ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಖಂಡಿಸಿ ಸುವರ್ಣಸೌಧದಲ್ಲಿ ಬಿಜೆಪಿ ಪ್ರತಿಭಟನೆ
ಬೆಳಗಾವಿ, ಡಿಸೆಂಬರ್ 12: ಪಂಚಮಸಾಲಿ ಲಿಂಗಾಯತ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ನಡೆಸಿದ್ದನ್ನು ಖಂಡಿಸಿ ರಾಜ್ಯ ಬಿಜೆಪಿ ವತಿಯಿಂದ ಇಂದು ಬೆಳಗಾವಿ ಸುವರ್ಣಸೌಧದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಆರಂಭವಾದ ಪ್ರತಿಭಟನೆ ಸಂದರ್ಭದಲ್ಲಿ ರಾಜ್ಯದ ಮಾಜಿ ಸಚಿವರು, ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಉಪಸ್ಥಿತರಿದ್ದರು.

ಮೀಸಲಾತಿ ನೀಡದ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ, ಪ್ರಾಣ ಕೊಟ್ಟೇವು ಮೀಸಲಾತಿ ಬಿಡೆವು, ಹೋರಾಟಗಾರರ ಮೇಲೆ ಹಲ್ಲೆ ನಡೆಸಿದ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಇವೇ ಮೊದಲಾದ ಭಿತ್ತಿಪತ್ರಗಳನ್ನು ಹಿಡಿದಿದ್ದ ಶಾಸಕರು, ವಿಧಾನಪರಿಷತ್ ಸದಸ್ಯರು ಸರಕಾರದ ಧೋರಣೆಯನ್ನು ಖಂಡಿಸಿ ವಿವಿಧ ಘೋಷಣೆಗಳನ್ನು ಕೂಗಿದರು
ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಮಾತನಾಡಿ, ಪಂಚಮಸಾಲಿ ಸಮಾಜದ ನಾಯಕರ ಮೇಲೆ ಲಾಠಿ ಪ್ರಹಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪಂಚಮಸಾಲಿಗಳ ಕ್ಷಮೆ ಕೇಳಬೇಕು. ಮೀಸಲಾತಿ ಬಗ್ಗೆ ಸಮಾಜದ ಡಿಮ್ಯಾಂಡ್ ಇದೆ, ಇದರ ಬಗ್ಗೆ ಚರ್ಚೆ ಮಾಡೋಣ ಅಂತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ ಆದರೆ, ಇದು ಒಂದು ಭಾಗ ಆದರೆ, ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಮಾಜದ ಮುಖಂಡರು, ಕಾರ್ಯಕರ್ತರು ಬಂದು ಹೋರಾಟ ಮಾಡೋವಾಗ ನಡುವಳಿಕೆ ಹೇಗೆ ಇರಬೇಕು,ಸರ್ಕಾರದ ಮುಖ್ಯಮಂತ್ರಿಗಳ ನಡುವಳಿಕೆ ಹೇಗೆ ಇರಬೇಕು ಎಂದು ಪ್ರಶ್ನಿಸಿದ್ದಾರೆ.
