ಚುನಾವಣೆಯಲ್ಲಿ ಭಾಗವಹಿಸುತ್ತೇವೆ ಎಂದು ಹೇಳಿದ್ದಾರೆ; ಅವರು ಭಾಗವಹಿಸಲಿ, ಜನರು ನಿರ್ಧಾರ ಮಾಡುತ್ತಾರೆ" ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. "ನಾವು ಈಗ ಹುಟ್ಟಿರುವ ಸಣ್ಣ ಪಕ್ಷ ಆದರೆ ಪ್ರಾಮಾಣಿಕ ಜನರು ಒಟ್ಟು ಸೇರಿದರೆ ಕಡಿಮೆ ಸಮಯದಲ್ಲಿ ಎಷ್ಟೆಲ್ಲಾ ಮಾಡಬಹುದು ಎಂಬುದನ್ನು ಆಗಲೇ ಮಾಡಿ ತೋರಿಸಿದ್ದೇವೆ. ಆಪ್ ರಾಜ್ಯದ ಮತ್ತು ದೇಶದ ಜನರಿಗೆ ಹೊಸ ಆಶಾಕಿರಣವಾಗಿ ಹೊರಹೊಮ್ಮುತ್ತಿದೆ. ಕಾಂಗ್ರೆಸ್ ಅತ್ಯಂತ ಹಳೆಯ ಪಕ್ಷ, ಇದರ ಉಪಯುಕ್ತತೆ ಅವಧಿ ಮೀರಿದ್ದು ಜನರಿಗೆ ಇದರ ಮೇಲೆ ವಿಶ್ವಾಸ ಹೋಗಿದೆ, " ಎಂದು ಪೃಥ್ವಿರೆಡ್ಡಿ ಹೇಳಿದರು.

ಕೇಜರಿವಾಲ್ ಕರ್ನಾಟಕದಲ್ಲಿ ಏನು ಮಾಡಲು ಸಾಧ್ಯ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ''ಸಮಯ ಮತ್ತು ಅವಕಾಶ ನೀಡಿದಾಗಲೂ ಭ್ರಷ್ಟಾಚಾರದ ಬಗ್ಗೆ ಏನೂ ಮಾಡಲು ಆಗಲಿಲ್ಲ ಎಂಬುದನ್ನು ಜೆಡಿಎಸ್ ಒಪ್ಪಿಕೊಂಡಿದೆ. ಆದ್ದರಿಂದ ಅವರು ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಅರವಿಂದ ಅವರಿಗೆ ಏನು ಮಾಡಲು ಸಾಧ್ಯ ಎಂಬುದನ್ನು ತೋರಿಸಲು ಅವಕಾಶ ನೀಡಬೇಕು. ಕೇವಲ ಅರವಿಂದರ ಆಪ್ ಪಕ್ಷ ತಾನು ಚುನಾವಣೆಯಲ್ಲಿ ಹೇಳಿದ್ದನ್ನು ದೆಹಲಿಯಲ್ಲಿ ಮಾಡಿ ತೋರಿಸಿದೆ ಮತ್ತು ಈಗ ಪಂಜಾಬಿನಲ್ಲೂ ಮಾಡುತ್ತಿದೆ. 0% ಎಂಬುದು ಕೇವಲ ಕನಸಲ್ಲ ನನಸು ಎಂಬುದನ್ನು ಸಹ ಜನತೆಗೆ ತೋರಿಸಿಕೊಟ್ಟಿದೆ. ನಮಗೆ ಯಾರು ಯಾರ ಬಿ ಟೀಮ್ ಎಂಬ ಚರ್ಚೆ ನಿರರ್ಥಕ. ಆಪ್ ಕರ್ನಾಟಕದ ಎ ಟೀಮ್ ಎನ್ನುವುದು ಮುಖ್ಯ," ಎಂದರು
"ಈ ಮೂರು ಪಕ್ಷದಲ್ಲಿಯೂ ಕೆಲವು ಒಳ್ಳೆಯವರು ಇದ್ದಾರೆ. ಅರವಿಂದ ಅವರು ಹೇಳಿದಂತೆ ಒಳ್ಳೆಯ ಮತ್ತು ಸಮಾನ ಮನಸ್ಕರು ಮುಂದೆ ಬಂದು ಆಪ್ ಪಕ್ಷ ಸೇರಿದರೆ ರಾಜಕೀಯ ಬದಲಾವಣೆ ಸಾಧ್ಯ ಮತ್ತು ರಾಜ್ಯದ ಜನತೆಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಬಹುದು," ಎಂದು ಪೃಥ್ವಿರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.












Click it and Unblock the Notifications