ಪಂಚಮಸಾಲಿ ಲಿಂಗಾಯತ ಹೋರಾಟಗಾರರ ಹೋರಾಟದಕ್ಕ ಹತ್ತಿಕ್ಕುವ ಕೆಲಸ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಮ್ಮಕ್ಕಿನಿಂದ ಮೊನ್ನೆದಿನ ಆಗಿದೆ. ಲಾಠಿ ಪ್ರಹಾರ ಮಾಡಿ ನೂರಾರು ಜನಕ್ಕೆ ಹೊಡೆದು ಬೆದರಿಕೆ, ಷಡ್ಯಂತ್ರ ಕುತಂತ್ರ ಮಾಡಿದ್ದು ಅಕ್ಷಮ್ಯ ಅಪರಾಧ. ನಾನು ರಾಜ್ಯದ ಮುಖ್ಯಮಂತ್ರಿಗಳಿಗೆ ಕೇಳಲು ಇಚ್ಛೆಪಡುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಸಿದ್ದರಾಮಯ್ಯಗೆ ವಿಶ್ವಾಸ ಇದೇಯೋ ಇಲ್ವೊ? ಎಂದು ಪ್ರಶ್ನಿಸಿದ ಅವರು, ಕೇವಲ ಇದು ಪಂಚಮಸಾಲಿ ಸಮಾಜದ ಪ್ರಶ್ನೆಯಲ್ಲ,ಇದನ್ನ ನಾಡಿನ ಜನತೆ ಪ್ರಶ್ನೆ ಇದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಇದ್ದಿದ್ದೆ ಆಗಿದ್ದರೇ. ಅವರ ಮನವಿ ಸ್ವೀಕರಿಬಹುದಿತ್ತು. ಪಂಚಮಸಾಲಿ ಸಮಾಜದ ಅಹವಾಲು ಸ್ವೀಕಾರ ಮಾಡಬೇಕಿತ್ತು, ಸರ್ಕಾರ ಪೊಲೀಸರನ್ನ ದುರುಪಯೋಗ ಮಾಡಿಕೊಂಡು ಲಾಠಿ ಪ್ರಹಾರ ಮಾಡಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು ಹಾಗೂ ದರ್ಪದಿಂದ ಮೆರೆದ ಅಧಿಕಾರಿಗಳ ಸಸ್ಪೆಂಡ್ ಮಾಡಬೇಕೆಂದು ವಿಜಯೇಂದ್ರ ಆಗ್ರಹಿಸಿದರು.
ಪಂಚಮಸಾಲಿ ಹೋರಾಟ ಕುರಿತು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ಎರಡು ನಾಲಿಗೆ ಸರ್ಕಾರ. ಭಾಷಣದಲ್ಲಿ ಬಸವಣ್ಣನವರು ವಚನಗಳು, ಕಾರ್ಯರೂಪದಲ್ಲಿ ಅನುಯಾಯಿಗಳ ಮೇಲೆ ಲಾಠಿ ಏಟು ಹಾಕಿದ್ದಾರೆ. ನಮ್ಮ ಸರ್ಕಾರದಲ್ಲಿ ಲಿಂಗಾಯತ ಹೋರಾಟ ನಾವು ತಡೆದಿಲ್ಲ, ಸಣ್ಣ ಗಲಾಟೆ ಆಗದಂತೆ ಕ್ರಮವಹಿಸಿದ್ದೇವೆ.
ಅಮಾಯಕ ಲಿಂಗಾಯತ ಕಾರ್ಯಕರ್ತರು ಮೇಲೆ ಹೀನಾಯವಾಗಿ ಹಲ್ಲೆ ಮಾಡಲಾಗಿದೆ. ಇದೊಂದ ಅಕ್ಷಮ್ಯ ಅಪರಾಧ, ಇದುವರೆಗೆ ಯಾರು ಲಿಂಗಾಯತರ ಕೈ ಎತ್ತಿಲ್ಲ ಮೊದಲ ಬಾರಿಗೆ ಸಿದ್ದರಾಮಯ್ಯ ಕೈ ಎತ್ತಿದ್ದಾರೆ.
ರಾಜ್ಯಾಧ್ಯಕ್ಷ, ನಾರಾಯಣರಾವ್ ಸ್ವಾಮೀಜಿ ಸೇರಿ ಹಲ್ಲೆಗೊಳಗಾದವರನ್ನ ನೋಡೋಕೆ ಹೊರಟಿದ್ವಿ. ಈಗ ಏಕಾಏಕಿ ಅವರನ್ನ ಶಿಪ್ಪಿಂಗ್ ಮಾಡಿದ್ದಾರೆ. ಎಲ್ಲಿ ತೆಗೆದುಕೊಂಡು ಹೋಗಿದ್ದಾರೆ ಅದೂ ಗೊತ್ತಿಲ್ಲ. ಹಲ್ಲೆಗೊಳಗಾದವರನ್ನ ನೋಡಲು ಅವಕಾಶ ಇಲ್ಲ ಎಂದು ಹೇಳಿದರು.












Click it and Unblock the Notifications